ಪಾಕಿಸ್ತಾನ:ಪಾಕಿಸ್ತಾನದಲ್ಲಿ 2024 ರ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯ ಸಮಯದಲ್ಲಿ ಭೂಕಂಪ ಸಂಭವಿಸಿದ್ದು, ಜನರು ತತ್ತರಿಸಿದ್ದಾರೆ. ಶನಿವಾರ 4.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾತ್ರಿ 11 ಗಂಟೆ ಸುಮಾರಿಗೆ ಹಲವೆಡೆ ಹಠಾತ್ ವಿದ್ಯುತ್ ವ್ಯತ್ಯಯ ಉಂಟಾಯಿತು. ಬಾಗಿಲುಗಳು ಅಲುಗಾಡಲು ಪ್ರಾರಂಭಿಸಿದಾಗ, ಜನರು ಭೂಕಂಪ ಸಂಭವಿಸಿದೆ ಎಂಬುದನ್ನು ಅರಿತುಕೊಂಡಿದ್ದಾರೆ.
ಕಂಪನದ ಅಬ್ಬರ ಜೋರಾಗಿದ್ದು, ಜನರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇಷ್ಟೇ ಅಲ್ಲ, ಮತ ಎಣಿಕೆಯಿಂದಾಗಿ ರಾತ್ರಿ ಸುದ್ದಿವಾಹಿನಿಗಳ ಲೈವ್ ಶೋ ನಡೆಯುತ್ತಿದ್ದು ಅದರಲ್ಲಿ ಕುಳಿತಿದ್ದ ಪತ್ರಕರ್ತರು, ತಜ್ಞರ ಪ್ಯಾನೆಲ್​​​ಗೆ ಕೂಡ ಭೂಕಂಪದ ಅನುಭವ ಗಮನಕ್ಕೆ ಬಂದಿದ್ದು, ವಿಡಿಯೋ ಕೂಡ ಔಟ್ ಆಗಿದೆ.
ವಿಡಿಯೋ ನೋಡಿ…ಭೂಕಂಪದ ಕಂಪನದಿಂದ ಪತ್ರಕರ್ತರು ಮತ್ತು ತಜ್ಞರು ಹೇಗೆ ನಡುಗುತ್ತಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.
https://twitter.com/attalkhan786/status/1756458451901808912
ಪಾಕಿಸ್ತಾನದ ಹವಾಮಾನ ಇಲಾಖೆ (ಪಿಎಂಡಿ) ವರದಿಯ ಪ್ರಕಾರ, ಭೂಕಂಪದ ಕೇಂದ್ರಬಿಂದುವು ಹಿಂದೂಕುಶ್ ಪ್ರದೇಶದಲ್ಲಿ ಭೂಮಿಯಿಂದ ಸುಮಾರು 142 ಕಿಲೋಮೀಟರ್ ಆಳದಲ್ಲಿದೆ.
According to the#PakistanMeteorological Department, a 4.9 magnitude#earthquakewas reported in Islamabad & its surrounding areas on Saturday night.
The quakes were felt in Peshawar, Swat, Chitral, Lower Di & surrounding areas.https://t.co/ieUKzS0P1epic.twitter.com/nQMIuzVVDB
— ⚡️🌎 World News 🌐⚡️ (@ferozwala)February 11, 2024

ಭಯದಿಂದ ಕಿರುಚಿದ ಜನರುಸ್ವಾತ್ ಮತ್ತು ಚಿತ್ರಾಲ್‌ನಲ್ಲಿ ಭೂಕಂಪನವು ತುಂಬಾ ಪ್ರಬಲವಾಗಿದೆ ಎಂದು ವ್ಯಕ್ತಿಯೊಬ್ಬರು ಪತ್ರಕರ್ತರಿಗೆ ತಿಳಿಸಿದ್ದಾರೆ. ರಾತ್ರಿಯ ಸಮಯ ಮತ್ತು ತುಂಬಾ ಚಳಿಯಾಗಿತ್ತು. ಹೊರಗೆ ಚುನಾವಣಾ ವಾತಾವರಣ ಇದ್ದ ಕಾರಣ ರಾತ್ರಿ ಊಟ ಮಾಡಿ ಮಲಗಲು ರೆಡಿಯಾಗಿದ್ದೆವು. ಇದ್ದಕ್ಕಿದ್ದಂತೆ ಅಡುಗೆಮನೆಯಲ್ಲಿ ಪಾತ್ರೆಗಳು ಬಿದ್ದವು. ನಾವೆಲ್ಲಾ ಬೆಕ್ಕು ಇರಬಹುದು ಎಂದು ಭಾವಿಸಿದೆವು. ಆದರೆ ದೀಪಗಳು ಕೂಡ ಆಫ್ ಆದವು ಎಂಬ ಮಾಹಿತಿ ನೀಡಿದ್ದಾರೆ.
ಜನರ ಸದ್ದು ಕೇಳಿದಾಗ ಭೂಕಂಪ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಜನರು, ಭೂಕಂಪ ಸಂಭವಿಸಿದೆ, ಹೊರಬನ್ನಿ ಎಂದು ಕೂಗುತ್ತಿದ್ದರು. ಹಲವೆಡೆ ಮನೆ ಬಿದ್ದಿರುವ ಬಗ್ಗೆಯೂ ವರದಿಯಾಗಿದೆ. ಕಳೆದ ತಿಂಗಳು ಸಹ ಇದೇ ರೀತಿ ಭೂಕಂಪ ಸಂಭವಿಸಿತ್ತು.
ಪರೀಕ್ಷೆಗೆಂದು ತೆರಳಿದ ಪಿಯುಸಿ ವಿದ್ಯಾರ್ಥಿನಿ 24 ಗಂಟೆಗಳ ಬಳಿಕ ಮಾವಿನ ತೋಟದಲ್ಲಿ ಶವವಾಗಿ ಪತ್ತೆ!

ಈ ರಾಜ್ಯಗಳಿಗೆ ಮಳೆ ಎಚ್ಚರಿಕೆ, ರಾಷ್ಟ್ರ ರಾಜಧಾನಿಯಲ್ಲಿ ಹೇಗಿದೆ ಹವಾಮಾನ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
