ಚಂಡೀಗಡ:ಭಾರತವು ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಪಂಜಾಬಿನ ಹೊಲವೊಂದರಲ್ಲಿ ಪಾಕಿಸ್ತಾನದ ಬಾವುಟಗಳು ಮತ್ತು ಐ ಲವ್​ ಪಾಕಿಸ್ತಾನ್​ ಎಂಬ ಬರಹ-ಚಿತ್ರಗಳುಳ್ಳ ಬಲೂನುಗಳು ಸಿಕ್ಕಿವೆ. ಇಂದು ಮಧ್ಯಾಹ್ನ ದಿಢೀರನೇ ಪ್ರತ್ಯಕ್ಷವಾದ ಈ ಬಲೂನುಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಂಜಾಬಿನ ರೂಪನಗರ ಜಿಲ್ಲೆಯ ಸಾಂಡೋಯ ಗ್ರಾಮದಲ್ಲಿ ಈ ಪ್ರಸಂಗ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. “ಬಲೂನುಗಳು ಹತ್ತಿರದ ಜಾಗದಿಂದ ಹಾರಿಕೊಂಡು ಬಂದಿರುವ ಹಾಗಿದೆ. ಎಲ್ಲಾ ಆ್ಯಂಗಲ್​ಗಳಲ್ಲೂ ತನಿಖೆ ನಡೆಸುತ್ತಿದ್ದೇವೆ” ಎಂದು ರೂಪ್​ನಗರದ ಎಸ್​​ಎಸ್ಪಿ ಅಖಿಲ್ ಚೌಧರಿ ಹೇಳಿದ್ದಾರೆ.
ಇದನ್ನೂ ಓದಿ:ಓಲಾ ಎಲೆಕ್ಟ್ರಿಕ್​ ಸ್ಕೂಟರ್ ಅನಾವರಣ; ಬೆಲೆ, ಲಭ್ಯತೆ ವಿವರ ಇಲ್ಲಿದೆ
ನಿನ್ನೆಯ ದಿನ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಭಂಗ್​ಲೇದಾ ಗ್ರಾಮದಲ್ಲಿ ಕೂಡ ಈ ರೀತಿಯ ಬಲೂನುಗಳು ಸಿಕ್ಕಿದ್ದವು ಎಂದು ವರದಿಯಾಗಿತ್ತು. ನಿವಾಸಿಯೊಬ್ಬನ ಮನೆಯಂಗಳದಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದ ಬಲೂನುಗಳ ಬಗ್ಗೆ ಪಂಚಾಯಿತಿ ಪ್ರಧಾನರಿಗೆ ತಿಳಿಸಲಾಯಿತು. ದೂರು ನೀಡಲಾಗಿ, ಬಲೂನುಗಳನ್ನು ವಶಕ್ಕೆ ತೆಗೆದುಕೊಂಡ ಮಂಡಿ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
VIDEO | ಟೀಂ ಇಂಡಿಯ ಸೇರಲು ಮೈದಾನಕ್ಕೆ ಬಂದ ಅಭಿಮಾನಿ?!

ಜಾಕ್​​ಲೀನ್ ಫರ್ನಾಂಡಿಸ್​​, ಸಚಿನ್ ತೆಂಡೂಲ್ಕರ್…. ಸೆಲೆಬ್ರಿಟಿಗಳ ಸ್ವಾತಂತ್ರ್ಯ ದಿನಾಚರಣೆಯ ಝಲಕ್​ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 1 =
Remember me
