ಉತ್ತರಕಾಶಿ:ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಕಾಡೊಂದರಲ್ಲಿ ಪಾಕಿಸ್ತಾನದ ಧ್ವಜ ಮತ್ತು ತಿಳಿ ಹಸಿರು ಬಣ್ಣದ ಬಲೂನ್‌ಗಳಿಗೆ ಸುತ್ತಿದ ಎರಡು ಬ್ಯಾನರ್‌ಗಳು ಪತ್ತೆಯಾಗಿವೆ. ಪ್ರಕರಣ ಬೆಳಕಿಗೆ ನಂತರ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಅಲರ್ಟ್ ಆಗಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಎರಡು ಬ್ಯಾನರ್​ ಪತ್ತೆಯಾಗಿದ್ದು ಒಂದು ಉರ್ದು ಭಾಷೆಯಲ್ಲಿದ್ದರೆ, ಇನ್ನೊಂದರಲ್ಲಿ “ಎಲ್‌ಬಿಎ ಕ್ಯಾಬಿನೆಟ್ ಲಾಹೋರ್ ಬಾರ್ ಅಸೋಸಿಯೇಷನ್” ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ ಎಂದು ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅರ್ಪಣ್ ಯದುವಂಶಿ ಹೇಳಿದ್ದಾರೆ. ಶುಕ್ರವಾರ ತುಲ್ಯಾಡ್​ ಗ್ರಾಮದ ಅರಣ್ಯದಲ್ಲಿ ಬಲೂನ್‌ಗಳಿಗೆ ಕಟ್ಟಿದ್ದ ಧ್ವಜ ಮತ್ತು ಬ್ಯಾನರ್‌ಗಳು ಪತ್ತೆಯಾಗಿವೆ. ನಾವು ಕೇಂದ್ರ ತನಿಖಾ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಈ ಸಂಘಟನೆಯ ಪೂರ್ವಾಒರ ತನಿಖೆಯ ನಂತರವೇ ತಿಳಿದು ಬರಬೇಕಿದೆ” ಎಂದು ಎಸ್ಪಿ ಹೇಳಿದರು.
ಈ ಪ್ರಕರಣದ ಕುರಿತಾಗಿ ತುಲ್ಯಾಡ್​ ಗ್ರಾಮದ ನಿವಾಸಿಗಳು ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಧರ್ಸು ಪೊಲೀಸ್ ಠಾಣೆ ಎಸ್‌ಎಚ್‌ಒ ಕಮಲ್ ಕುಮಾರ್ ಲುಂತಿ ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
