ಇಸ್ಲಾಮಾಬಾದ್​: ನಗದು ಕೊರತೆಯಿರುವ ಪಾಕಿಸ್ತಾನದಲ್ಲಿ ಹಣದುಬ್ಬರದಿಂದ ಬಳಲುತ್ತಿರುವ ಜನಸಾಮಾನ್ಯರಿಗೆ ಒಂದು ಪ್ರಮುಖ ಪರಿಹಾರವಾಗಿ, ಸರ್ಕಾರವು ಈದ್ ಉಲ್ ಅಧಾ (ಬಕ್ರೀದ್​) ಹಬ್ಬದ ಮುನ್ನ ಪೆಟ್ರೋಲ್ ಮತ್ತು ಹೈ-ಸ್ಪೀಡ್ ಡೀಸೆಲ್ (ಎಚ್‌ಎಸ್‌ಡಿ) ಬೆಲೆಗಳನ್ನು ಕ್ರಮವಾಗಿ ಲೀಟರ್‌ಗೆ ರೂ 10.20 ಮತ್ತು ರೂ 2.33 ರಷ್ಟು ಕಡಿತಗೊಳಿಸಿದೆ.
ಶನಿವಾರದಿಂದ ಜಾರಿಗೆ ಬಂದಿರುವ ಈ ದರ ಕಡಿತವು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 258.16 ರೂ.ಗೆ ತಂದಿದ್ದರೆ, ಎಚ್‌ಎಸ್‌ಡಿ ಬೆಲೆಯು ಲೀಟರ್‌ಗೆ 267.89 ರೂ ಆಗಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಸಾಮಾನ್ಯವಾಗಿ ಪ್ರತಿ 15 ದಿನಗಳಿಗೊಮ್ಮೆ ಇಂಧನ ಬೆಲೆಗಳನ್ನು ಪರಿಶೀಲಿಸುವ ಹಣಕಾಸು ವಿಭಾಗವು ಇತ್ತೀಚಿನ ಬೆಲೆ ಕಡಿತಕ್ಕೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಹೊಸ ಬೆಲೆಗಳು ಮುಂದಿನ ಹದಿನೈದು ದಿನಗಳವರೆಗೆ ಅನ್ವಯಿಸುತ್ತವೆ ಎಂದು ಹೇಳಿದೆ.
ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರ (ಓಗ್ರಾ) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ವ್ಯತ್ಯಾಸಗಳ ಆಧಾರದ ಮೇಲೆ ಗ್ರಾಹಕರ ಬೆಲೆಗಳನ್ನು ರೂಪಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪೆಟ್ರೋಲಿಯಂ ಬೆಲೆಗಳನ್ನು ಕಡಿತಗೊಳಿಸುವ ಕ್ರಮವು ಎರಡಂಕಿಯ ಹಣದುಬ್ಬರದಿಂದ ತತ್ತರಿಸಿರುವ ಪಾಕಿಸ್ತಾನಿ ಜನರಿಗೆ ಪ್ರಯೋಜನವನ್ನು ನೀಡುತ್ತದೆ.
ಮೇ 31 ರಂದು ಸರ್ಕಾರವು ಪೆಟ್ರೋಲ್ ಮತ್ತು ಎಚ್‌ಎಸ್‌ಡಿ ಬೆಲೆಯನ್ನು ಕ್ರಮವಾಗಿ ಲೀಟರ್‌ಗೆ ರೂ 4.74 ಮತ್ತು ರೂ 3.86 ರಷ್ಟು ಕಡಿಮೆ ಮಾಡಿತ್ತು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಜಾಗತಿಕ ತೈಲ ಬೆಲೆಯಲ್ಲಿನ ಇಳಿಕೆಯಿಂದಾಗಿ ಕಳೆದ ಒಂದೂವರೆ ತಿಂಗಳಲ್ಲಿ ಇಂಧನ ಬೆಲೆಗಳು ಇಳಿಕೆಯ ಪ್ರವೃತ್ತಿಗೆ ಸಾಕ್ಷಿಯಾಗಿದ್ದು, ಸತತವಾಗಿ ಮೂರು ಬಾರಿ ಇಳಿಕೆಯಾಗಿದೆ ಎಂದು ಅದು ಹೇಳಿದೆ.
ಇದಕ್ಕೂ ಮೊದಲು ಪಾಕ್​ ಪ್ರಧಾನಿ ಶೆಹಬಾಜ್ ಷರೀಫ್ ಅವರು ಕೈಗಾರಿಕೆಗಳಿಗೆ ವಿದ್ಯುತ್ ದರಗಳಲ್ಲಿ ಗಮನಾರ್ಹ ಇಳಿಕೆಯನ್ನು ಘೋಷಿಸಿದ್ದರು, ರಾಷ್ಟ್ರೀಯ ಎಲೆಕ್ಟ್ರಿಕಲ್ ಪವರ್ ರೆಗ್ಯುಲೇಟರಿ ಅಥಾರಿಟಿಯ (ನೆಪ್ರಾ) ಶಿಫಾರಸಿನ ಮೇರೆಗೆ ಈ ಕಡಿತವು ರಫ್ತು ಮತ್ತು ಕೈಗಾರಿಕಾ ಉತ್ಪಾದನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಪ್ರತಿ ಯೂನಿಟ್​ಗೆ 10.69 ರೂ. ಕಡಿತ ಮಾಡಿರುವುದರಿಂದ ಕೈಗಾರಿಕೆ ಮತ್ತು ರಫ್ತು ವಲಯಗಳಿಗೆ ಈಗ ಪ್ರತಿ ಯೂನಿಟ್‌ನ ಹೊಸ ವಿದ್ಯುತ್ ಬೆಲೆ 34.99 ರೂ. ಆಗಿದೆ.
ವಿಂಡ್ ಫಾಲ್ ತೆರಿಗೆ ಕಡಿತ ಮಾಡಿದ ಕೇಂದ್ರ ಸರ್ಕಾರ
ಪಿಎಂ ಕಿಸಾನ್ ಯೋಜನೆಯ ಕಂತಿನ ಹಣ 18ರಂದು ವಾರಾಣಸಿಯಲ್ಲಿ ಬಿಡುಗಡೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 8 =
Remember me
