ನವದೆಹಲಿ:ಸೌಹಾರ್ದತೆಯ ಸಂಕೇತವಾಗಿ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಸಂಸದರಿಗೆ ಮಾವಿನಹಣ್ಣುಗಳನ್ನು ಕಳಿಸಿಕೊಟ್ಟಿದೆ.
ಕಾಂಗ್ರೆಸ್​ ಸಂಸದರಾದ ರಾಹುಲ್​ ಗಾಂಧಿ, ಶಶಿ ತರೂರ್​ ಸಮಾಜವಾದಿ ಪಕ್ಷದ ಸಂಸದರಾದ ಮೊಹಿಬ್ಬುಲ್ಲಾ ನದ್ವಿ, ಜಿಯಾ ಉರ್ ರೆಹಮಾನ್ ಬಾರ್ಕ್, ಅಫ್ಜಲ್ ಅನ್ಸಾರಿ, ಇಕ್ರಾ ಚೌಧರಿ ಮತ್ತು ಕಪಿಲ್ ಸಿಬಲ್​ಗೆ ಭಾರತದಲ್ಲಿರುವ ಪಾಕ್​ ರಾಯಭಾರ ಕಚೇರಿ ಮಾವಿನ ಹಣ್ಣುಗಳನ್ನು ಕಳಿಸಿಕೊಟ್ಟಿದೆ.
1981 ರಲ್ಲಿ, ಪಾಕಿಸ್ತಾನದ ಅಧ್ಯಕ್ಷ ಜಿಯಾ ಉಲ್ ಹಕ್ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಅನ್ವರ್ ರತೌಲ್ ತಳಿಯ ಮಾವಿನ ಹಣ್ಣನ್ನು ಬುಟ್ಟಿಯಲ್ಲಿ ಕಳುಹಿಸಿದ್ದರು. 2015ರ ಈದ್‌ ಹಬ್ಬದ ಸಮಯದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಇತರ ನಾಯಕರಿಗೆ ಮಾವಿನ ಹಣ್ಣುಗಳನ್ನು ಕಳಿಸಿಕೊಟ್ಟಿದ್ದರು. ಇದೀಗ ಪಾಕ್​ ರಾಯಭಾರ ಕಚೇರಿಯು ವಿಪಕ್ಷದ ಸಂಸದರಿಗೆ ಮಾವಿನ ಹಣ್ಣುಗಳನ್ನು ಕಳಿಸಿಕೊಟ್ಟಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen − 3 =
Remember me
