ಶ್ರೀನಗರ:ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ದಾಳಿ ನಡೆಸಿ, ನಾಲ್ವರು ಯೋಧರು ಮತ್ತು ಮೂವರು ನಾಗರಿಕರನ್ನು ಹತ್ಯೆ ಮಾಡಿರುವ ಪಾಕಿಸ್ತಾನಿ ಸೇನೆಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ. ಗಡಿ ನಿಯಂತ್ರಣ ರೇಖೆ ಬಳಿಯಲ್ಲಿರುವ ಪಾಕಿಸ್ತಾನಿ ಬಂಕರ್​ಗಳು ಮತ್ತು ಅಲ್ಲಿನ ಲಾಂಚ್​ ಪ್ಯಾಡ್​ಗಳನ್ನು ಸೇನೆ ಹೊಡೆದುರುಳಿಸಿದೆ.
ಇದನ್ನೂ ಓದಿ:ವಿದ್ಯುತ್ ಬರ ನೀಗಿ ಬೇರೆ ರಾಜ್ಯಗಳಿಗೂ ಸರಬರಾಜು ಮಾಡುವ ಸಾಮರ್ಥ್ಯ ನಮ್ಮ ರಾಜ್ಯಕ್ಕಿದೆ
ಜಮ್ಮು ಕಾಶ್ಮೀರದ ಬಾರಾಮುಲ್ಲಾ, ಕುಪ್ವಾರ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಉರಿ, ನೌಗಾಂವ್​, ತಂಗ್ಧರ್​, ಕೆರನ್​ ಮತ್ತು ಗುರೆಜ್​ನಾದ್ಯಂತ ಹರಡಿರುವ ಪಾಕಿಸ್ತಾನಿ ಬಂಕರ್​ಗಳನ್ನು ಸೇನೆ ಕ್ಷಿಪಣಿಗಳ ಮೂಲಕ ಹೊಡೆದುರುಳಿಸಿದೆ. ಜತೆಯಲ್ಲಿ ಕೆಲವು ಲಾಂಚ್​ ಪ್ಯಾಡ್​ಗಳನ್ನು ಕ್ಷಿಪಣಿಗಳ ಮೂಲಕ ಧ್ವಂಸಗೊಳಿಸಲಾಗಿದೆ. ಇದರ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಈ ದಾಳಿಯಲ್ಲಿ ಕನಿಷ್ಠ 7-8 ಪಾಕ್​ ಸೈನಿಕರು ಮೃತರಾಗಿದ್ದಾರೆ. 10ಕ್ಕೂ ಅಧಿಕ ಯೋಧರು ಗಾಯಾಳುಗಳಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಚಿನ್ನಾಭರಣ ದೋಚುತ್ತಿದ್ದ ಗ್ಯಾಂಗ್ ಕುರಿ, ಮೇಕೆಯನ್ನೂ ಬಿಡ್ತಿರಲಿಲ್ಲ!
ಇದಕ್ಕೂ ಮೊದಲು ಪಾಕಿಸ್ತಾನ ಅನೇಕ ಸ್ಥಳಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ತನ್ನ ಅಟ್ಟಹಾಸ ಮೆರೆದಿತ್ತು. ಬಾರಾಮುಲ್ಲಾ ಜಿಲ್ಲೆಯ ನಾಂಬಲ ಸೆಕ್ಟರ್​ನಲ್ಲಿ ಇಬ್ಬರು ಯೋಧರನ್ನು ಹತ್ಯೆ ಮಾಡಿತ್ತು. ಬಿಎಸ್​ಎಫ್​ನ ಜವಾನ್​ ಒಬ್ಬರನ್ನು ಹತ್ಯೆ ಮಾಡಲಾಗಿತ್ತು. ಒಟ್ಟು ನಾಲ್ವರು ಯೋಧರು ಮತ್ತು ಮೂವರು ನಾಗರಿಕರು ಪಾಕ್​ ಸೇನೆಯಿಂದಾಗಿ ಹುತಾತ್ಮರಾಗಿದ್ದರು. (ಏಜೆನ್ಸೀಸ್​)
2. Another one bites the dust! Enemy penalized heavily for initiating ceasefire violations!pic.twitter.com/PZlX5ix04Q
— PRO Udhampur, Ministry of Defence (@proudhampur)November 13, 2020

ರೋಹಿತ್​ ಆರ್​ಸಿಬಿಯ ನಾಯಕನಾಗಿದ್ದರೆ ಹೀಗೇ ಗೆಲ್ಲುತ್ತಿದ್ದರಾ? ಗೌತಮ್​ ಗಂಭೀರ್​ಗೆ ಆಕಾಶ್​ ಛೋಪ್ರಾ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − four =
Remember me
