ಇಸ್ಲಾಮಾಬಾದ್:ಭಾರತೀಯ ಕುಟುಂಬವೊಂದು ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿತ್ತು. ಈ ವೇಳೆ ಪಾಕಿಸ್ತಾನ ಪ್ರಜೆಯೊಬ್ಬ ಭಾರತೀಯ ಕುಟುಂಬಕ್ಕೆ ನೀಡಿದ ಅತಿಥಿ ಸತ್ಕಾರದ ಹೃದಯಸ್ಪರ್ಶಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಸ್ಲಾಮಾಬಾದ್​​ನಲ್ಲಿ ನಡೆಯಲಿರುವ ಮಗಳ ಟೆನಿಸ್ ಪಂದ್ಯದ ಸಲುವಾಗಿ ಭಾರತೀಯ ಕುಟುಂಬವೊಂದು ಪಾಕಿಸ್ತಾನಕ್ಕೆ ತೆರಳಿತ್ತು. ಈ ವೇಳೆ ದಾರಿ ಲಿಫ್ಟ್​ ಕೇಳಿದ್ದಾರೆ. ಕೂಡಲೇ ಪಾಕಿಸ್ತಾನಿ ಪ್ರಜೆ ತಾಹಿರ್ ಖಾನ್ ಎಂಬಾತ ತನ್ನ ಕಾರಿನಲ್ಲಿ ಲಿಫ್ಟ್​ ನೀಡಿದ್ದಾನೆ. ದಾರಿ ಮಧ್ಯೆ ಇವರು ಭಾರತೀಯರು ಎಂದು ಗೊತ್ತಾಗುತ್ತಿದ್ದಂತೆ ತಾಹಿರ್​ ಖಾನ್​ಗೆ ಸಂತೋಷವಾಗಿದೆ. ಅಷ್ಟೇ ಅಲ್ಲದೆ, ತನ್ನ ಕಚೇರಿಗೆ ಕರೆದುಕೊಂಡು ಹೋಗಿ, ಊಟ ಮಾಡಿಯೇ ತೆರಳಬೇಕು ಎಂದು ಒತ್ತಾಯಮಾಡಿದ್ದಾನೆ.
I want my Indian friends & followers to watch this video. An Indian family who’re visiting Pakistan for his daughter’s tennis match in Islamabad. They met a good friend of mine Tahir Khan & asked for a lift. They’ve shared their experience in the video. This is Pakistan in real✌️pic.twitter.com/S7VBrQawss— Ihtisham Ul Haq (@iihtishamm)November 8, 2022
I want my Indian friends & followers to watch this video. An Indian family who’re visiting Pakistan for his daughter’s tennis match in Islamabad. They met a good friend of mine Tahir Khan & asked for a lift. They’ve shared their experience in the video. This is Pakistan in real✌️pic.twitter.com/S7VBrQawss
ನಂತರ ನೀವು ಹೈದರಾಬಾದ್ ಬಿರಿಯಾನಿ ಸೇವಿಸಿರುತ್ತೀರಿ. ಇದೀಗ ನಾನು ಕೊಡಿಸುವ ಬಿರಿಯಾನಿ ಸೇವಿಸಿ ಎಂದು ಹೇಳಿದ್ದಾನೆ. ನಂತರ ಸಣ್ಣ ಔತಣ ಕೂಟವನ್ನೂ ಏರ್ಪಡಿಸಿ ಬೀಳ್ಕೊಟ್ಟಿದ್ದಾನೆ. ಈ ವಿಡಿಯೋವನ್ನು ಇಹ್ತಿಶಾಮ್ ಉಲ್ ಹಕ್ ಎಂಬ ಪಾಕಿಸ್ತಾನಿ ಪತ್ರಕರ್ತ ತನ್ನ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಜತೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಬಾರತೀಯ ಕುಟುಂಬಕ್ಕೆ ನನ್ನ ಗೆಳೆಯ ತಾಹಿರ್ ಖಾನ್ ಡ್ರಾಪ್ ನೀಡಿದ್ದಾನೆ. ಇದು ನಿಜವಾದ ಪಾಕಿಸ್ತಾನ ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ವಿರಾಟ್ ಕೊಹ್ಲಿಯ ಬಗ್ಗೆ ಚರ್ಚಿಸಿರುವುದು ತಿಳಿಯುತ್ತದೆ. ಟಿ-20 ವಿಶ್ವಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ಸೆಮಿಫೈನಲ್ ಹಂತ ತಲುಪಿದೆ. ಎರಡೂ ಬಲಿಷ್ಠ ತಂಡಗಳಾಗಿದ್ದು, ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ವಿರಾಟ್ ಕೊಹ್ಲಿಯನ್ನು ನಮಗೆ ಕೊಡಿ, ನೀವು ಪ್ರಶಸ್ತಿಯನ್ನು ತೆಗೆದುಕೊಳ್ಳಿ ಎಂದು ತಮಾಷೆಯ ಮಾತುಗಳನ್ನಾಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
