ಇಸ್ಲಾಮಾಬಾದ್:ವಿದೇಶಿ ವಿನಿಮಯ ಸಂಗ್ರಹದ ತೀವ್ರ ಕೊರತೆ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಆಹಾರ ಕೊರತೆ ಉಂಟಾಗಿದ್ದು, ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪಾಕ್​ನಲ್ಲಿ ಆಹಾರ ಹಣದುಬ್ಬರವು ವರ್ಷದಿಂದ ವರ್ಷಕ್ಕೆ ಶೇ. 35.5ರಷ್ಟು ವೇಗವನ್ನು ಹೆಚ್ಚಿಸಿದೆ. ಸಾರಿಗೆ ಬೆಲೆಗಳು ಕೂಡ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಶೇ. 41.2ರಷ್ಟು ಏರಿಕೆಯಾಗಿದೆ. ಜನರು ಗ್ಯಾಸ್ ಸಿಲಿಂಡರ್ ಕೊಳ್ಳಲು ಶಕ್ತಿಯಿಲ್ಲದೆ ಪ್ಲಾಸ್ಟಿಕ್ ಬಲೂನ್​ಗಳಲ್ಲಿ ಎಲ್​ಪಿಜಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ.
ಪಾಕಿಸ್ತಾನದ ವಿನಿಮಯ ಮೀಸಲು 6.7 ಶತಕೋಟಿ ಡಾಲರ್ ಕುಸಿದಿದೆ. ಇದರ ಮಧ್ಯೆ ಚೀನಾ ಕೂಡ ಆ ದೇಶದಲ್ಲಿ ಹೂಡಿಕೆಯನ್ನು ಕಡಿಮೆ ಮಾಡಿದೆ. ನವಂಬರ್​ನಲ್ಲಿ ಪೂರ್ಣಗೊಳ್ಳಬೇಕಿದ್ದ 9ನೇ ಕಾರ್ಯಕ್ರಮದ ಪರಾಮರ್ಶೆಯಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ 1.1 ಶತಕೋಟಿ ಡಾಲರ್ ಐಎಂಎಫ್ ನೆರವಿನ ಕಂತು ಬರುವುದು ಡೋಲಾಯಮಾನ ಆಗಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪಾವತಿ ವೈಫಲ್ಯ ತಗ್ಗಿಸಲು ಪಾಕ್ ಕಸರತ್ತು ನಡೆಸುತ್ತಿರುವಾಗ ಈ ಕ್ರಮ ಉಂಟಾಗಿದೆ. ಜಾಗತಿಕ ಹಣದುಬ್ಬರ , ರಾಜಕೀಯ ಅಸ್ಥಿರತೆ ಮತ್ತು ಜಿಡಿಪಿ ಬೆಳವಣಿಗೆಯಲ್ಲಿ ನಿರಂತರ ಕುಸಿತದಿಂದ ಪಾಕ್ ಆರ್ಥಿಕತೆಯ ಮೇಲೆ ತೀವ್ರ ಹೊಡೆತ ಬಿದ್ದಿದೆ. ಇತ್ತೀಚೆಗೆ ಇಂಧನ ಬಿಕ್ಕಟ್ಟಿನಿಂದ ಪಾರಾಗಲು ಮಾಲ್​ಗಳು ಮತ್ತು ಮಾರುಕಟ್ಟೆಗಳನ್ನು ರಾತ್ರಿ 8.30ಕ್ಕೆ ಮುಚ್ಚಲು ಆದೇಶಿಸಿತ್ತು. ಕೆಲ ದಿನಗಳ ಹಿಂದಷ್ಟೇ ಅಮೆರಿಕದಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯನ್ನು ಸರ್ಕಾರ ಹರಾಜು ಹಾಕಿದೆ.
ಶ್ರೀಲಂಕಾದಲ್ಲೂ ಏರುತ್ತಿದೆ ಬೆಲೆ:ದ್ವೀಪರಾಷ್ಟ್ರ ಶ್ರೀಲಂಕಾ ಕೂಡ ಒಂದು ವರ್ಷದಿಂದ ಏರುತ್ತಿರುವ ಬೆಲೆಗಳೊಂದಿಗೆ ಹೋರಾಡುತ್ತಿದೆ. ಇದು ಏಳು ದಶಕಗಳಲ್ಲಿ ಅದರ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಆಹಾರ ಬೆಲೆಗಳು ಗಗನಮುಖಿಯಾಗಿದೆ. ಕೋವಿಡ್-19 ಸಾಂಕ್ರಾಮಿಕವು ಪ್ರವಾಸೋದ್ಯಮವನ್ನು ನಾಶಪಡಿಸಿದ ನಂತರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿ, ಹೊರ ದೇಶಗಳಲ್ಲಿ ಕೆಲಸ ಮಾಡುವ ನಾಗರಿಕರಿಂದ ಹಣ ರವಾನೆ ನಿಂತು ಹೋಯಿತು. ಯೂಕ್ರೇನ್​ನಲ್ಲಿನ ಯುದ್ಧದಿಂದಾಗಿ ಆಮದು ಬೆಲೆ ಅದರಲ್ಲೂ ಇಂಧನ ಬೆಲೆ ತೀವ್ರಮಟ್ಟದಲ್ಲಿ ಹೆಚ್ಚಾಯಿತು. ಅಧ್ಯಕ್ಷ ಮಹಿಂದ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡುವ ಹೊತ್ತಿಗೆ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿಯು ಚೇತರಿಸಿಕೊಳ್ಳದ ಸ್ಥಿತಿ ತಲುಪಿತ್ತು. ಆಗ ಭಾರತ ನೀಡಿದ ನೆರವಿನಿಂದ ಶ್ರೀಲಂಕಾದ ಪರಿಸ್ಥಿತಿ ಬಿಗಡಾಯಿಸದಿರಲು ನೆರವಾಯಿತು. ಶ್ರೀಲಂಕಾದ ಹಣದುಬ್ಬರ ದರವು 2022ರ ನವೆಂಬರ್​ನಲ್ಲಿ ಶೇ. 61ರಷ್ಟು ಇದ್ದದ್ದು ಡಿಸೆಂಬರ್ ಹೊತ್ತಿಗೆ ಶೇ. 57.2ಕ್ಕೆ ಕಡಿಮೆಯಾಗಿದೆ.
ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ

ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twelve + twelve =
Remember me
