ನವದೆಹಲಿ: ಮಹಾಮಾರಿ ಕರೊನಾ ವೈರಸ್‌ ಯಾರ ದೇಹವನ್ನು ಯಾವ ಮಾಯೆಯಿಂದ ಪ್ರವೇಶಿಸುತ್ತದೆಯೋ ಬಲ್ಲವರಿಲ್ಲ. ಇದೇ ಕಾರಣಕ್ಕೆ ಇದೀಗ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರ ನಿದ್ದೆಯನ್ನೂ ಈ ವೈರಸ್‌ ಕಸಿದುಕೊಂಡುಬಿಟ್ಟಿದೆ.ಕರೊನಾ ಸೋಂಕಿತರೊಬ್ಬರನ್ನು ಈಚೆಗೆ ಭೇಟಿ ಮಾಡಿದ್ದ ಕಾರಣ ತತ್ತರಿಸಿಹೋಗಿರುವ ಇಮ್ರಾನ್‌ ಖಾನ್‌, ಕರೊನಾ ಸೋಂಕಿನ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದು, ವರದಿಯಾಗಿ ಕಾಯುತ್ತಿದ್ದಾರೆ. ಸದ್ಯ ಸ್ವಯಂ ಕ್ವಾರಂಟೈನ್‌ಗೆ ಪ್ರಧಾನಿ ಒಳಗಾಗಿದ್ದಾರೆ. ನಿನ್ನೆ ರಾತ್ರಿ ಸೋಂಕಿಗೆ ಸಂಬಂಧಿಸಿದ ಸ್ಯಾಂಪಲ್‌ಗಳನ್ನು ಪಡೆಯಲಾಗಿದ್ದು, ಇಂದು ರಾತ್ರಿಯವರೆಗೆ ವರದಿ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ.ಇಧಿ ಫೌಂಡೇಶನ್‌ನ ಮುಖ್ಯಸ್ಥ ಹಾಗೂ ಪ್ರಸಿದ್ಧ ಸಮಾಜ ಸೇವಕ ಅಬ್ದುಲ್‌ ಸತ್ತಾರ ಇಧಿ ಅವರ ಪುತ್ರ ಫೈಸಲ್‌ ಅವರನ್ನು ಇಮ್ರಾನ್‌ ಖಾನ್‌ ಈಚೆಗೆ ಭೇಟಿಯಾಗಿದ್ದರು. ಇವರು ಭೇಟಿಯಾಗಿ ಇತ್ತ ಬರುತ್ತಿದ್ದಂತೆಯೇ ಫೈಸಲ್‌ ಅವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಸೋಂಕಿನ ಲಕ್ಷಣಗಳು ಕಳೆದ ವಾರದಿಂದ ಕಾಣಿಸಲು ಶುರುವಾಗಿತ್ತು. ಇದರ ನಡುವೆಯೇ ಏಪ್ರಿಲ್‌ 15ರಂದು ಇಸ್ಲಮಾಬಾದ್‌ನಲ್ಲಿ ಇಮ್ರಾನ್‌ ಖಾನ್‌ ಅವರನ್ನು ಫೈಸಲ್ ಭೇಟಿಯಾಗಿ, ಪ್ರಧಾನಿ ಪರಿಹಾರ ನಿಧಿಗೆ 10 ದಶಲಕ್ಷ ದೇಣಿಗೆ ನೀಡಿದ್ದರು.ಸ್ಯಾಂಪಲ್‌ ನೀಡುವುದಕ್ಕಿಂತ ನಾಲ್ಕು ದಿನದ ಮುನ್ನ ಕೊರೊನಾ ಲಕ್ಷಣಗಳು ಫೈಸಲ್‌ ಅವರಲ್ಲಿ ಕಂಡಿವೆ. ಅದಾದ ನಂತರ ಕೊರೊನಾ ಪಾಸಿಟಿವ್‌ ಇರುವುದು ದೃಢವಾಗಿದೆ ಎಂದು ಅವರ ಮಗ ಸಾಧ್‌ ಹೇಳಿದ್ದಾರೆ. ಸದ್ಯಕ್ಕೆ ಫೈಸಲ್‌ ಇಸ್ಲಮಾಬಾದ್‌ನಲ್ಲಿದ್ದು ಆರೋಗ್ಯದಿಂದ ಇದ್ದಾರೆ ಎನ್ನಲಾಗಿದೆ. ಆದರೆ ಅವರನ್ನು ಭೇಟಿಯಾಗಿರುವ ಇಮ್ರಾನ್‌ ಖಾನ್‌ ಅವರಿಗೆ ಮಾತ್ರ ನಿದ್ದೆಯಿಲ್ಲದಾಗಿದೆ. ನಿಯಮದ ಪ್ರಕಾರ, ಯಾರೇ ಕರೊನಾ ವೈರಸ್‌ ಸೋಂಕಿತರ ಸಂಪರ್ಕಕ್ಕೆ ಬಂದರೆ ಅವರು ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕು. ಈ ಹಿನ್ನೆಲೆಯಲ್ಲಿ, ಇಮ್ರಾನ್ ಖಾನ್‌ ಅವರೂ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಅವರು ಆಡಳಿತವನ್ನು ಹೇಗೆ ನಡೆಸುತ್ತಾರೆ ಎಂಬುದು ತಿಳಿದುಬಂದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ..ಈ ನಡುವೆ ಪಾಕಿಸ್ತಾನದಲ್ಲಿ 9749 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 209 ಮಂದಿ ಮೃತಪಟ್ಟಿದ್ದಾರೆ.(ಏಜೆನ್ಸೀಸ್‌)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × two =
Remember me
