ನವದೆಹಲಿ:ಕೋವಿಡ್​ 19 ಸೋಂಕಿಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದ್ದರೂ ಪಾಕಿಸ್ತಾನ ಮಾತ್ರ ಏನೂ ಆಗಿಯೇ ಇಲ್ಲ ಎಂಬಂತೆ ಬಿಡುಬೀಸಾಗಿ ವರ್ತಿಸುತ್ತಿದೆ. ತನ್ನ ನೆಲವನ್ನು ಸುರಕ್ಷಿತ ಅಡಗುತಾಣವಾಗಿಸಿಕೊಂಡಿರುವ ಉಗ್ರರಿಗೆ ಕುಮ್ಮಕ್ಕು ನೀಡುತ್ತಾ, ಹೆಚ್ಚೆಚ್ಚು ಉಗ್ರರ ತಯಾರಿಕೆಗೆ ಉಗ್ರ ಕಾರ್ಖಾನೆಗಳಿಗೆ ನೆರವು ನೀಡುತ್ತಿದೆ. ಅಲ್ಲಿ ತಯಾರಾದ ಕಿರಾತಕರನ್ನು ಪಾಕ್​ ಆಕ್ರಮಿತ ಕಾಶ್ಮೀರದ ಗಡಿಯಲ್ಲಿರುವ ಲಾಂಚ್​ಪ್ಯಾಡ್​ನಲ್ಲಿ ಜಮಾವಣೆ ಮಾಡುತ್ತಿದೆ.
ಪಾಕ್​ ಆಕ್ರಮಿತ ಕಾಶ್ಮೀರದಲ್ಲಿರುವ 14 ಲಾಂಚ್​ಪ್ಯಾಡ್​ಗಳಲ್ಲಿ ಒಟ್ಟು 450 ಉಗ್ರರು ಇದ್ದು, ಅವರೆಲ್ಲರೂ ಭಾರತದೊಳಗೆ ನುಸುಳುವ ಅವಕಾಶಕ್ಕಾಗಿ ಹೊಂಚು ಹಾಕಿಕೊಂಡು ಕೂತಿದ್ದಾರೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದೀಗ ಲಭ್ಯವಾಗಿರುವ ಗುಪ್ತಚರ ಮಾಹಿತಿ ಪ್ರಕಾರ ಪಾಕಿಸ್ತಾನ ಭಾರತದ ಮೇಲೆ ಕೋವಿಡ್​ ಸಮರ ಸಾರಲು ನಿರ್ಧರಿಸಿದಂತೆ ಇದೆ. ಆದ್ದರಿಂದ, ಕಳೆದೊಂದು ವಾರದಲ್ಲಿ ಈ ಲಾಂಚ್​ಪ್ಯಾಡ್​ಗಳಲ್ಲಿರುವ ಉಗ್ರರ ಸಂಖ್ಯೆಯನ್ನು ಎರಡು ಅಥವಾ ಮೂರು ಪಟ್ಟು ಹೆಚ್ಚಿಸಿದೆ.
ಭಾರತದೊಳಗೆ ನುಸುಳಲು ಹೊಂಚು ಹಾಕಿರುವ 450 ಉಗ್ರರ ಪೈಕಿ 244 ಮಂದಿ ಲಷ್ಕರ್​ ಎ ತೊಯ್ಬಾಕ್ಕೆ ಸೇರಿದವರಾಗಿದ್ದಾರೆ. ಜೈಶ್​ ಎ ಮೊಹಮ್ಮದ್​ ಉಗ್ರ ಸಂಘಟನೆಗೆ ಸೇರಿದ 129 ಮತ್ತು ಹಿಜ್ಬುಲ್​ ಮುಜಾಹಿದ್ದೀನ್​ಗೆ ಸೇರಿ 60 ಹಾಗೂ ಅಲ್​ ಬದರ್​ನಂತ ಸಣ್ಣಪುಟ್ಟ ಉಗ್ರ ಸಂಘಟನೆ ಉಗ್ರರು ಇದರಲ್ಲಿ ಸೇರಿದ್ದಾರೆ ಎಂದು ಗುಪ್ತಚರ ಮಾಹಿತಿ ತಿಳಿಸಿದೆ.
ಶೀಘ್ರದಲ್ಲೇ ಜ್ಯುಬಿಲಿಯೆಂಟ್​ ಕಾರ್ಖಾನೆಯ ಕರೊನಾ ನಂಜಿನ ಮೂಲ ಬಹಿರಂಗ: ಸಚಿವ ಎಸ್​.ಟಿ. ಸೋಮಶೇಖರ್​‘

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − thirteen =
Remember me
