ನೋಯ್ಡಾ:ಪಾಕಿಸ್ತಾನದ ಸೀಮಾ ಹೈದರ್ ಮತ್ತು ಸಚಿನ್ ಮೀನಾ ಪೊಲೀಸ್​​ ಕೇಸ್​​ನಿಂದಾಗಿ ಮನೆಯಲ್ಲಿದ್ದಾರೆ. ಅವರಿಗೆ ಮನೆಯಿಂದ ಹೊರಬರಲು ಅವಕಾಶವಿಲ್ಲ. ಹಾಗಾದರೆ ಅವರು ಮನೆ ಖರ್ಚಿಗೆ ಏನು ಮಾಡುತ್ತಿದ್ದಾರೆ?. ಅವರಿಗೆ ಎಲ್ಲಿಂದ ಹಣ ಬರುತ್ತಿದೆ? ಪ್ರತಿಯೊಬ್ಬರಿಗೂ ಈ ಪ್ರಶ್ನೆ ಖಂಡಿತ ಮೂಡಿರುತ್ತದೆ ಅಲ್ಲವೇ?..ಆದರೆ ಅದಕ್ಕುತ್ತರವನ್ನು ವಕೀಲ ಎ.ಪಿ.ಸಿಂಗ್ ಹೇಳಿದ್ದಾರೆ.
ಸೀಮಾ ಹೈದರ್ ಮತ್ತು ಸಚಿನ್ ಮೀನಾ ಪರಿಸ್ಥಿತಿ ಸದ್ಯ ಕಷ್ಟಕರವಾಗಿದೆ ಎಂದು ವಕೀಲ ಎ.ಪಿ.ಸಿಂಗ್ ಹೇಳಿದ್ದಾರೆ. ಆತನಿಗೆ ಕೆಲವರು ಹಣ ನೀಡಿದ್ದು, ಸದ್ಯ ಅದರಲ್ಲಿ ಜೀವನ ನಡೆಸಲಾಗುತ್ತಿದೆ. ಇನ್ನು ಸಚಿನ್ ಅವರ ತಂದೆ ನೇತ್ರಪಾಲ್ ಅವರು ಮನೆಯ ಖರ್ಚಿಗಾಗಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಚಿನ್ ಅವರ ತಂದೆ ನೇತ್ರಪಾಲ್ ಸಸಿ ಮಾರಾಟಗಾರರಾಗಿ ಕೆಲಸ ನಿರ್ವಹಿಸುತ್ತಿದ್ದು, ಅದರಿಂದ ಮನೆಯ ಖರ್ಚನ್ನು ನಿಭಾಯಿಸುತ್ತಿದ್ದಾರೆ. ಸೀಮಾ ಹಾಗೂ ಸಚಿನ್ ಆದಾಯಕ್ಕಾಗಿ ಇನ್ಸ್ಟಾಗ್ರಾಂ ಖಾತೆ, ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಆದರೆ ಸದ್ಯ ಈ ಎರಡರಿಂದಲೂ ಅವರಿಗೆ ಆದಾಯ ಬರುತ್ತಿಲ್ಲ. ಸದ್ಯದಲ್ಲೇ ಅವರ ಗಳಿಕೆ ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಸೀಮಾ ಹೈದರ್​​ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅವರಿಗೆ ಇನ್​​ಸ್ಟಾಗ್ರಾಂನಲ್ಲಿ 90 ಸಾವಿರ ಅನುಯಾಯಿಗಳಿದ್ದಾರೆ. ಹಾಗಾಗಿ ಅವರು ಪ್ರತಿ ದಿನ ತಮ್ಮ ಖಾತೆಯಲ್ಲಿ ರೀಲ್ಸ್​​​ಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಸೀಮಾ ಅವರ ಹೆಸರಿನಲ್ಲಿ ಅನೇಕ ಇನ್ಸ್ಟಾಗ್ರಾಂ ಖಾತೆಗಳಿದ್ದವು. ಹಾಗಾಗಿ ಅವರಿಗಿಷ್ಟವಾಗುವ ರೀಲ್ಸ್​​​ ಮಾಡುವಂತೆ ಸೀಮಾಗೆ ಸಲಹೆ ನೀಡಲಾಗಿದೆ.
ಲಿಬಿಯಾದಲ್ಲಿ ಭೀಕರ ಪ್ರವಾಹ: ಮರುಭೂಮಿಯಲ್ಲಿ ಬಿರುಗಾಳಿ, 5,300ಕ್ಕೂ ಹೆಚ್ಚು ಸಾವು, 10 ಸಾವಿರ ಮಂದಿ ನಾಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − ten =
Remember me
