ನವದೆಹಲಿ:ಇರಾಕ್ ಮತ್ತು ಸಿರಿಯಾದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಐಸಿಸ್ ಭಯೋತ್ಪಾದಕರು ಸ್ಪೋಟಕಗಳನ್ನು ತುಂಬಿರುವ ಡ್ರೋನ್​ಗಳನ್ನು ಬಳಸುತ್ತಿರುವ ಕ್ರಮದಿಂದ ಪಾಕಿಸ್ತಾನ ಪ್ರೇರೇಪಿತವಾಗಿದ್ದು, ಜಮ್ಮು- ಕಾಶ್ಮೀರದಲ್ಲಿ ಇದೇ ರೀತಿಯಲ್ಲಿ ದಾಳಿಗಳನ್ನು ನಡೆಸಲು ಭಯೋತ್ಪಾದಕರಿಗೆ ತರಬೇತಿ ನೀಡಲು ಪ್ರಾರಂಭಿಸಿದೆ ಎಂದು ಕೆಲ ಮೂಲಗಳಿಂದ ತಿಳಿದುಬಂದಿದೆ.
ಗುಪ್ತಚರ ಮಾಹಿತಿಯ ಪ್ರಕಾರ, ಕಡಿಮೆ ಬೆಲೆಯ ಡ್ರೋನ್​ಗಳಲ್ಲಿ ಬಾಂಬ್​ಗಳನ್ನು ಅಳವಡಿಸಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಪಾಕ್​ನ ಗುಪ್ತಚರ ಸಂಸ್ಥೆ ಐಎಸ್​ಐ ಯೋಜನೆ ರೂಪಿಸಿದೆ. ಈ ದಾಳಿಯ ದೃಶ್ಯಗಳನ್ನು ಡ್ರೋನ್​ಗಳ ಮೂಲಕವೇ ಸೆರೆ ಹಿಡಿದು ತನ್ನ ಉದ್ದೇಶವನ್ನು ಹೆಚ್ಚು ಪ್ರಚಾರ ನಡೆಸಲು ಬಳಸುವ ಕುಬುದ್ಧಿಯನ್ನೂ ಹೊಂದಿದೆ. ಪಾಕ್​ನ ಪಂಜಾಬ್ ಪ್ರಾಂತ್ಯದಲ್ಲಿ ಲಷ್ಕರ್ ಮತ್ತು ಜೈಷ್ ಕಮಾಂಡರ್​ಗಳೊಂದಿಗೆ ಕಳೆದ ಏಪ್ರಿಲ್​ನಲ್ಲಿ ಸಭೆ ನಡೆಸಿದ್ದ ಐಎಸ್​ಐ ಡ್ರೋನ್​ಗಳ ಮೂಲಕ ದಾಳಿ ನಡೆಸುವ ತನ್ನ ಯೋಜನೆಯನ್ನು ಪ್ರಸ್ತಾಪಿಸಿತ್ತು. ಇದಾದ ಬಳಿಕ ಮೇ ತಿಂಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಬ್ರಿಗೇಡ್ ಕೇಂದ್ರ ಕಚೇರಿಯಲ್ಲಿ ಉಗ್ರರ ಜತೆಗೆ ಐಎಸ್​ಐನ ಎರಡನೇ ಸಭೆ ನಡೆದಿದೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ಸುಮಾರು 3 ಕಿ.ಮೀ ವ್ಯಾಪ್ತಿ ಹೊಂದಿರುವ ಹಾಗೂ 5ಕೆ.ಜಿಯಷ್ಟು ಸ್ಪೋಟಕಗಳನ್ನು ಹೊತ್ತೊಯ್ಯಬಲ್ಲ ಡ್ರೋನ್​ಗಳನ್ನು ಬಳಸುವ ಬಗ್ಗೆ ರ್ಚಚಿಸಲಾಗಿದ್ದು, ಇವುಗಳ ಮೂಲಕ ಭದ್ರತಾ ಪಡೆಗಳ ಮೇಲೆ ಮೊದಲು ಸಣ್ಣ ಪ್ರಮಾಣದಲ್ಲಿ ದಾಳಿ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಪಾಕ್ ಕುತಂತ್ರಕ್ಕೆ ಭಾರತವೂ ಸನ್ನದ್ಧ: ಗಡಿ ಸಮೀಪವಿರುವ ಭದ್ರತಾ ಶಿಬಿರಗಳು ಮತ್ತು ಪೋಸ್ಟ್​ಗಳನ್ನು ಗುರಿಯಾಗಿಸಿ ಡ್ರೋನ್​ಗಳ ಮೂಲಕ ಪಾಕ್ ನಡೆಸಬಹುದಾದ ದಾಳಿಗಳನ್ನು ತಡೆಗಟ್ಟುವ ಸಲುವಾಗಿ ಭಾರತವೂ ಸನ್ನದ್ಧವಾಗುತ್ತಿದೆ. ಡ್ರೋನ್​ಗಳನ್ನು ಹೊಡೆದುರುಳಿಸುವ ಕುರಿತು ಸೇನಾ ಪಡೆಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗುತ್ತಿದೆ. ಭಾರತದೊಳಗೆ ಶಸ್ತ್ರಾಸ್ತ್ರ, ಮಾದಕವಸ್ತು ಹಾಗೂ ನಕಲಿ ಕರೆನ್ಸಿಯನ್ನು ಸಾಗಿಸಲು ಪಾಕಿಸ್ತಾನ ಡ್ರೋನ್​ಗಳನ್ನು ಸದ್ಯ ಬಳಕೆ ಮಾಡುತ್ತಿದೆ. ಇಂತಹ ಪ್ರಯತ್ನಗಳು ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಈಗಾಗಲೇ ವರದಿಯಾಗಿವೆ.
ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿ ಅಶಾಂತಿ ಸೃಷ್ಟಿಸಲು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರು ನಡೆಸುತ್ತಿರುವ ಸಂಚುಗಳು ಮತ್ತೊಮ್ಮೆ ಬಹಿರಂಗವಾಗಿವೆ. ಬಾಬ್ರಿ ಕಟ್ಟಡ ಧ್ವಂಸಕ್ಕೆ ಪ್ರತೀಕಾರ ತೀರಿಸಿಕೊಳ್ಳುವಂತೆ ಕರೆ ನೀಡಲಾಗಿದೆ. ಈ ಕುರಿತ ಮಾಹಿತಿ ಇರುವ ಐಸಿಸ್​ನ ‘ವಾಯ್್ಸ ಆಫ್ ಇಂಡಿಯಾ’ಎಂಬ ಡಿಜಿಟಲ್ ನಿಯತಕಾಲಿಕೆಯೊಂದರ ಬಗ್ಗೆ ರಾಷ್ಟ್ರೀಯ ಭದ್ರತಾ ಏಜೆನ್ಸಿಗಳಿಗೆ ಮಾಹಿತಿ ಲಭಿಸಿದೆ. ಅದರಲ್ಲಿ ಅಯೋಧ್ಯೆಯಲ್ಲಿ ಮಸೀದಿಯನ್ನು ಕರಸೇವಕರು ಧ್ವಂಸಗೊಳಿಸಿದ್ದ ಫೋಟೋಗಳು ಇವೆ. ಭಾರತ ಸರ್ಕಾರದ ವಿರುದ್ಧ ಜಿಹಾದ್ ನಡೆಸಲು ಹಾಗೂ ಶಸ್ತ್ರಾಸ್ತ್ರಗಳ ಮೂಲಕ ಹಿಂಸಾಚಾರ ಸೃಷ್ಟಿಸಲು ಕರೆ ನೀಡಲಾಗಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆಯನ್ನು ಮುಂದುವರಿಸಿ. ನಿಮ್ಮ ಹೋರಾಟದಲ್ಲಿ ನಾವು ದೃಢವಾಗಿ ನಿಲ್ಲುತ್ತೇವೆ ಎಂದು ಐಸಿಸ್ ಉಗ್ರರು ವಿವಾದಿತ ನಿಯತಕಾಲಿಕೆಯಲ್ಲಿ ಹೇಳಿದ್ದಾರೆ. ರಹಸ್ಯ ಟೆಲಿಗ್ರಾಮ್ ಚಾನೆಲ್​ಗಳು ಮತ್ತು ವೆಬ್​ಗಳ ಮೂಲಕ ಜನರಲ್ಲಿ ದ್ವೇಷ ಹರಡಲು ನಿಯತಕಾಲಿಕೆಯನ್ನು ಬಳಸಲಾಗುತ್ತಿದೆ. ಸಿಎಎಗೆ ಸಂಬಂಧಿಸಿದ ಸುಳ್ಳು ಮಾಹಿತಿಗಳನ್ನು ಅದರಲ್ಲಿ ಪ್ರಕಟಿಸಲಾಗಿದ್ದು, ಭಾರತದ ನ್ಯಾಯಾಲಯಗಳ ತೀರ್ಪಿಗೆ ಬದ್ಧರಾಗಿರಬಾರದು ಎಂದು ವಾಯ್್ಸ ಆಫ್ ಇಂಡಿಯಾ ನಿಯತಕಾಲಿಕೆ ಇತ್ತೀಚಿನ ಒಂಬತ್ತನೇ ಆವೃತ್ತಿಯಲ್ಲಿ ಹೇಳಲಾಗಿದೆ.
ಸಿರಿಯಾ ಮತ್ತು ಇರಾಕ್​ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಡ್ರೋನ್​ಗಳ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ಈ ಮಾದರಿಯ ವಿಧ್ವಂಸಕ ಕೃತ್ಯ ಅನೇಕರಿಗೆ ಸ್ಪೂರ್ತಿ ನೀಡಿದೆ. ಪಾಕ್​ನ ಐಎಸ್​ಐ ಇದಕ್ಕೆ ಸೇರ್ಪಡೆಗೊಳ್ಳುತ್ತಿದೆ
|ಡಾನ್ ರಾಸ್ಲರ್ಐಸಿಸ್ ಡ್ರೋನ್ ದಾಳಿಯ ಅಧ್ಯಯನಕಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
