ಜಮ್ಮು:ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ಎಲ್ಲ ಉಗ್ರ ಶಿಬಿರಗಳು ಹಾಗೂ ಸುಮಾರು 15 ಲಾಂಚ್​ಪ್ಯಾಡ್​ಗಳಲ್ಲಿ ಭಯೋತ್ಪಾದಕರು ಜಮಾವಣೆಯಾಗಿದ್ದಾರೆ. ಈ ಪ್ರದೇಶದಲ್ಲಿ ಹಿಮ ಕಡಿಮೆಯಾಗುವುದರಿಂದ ಹೆಚ್ಚು ಉಗ್ರರನ್ನು ಶಿಬಿರಗಳಲ್ಲಿ ಭರ್ತಿ ಮಾಡಲಾಗಿದೆ.
ಪಾಕಿಸ್ತಾನ ಇನ್ನುಮುಂದೆ ಗಡಿಯುದ್ದಕ್ಕೂ ಉಗ್ರರ ಒಳನುಸುಳುವಿಕೆ ಹೆಚ್ಚಿಸಬಹುದು ಎಂದು ಸೇನೆಯ ಉನ್ನತ ಕಮಾಂಡರ್ ಲೆಫ್ಟಿನಂಟ್ ಜನರಲ್ ಬಿ.ಎಸ್. ರಾಜು ಮಾಹಿತಿ ನೀಡಿದ್ದಾರೆ. ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಸ್ಥಗಿತಗೊಂಡು ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ನಿರ್ವಣವಾಗಿರುವುದನ್ನು ಪಾಕಿಸ್ತಾನಕ್ಕೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಕಣಿವೆಯಲ್ಲಿದ್ದ ಬಹುತೇಕ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿರುವುದರಿಂದಾಗಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪಾಕ್ ಉಗ್ರರನ್ನು ಒಳನುಸುಳಿಸಲು ಯತ್ನಿಸುತ್ತಿದೆ. ಇದಕ್ಕಾಗಿ ಪಾಕ್ ಸೇನೆ ಪದೇಪದೆ ಕದನವಿರಾಮ ಉಲ್ಲಂಘಿಸಿ ದಾಳಿ ನಡೆಸಿ ಭಯೋತ್ಪಾದಕರಿಗೆ ಗಡಿ ಒಳನುಸುಳಲು ಸಹಾಯ ಮಾಡುತ್ತಿದೆ ಎಂದು ಬಿ.ಎಸ್. ರಾಜು ತಿಳಿಸಿದ್ದಾರೆ.
ಗಡಿಯಲ್ಲಿ ಪಾಕ್ ಶೆಲ್ ದಾಳಿ:ಜಮ್ಮು- ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ಬಳಿ ಪಾಕ್ ಸೇನೆ ಶನಿವಾರ ರಾತ್ರಿ ನಿರಂತರ ಶೇಲ್ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಯುವಕ ಗಾಯಗೊಂಡಿದ್ದಾನೆ. ಮೆಂಧಾರ್ ಮತ್ತು ಬಾಲಾಕೋಟ್ ಸೆಕ್ಟರ್ ಬಳಿ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಶೆಲ್ ದಾಳಿ ಪ್ರಾರಂಭಿಸಿದ ಪಾಕ್ ಸೇನೆ ಬೆಳಗಿನ ಜಾವ 4.50ರವರೆಗೂ ದಾಳಿ ಯನ್ನು ಮುಂದುವರಿಸಿತ್ತು. ಗಡಿಯಲ್ಲಿ 6ಕ್ಕೂ ಹೆಚ್ಚು ಹಳ್ಳಿಗಳಲ್ಲಿನ ಮನೆಗಳಿಗೆ ಹಾನಿಯಾಗಿದೆ.
ಭಾರತದಿಂದ ಹೊರಹೋಗಲು ಪಾಕ್​ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳಿಗೆ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 4 =
Remember me
