ಇಸ್ಲಾಮಾಬಾದ್:ಪಾಕಿಸ್ತಾನದ ಗ್ರಹಚಾರ ಸದ್ಯ ನೆಟ್ಟಗಿಲ್ಲ. ಭಾರತವನ್ನು ಎದುರುಹಾಕಲು ನೋಡಿದಾಗಲೆಲ್ಲಾ, ಭಾರತಕ್ಕೆ ಬುದ್ಧಿ ಕಲಿಸುತ್ತೇನೆ ಎಂದು ಹೋದಾಗಲೆಲ್ಲಾ ಎಡವಟ್ಟುಗಳ ಮೇಲೆ ಎಡವಟ್ಟು ಮಾಡುತ್ತಲೇ ಸಾಗಿದೆ.
ಕಳೆದ ವಾರವಷ್ಟೇ ಭಾರತಕ್ಕೆ ಬುದ್ಧಿ ಕಲಿಸಲು ಹೋಗಿ ಹವಾಮಾನ ವರದಿಯಲ್ಲಿ ಎಡವಟ್ಟು ಮಾಡಿಕೊಂಡಿತ್ತು. ಭಾರತವು ತನ್ನ ಹವಾಮಾನ ವರದಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರದೇಶಗಳನ್ನೂ ಸೇರಿಸಿತ್ತು. ಅಲ್ಲಿಯ ಹವಾಮಾನ ವರದಿಯನ್ನೂ ಪ್ರಕಟಿಸಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್, ಲಡಾಕ್‌ನ ಉತ್ತರದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ಟಾನ್ ಪ್ರದೇಶಗಳ ವರದಿ ಬಿತ್ತರಗೊಂಡಿತ್ತು. ಭಾರತ ಮಾಡಿದಂತೆಯೇ ತಾನೂ ಮಾಡಬೇಕು ಎಂದುಕೊಂಡ ಪಾಕಿಸ್ತಾನ, ಲಡಾಖ್​ ತನಗೇ ಸೇರಿದ್ದು ಎಂದು ಹೇಳುವ ಭರದಲ್ಲಿ ಹವಾಮಾನ ವರದಿಯಲ್ಲಿ ತಪ್ಪು ಅಂಕಿ ಅಂಶ ನೀಡುವ ಮೂಲಕ ತನ್ನನ್ನು ಟ್ರೋಲ್ ಮಾಡಲು ಅವಕಾಶವನ್ನು ಪುಕ್ಕಟೆ ಒದಗಿಸಿತ್ತು.
ಇದನ್ನೂ ಓದಿ:ಭಾರತಕ್ಕೆ ಬುದ್ಧಿ ಕಲಿಸ್ತೇನಂತ ಹೋದ ಪಾಕ್​ಗೆ ಹೀಗೆ ಮುಖಭಂಗ ಆಗೋದಾ…!
ಅದಾದ ನಂತರ ಪಾಕಿಸ್ತಾನಕ್ಕೆ ಭಾರಿ ಮುಖಭಂಗ ಆಗಿರುವ ಇನ್ನೊಂದು ವಿಚಾರ ತಾಲಿಬಾನ್​ ಹೇಳಿಕೆ. ಕಾಶ್ಮೀರ ಭಾರತದ ಆಂತರಿಕ ವಿಚಾರವಾಗಿದೆ. ಈ ವಿಚಾರದಲ್ಲಿ ಪಾಕಿಸ್ತಾನದ ಜತೆ ನಾವು ಇಲ್ಲವೇ ಇಲ್ಲ, ಈ ವಿಷಯದಲ್ಲಿ ನಾವು ತಲೆ ಹಾಕುವುದಿಲ್ಲ ಎಂದಿತ್ತು ತಾಲಿಬಾನ್​.
ಕಾಶ್ಮೀರವನ್ನು ತಾಲಿಬಾನ್‌ ಸಂಘಟನೆ ವಶಪಡಿಸಿಕೊಳ್ಳಲಿದೆ ಎಂದು ಎಲ್ಲೆಡೆ ಹರಿದಾಡುತ್ತಿರುವ ಸುದ್ದಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಅಫ್ಘಾನಿಸ್ತಾನದ ರಾಷ್ಟ್ರೀಯ ಆಂದೋಲನವಾದ ಇಸ್ಲಾಮಿಕ್‌ ಎಮಿರೇಟ್ಸ್‌ ಆಫ್ ಅಫ್ಘಾನಿಸ್ತಾನ, ಇದು ಸಂಪೂರ್ಣ ಸುಳ್ಳು ಸುದ್ದಿ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ನಡೆಯನ್ನು ನಾವು ಬೆಂಬಲಿಸುವುದಿಲ್ಲ ಎಂದಿತ್ತು.
ಇದನ್ನೂ ಓದಿ:ಕಾಶ್ಮೀರದ ವಿಚಾರದಲ್ಲಿ ಪಾಕ್​ ಜತೆ ನಾವಿಲ್ಲ, ಇತ್ತ ತಲೆನೇ ಹಾಕಲ್ಲ ಎಂದ ತಾಲೀಬಾನ್​: ಪಾಕಿಸ್ತಾನಕ್ಕಾಯ್ತು ಭಾರಿ ಮುಖಭಂಗ!
ಇದೀಗ ಅದಕ್ಕಿಂತಲೂ ಭಾರಿ ಆಘಾತವನ್ನು ಸ್ವಯಂ ಪ್ರೇರಿತವಾಗಿ ಮಾಡಿಕೊಂಡಿದೆ ಪಾಕ್​. ಗಿಲ್ಗಿಟ್- ಬಾಲ್ಟಿಸ್ಟಾನ್ ಪ್ರದೇಶವನ್ನು ಭಾರತದ್ದೇ ಭಾಗ ಎಂದು ಪ್ರಕಟಿಸಿದೆ. ಅದೂ ತನ್ನ ವೆಬ್​ಸೈಟ್​ನಲ್ಲಿ! ಇದರಿಂದಾಗಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಸಕತ್​ ಟ್ರೋಲ್​ ಆಗುತ್ತಿದ್ದು, ಮತ್ತೊಮ್ಮೆ ಮುಖಭಂಗ ಅನುಭವಿಸುವಂತಾಗಿದೆ.
ಕರೊನಾ ವೈರಸ್ ಬಗ್ಗೆ ಮಾಹಿತಿ ನೀಡಲು ಪಾಕಿಸ್ತಾನ ಸರ್ಕಾರವು Covid.gov.pok ಎಂಬ ವೆಬ್‍ಸೈಟ್ ಆರಂಭಿದೆ. ಇದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದ ಭಾಗ ಎಂಬಂತೆ ವಿವರಿಸಲಾಗಿದೆ. ಈ ವೆಬ್‍ಸೈಟ್ ಗ್ರಾಫಿಕ್ಸ್ ಮೂಲಕ ಕರೊನಾದ ವ್ಯಾಪ್ತಿಯನ್ನು ವಿವರಿಸಲಾಗಿದೆ.
ಈ ನಕ್ಷೆಯ ಫೋಟೋ ನೋಡಿದ ತಕ್ಷಣವೇ ನೆಟ್ಟಿಗರು ಟ್ವಿಟರ್​ನಲ್ಲಿ ಪಾಕಿಸ್ತಾನ ಸರ್ಕಾರವನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಎಡವಟ್ಟಿನಿಂದಾದರೂ ಸೈ ಪಾಕಿಸ್ತಾನ ಸತ್ಯವನ್ನೇ ಉಗುಳಿದೆ ಎಂದು ಹೇಳಲಾರಂಭಿಸಿದ್ದಾರೆ. (ಏಜೆನ್ಸೀಸ್​)
For the first time Pakistan considered#PoKa part of India
PoK has been described as part of India on Pakistan's official website. Pakistan has never believed this before today. This information is given on the official website of Pakistan where corona infection is reported.pic.twitter.com/qpkov8y9bd
— Haresh Kumar (@HareshK04248354)May 21, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + one =
Remember me
