ನವದೆಹಲಿ:ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರನ್ನು ಬಂಧಿಸಿರುವ ಬೆನ್ನಲ್ಲೇ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಿದೆ.
ಇನ್ನು ಪಾಕಿಸ್ತಾನದಲ್ಲಿ ನಾಗರೀಕ ಯುದ್ದದಂತಹ ಪರಿಸ್ಥಿತಿ ಹಾಗೂ ಗಲಭೆಗೆ ಪ್ರಧಾನಿ ಮೋದಿ ಅವರನ್ನು ದೂಷಿಸುವ ಮೂಲಕ ಅಲ್ಲಿನ ನಟಿಯೊಬ್ಬರು ಸುದ್ದಿಯಾಗಿದ್ದಾರೆ.
ಪಾಕಿಸ್ತಾನದ ಖ್ಯಾತ ನಟಿ ಸೆಹರ್​ ಶಿನ್ವಾರಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರನ್ನು ಬಂಧಿಸಿರುವ ಬೆನ್ನಲ್ಲೇ ದೇಶಾದ್ಯ,ಮತ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಪ್ರಧಾನಿ ಮೋದಿ ಅವರೇ ಕಾರಣ ಎಂದು ಟ್ವೀಟ್​ ಮಾಡಿದ್ದಾರೆ.
Anyone knows the online link of Delhi Police ? I have to file a complain against Indian Pm & Indian Intelligence Agency RAW who are spreading chaos and terrorism in my country Pakistan. If the Indian courts are free (As they claims) then I am sure Indian Supreme Court will…
ಇದನ್ನೂ ಓದಿ:ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಆಭರಣ ಮಳಿಗೆ ದರೋಡೆ; ಖದೀಮರು ಅರೆಸ್ಟ್
ಪಾಕಿಸ್ತಾನದಲ್ಲಿ ಭಯೋತ್ಪಾದನೆ, ಗಲಭೆ ಹಬ್ಬಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬೇಹುಗಾರಿಕಾ ಸಂಸ್ಥೆಯಾದ ರಾ ವಿರುದ್ಧ ನಾನು ದೂರು ನೀಡಬೇಕು. ಯಾರಿಗಾದರೂ ದೆಹಲಿ ಪೊಲೀಸರನ್ನು ಆನ್​ಲೈನ್​ನಲ್ಲಿ ಸಂಪರ್ಕಿಸುವುದು ಹೇಗೆ ಎಂದು ತಿಳಿದಿದೆಯೇ. ಸುಪ್ರೀಂ ಕೋರ್ಟ್​ ನನಗೆ ನ್ಯಾಯ ಕೊಡಿಸುವ ವಿಶ್ವಾಸ ಇದೆ ಎಂದು ನಟಿ ಟ್ವೀಟ್​ ಮಾಡಿದ್ದಾರೆ.
ನಟಿ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು ನಮ್ಮ ಕಾರ್ಯವ್ಯಾಪ್ತಿ ಪಾಕಿಸ್ತಾನಕ್ಕೆ ಒಳಪಡುವುದಿಲ್ಲ. ನಿಮ್ಮ ದೇಶದಲ್ಲಿ ಇಂಟರ್​ನೆಟ್​ ಸೌಲಭ್ಯ ಕಡಿತಗೊಂಡಿದ್ದರೂ ನೀವು ಹೇಗೆ ಟ್ವೀಟ್​ ಮಾಡುತ್ತಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಟಾಂಗ್​ ಕೊಟ್ಟಿದ್ದಾರೆ.
ಇನ್ನು ಪಾಕಿಸ್ತಾನಿ ನಟಿಯ ಟ್ವೀಟ್​ಗೆ ನೆಟ್ಟಿಗರು ಹೌಹಾರಿದ್ದು ಕುಡಿದ ಮತ್ತಿನಲ್ಲಿ ಈಕೆ ಮೂರ್ಖರ ರೀತಿ ಟ್ವೀಟ್​ ಮಾಡಿದ್ದಾಳೆ ಎಂದು ಕಾಲೆಳೆದಿದ್ದಾರೆ.
We are afraid we still do not have jurisdiction in Pakistan.But, would like to know how come you are tweeting when the internet has been shut down in your country!https://t.co/lnUCf8tY59

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
