ಗುಜರಾತ್​:ಈ ದೋಣಿ ಸಾಧಾರಣ ಮೀನುಗಾರನ ದೋಣಿಯ ಹಾಗೆ ಸೋಗು ಹಾಕಿಕೊಂಡು ಭಾರತೀಯ ಸಮುದ್ರ ಗಡಿಯ ಒಳಗಡೆ ಬಂದಿದೆ. ಆದರೆ ಈ ದೋಣಿಯಲ್ಲಿದ್ದ ವಸ್ತುಗಳು ಮಾತ್ರ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿದೆ.ಶಸ್ತ್ರಾಸ್ತ್ರಗಳು ಮತ್ತು 10 ಸಿಬ್ಬಂದಿಯನ್ನು ಹೊತ್ತಿದ್ದ ಪಾಕಿಸ್ತಾನದ ಮೀನುಗಾರಿಕಾ ದೋಣಿಯನ್ನು ಭಾರತೀಯ ಕೋಸ್ಟ್​ಗಾರ್ಡ್ ತಡೆದಿದ್ದಾರೆ.
ಪಾಕಿಸ್ತಾನದ ದೋಣಿಯನ್ನು ತಡೆಹಿಡಿಯುವ ಕಾರ್ಯಾಚರಣೆಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಅಥವಾ ಎಟಿಎಸ್‌ನೊಂದಿಗೆ ಜಂಟಿಯಾಗಿ ನಡೆಸಲಾಗಿದೆ ಎಂದು ಕೋಸ್ಟ್​ಗಾರ್ಡ್ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ಅಲ್ ಸೊಹೆಲಿ” ಎಂಬ ಹೆಸರಿನ ಈ ದೋಣಿಯನ್ನು ‘ಓಖಾ’ ಎನ್ನುವ ಸ್ಥಳಕ್ಕೆ ತಂದು ವಶಕ್ಕೆ ಪಡೆಯಲಾಗಿದೆ ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ.
ಎಟಿಎಸ್ ಗುಜರಾತ್ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ, 10 ಜನರಿದ್ದ ಪಾಕಿಸ್ತಾನದ ಮೀನುಗಾರಿಕಾ ಬೋಟ್ ಅಲ್ ಸೊಹೆಲಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ತಪಾಸಣೆ ಮಾಡುವಾಗ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸುಮಾರು 300 ಕೋಟಿ ರೂ. ಮೌಲ್ಯದ 40 ಕೆಜಿ ಮಾದಕವಸ್ತುಗಳು ಈ ದೋಣಿಯಲ್ಲಿ ಇದ್ದದ್ದು ಕಂಡುಬಂದಿದೆ. ಇವರು ಭಾರತದ ಗಡಿಯೊಳಗೆ ಯಾವ ಉದ್ದೇಶ ಇಟ್ಟುಕೊಂಡು ಬಂದದ್ದು, ಎಲ್ಲಿಂದ ಬಂದದ್ದು ಎನ್ನುವ ವಿಚಾರಗಳು ತನಿಖೆಯ ನಂತರವೇ ತಿಳಿದು ಬರಲಿವೆ.
ಭಾರತದ ಅನೇಕ ನಗರಗಳಲ್ಲಿ ಹೊಸವರ್ಷವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂದರ್ಭ ಅನೇಕರು, ಮಾದಕ ವಸ್ತುಗಳನ್ನು ಬಳಸುವುದೂ ಈ ಹಿಂದೆ ಕಂಡುಬಂದಿದೆ. ಹೊಸವರ್ಷದ ಆಚರಣೆ ಹಿನ್ನೆಲೆಯಲ್ಲಿ ಈ ಡ್ರಗ್ಸ್​ ಭಾರತಕ್ಕೆ ಪೂರೈಸಲಾಗುತ್ತಿತ್ತೇ ಎನ್ನುವ ಅನುಮಾನವೂ ಎದ್ದಿದೆ.
@IndiaCoastGuardin joint ops with ATS#Gujarat, apprehended#PakistaniFishing Boat Al Soheli with 10 crew in Indian waters. During rummaging Arms, ammunition & approx 40 Kgs#narcoticsworth Rs 300 cr found concealed. Boat being brought to#Okhafor further investigation.pic.twitter.com/3YwzKne6bQ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 15 =
Remember me
