ಧರಂಶಾಲಾ :ಹಿಮಾಚಲ ಪ್ರದೇಶದ ಧರಂಶಾಲಾ ಬಳಿಯ ಕರೇರಿಗೆ ಟ್ರೆಕ್ಕಿಂಗ್ ಮಾಡಲು ಹೋದ ಯುವಜನರಿಗೆ ಪಾಕಿಸ್ತಾನಿ ಮೊಬೈಲ್ ಸಿಗ್ನಲ್​​ಗಳು ಲಭ್ಯವಾಗಿರುವ ಪ್ರಸಂಗ ವರದಿಯಾಗಿದೆ. ಈ ಸ್ಥಳಕ್ಕೆ ಅತ್ಯಂತ ಹತ್ತಿರವಾದ ಗಡಿರೇಖೆಯು 150 ಕಿಲೋಮೀಟರ್ ದೂರದಲ್ಲಿದ್ದರೂ, ಈ ರೀತಿ ಪಾಕಿಸ್ತಾನದ ನೆಟ್​ವರ್ಕ್​ ಲಭ್ಯವಾಗಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ.
ಇತ್ತೀಚೆಗೆ ಹಿಮಾಚಲದ ಕಾಂಗ್ರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಧರಂಶಾಲಾದಿಂದ 26 ಕಿಲೋಮೀಟರ್ ದೂರದಲ್ಲಿರುವ ಕರೇರಿ ಕೆರೆಗೆ ಕೆಲವು ಯುವಜನರು ಟ್ರೆಕ್ಕಿಂಗ್ ಪ್ರವಾಸ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಪಾಕಿಸ್ತಾನದಿಂದ ಜನಿತವಾದ ಸೆಲುಲರ್ ನೆಟ್​ವರ್ಕ್​ ಸಿಗ್ನಲ್​ಗಳು ಸಿಕ್ಕಿದ್ದು, ಭಾರತದ ಯಾವುದೇ ಮೊಬೈಲ್ ಆಪರೇಟರ್​ಗಳ ಸಿಗ್ನಲ್ ಸಿಕ್ಕಿಲ್ಲ. ಅಷ್ಟೇ ಅಲ್ಲ, ಅವರ ಮೊಬೈಲ್ ಫೋನ್​ಗಳಲ್ಲಿ ಇಂಡಿಯನ್ ಸ್ಟಾಂಡರ್ಡ್ ಟೈಮ್(ಐಎಸ್​ಟಿ)​ನಲ್ಲಿ ಬದಲಾವಣೆ ಉಂಟಾಗಿ, ಪಾಕಿಸ್ತಾನ್ ಸ್ಟಾಡಂರ್ಡ್​ ಟೈಮ್ ತೋರಿಸಿದೆ ಎನ್ನಲಾಗಿದೆ.
ಇದನ್ನೂ ಓದಿ:ಅತಿಉದ್ದನೇ ಕೂದಲಿನ ಹಿರಿಮೆಯುಳ್ಳ ಯುವತಿಗೆ 12 ವರ್ಷಗಳಲ್ಲಿ ಮೊದಲನೇ ಹೇರ್​​ಕಟ್!
ಈ ಬಗ್ಗೆ ಕಾಂಗ್ರಾ ಜಿಲ್ಲಾಡಳಿತವು ಟೆಲಿಕಮ್ಯುನಿಕೇಷನ್ಸ್ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳೀಯ ಪೊಲೀಸರು ಎಚ್ಚರವಾಗಿರಬೇಕೆಂದು ಹೇಳಲಾಗಿದೆ. ಕೌತುಕವೆಂದರೆ ಧರಂಶಾಲಾ ಮತ್ತು ನಿಕಟವಾದ ಭಾರತ-ಪಾಕಿಸ್ತಾನ ಗಡಿಗೆ 140 ಕಿ.ಮೀ. ಅಂತರವಿದೆ. ಮತ್ತು ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ, ಮೊಬೈಲ್ ಫೋನ್ ಸಿಗ್ನಲ್​ಗಳು ಗಡಿಯ ಆಚೆಗೆ 500 ಮೀಟರ್​ಗಳನ್ನು ಮೀರಿದ ನಂತರ ಸಿಗುವ ಹಾಗಿಲ್ಲ ಎನ್ನಲಾಗಿದೆ.
ಗಡಿಭಾಗದಲ್ಲಿ ಅನ್ಯದೇಶೀಯ ನೆಟ್​ವರ್ಕ್​ಗಳು ಸಿಗುವುದು ಸಾಮಾನ್ಯ ವಿಷಯವಾಗಿದೆ. ಆದರೆ ಇಷ್ಟೊಂದು ದೂರದಲ್ಲಿರುವ ಪ್ರದೇಶದಲ್ಲಿ ಪಾಕಿಸ್ತಾನಿ ನೆಟ್​ವರ್ಕ್​ ಸಿಕ್ಕಿರುವುದು ಸಮಾಜ ವಿರೋಧಿ ಚಟುವಟಿಕೆಗಳಿಗೆ ದುರ್ಬಳಕೆಯಾಗಬಹುದೆಂಬ ಕಳವಳ ಉಂಟುಮಾಡಿದೆ. ಟಿಬೆಟ್​​ನ ಆಧ್ಯಾತ್ಮ ಗುರು ದಲೈ ಲಾಮಾ ಅವರು ಕೂಡ ಧರಂಶಾಲಾದಲ್ಲೇ ವಾಸಿಸುವುದರಿಂದ ಈ ಪ್ರದೇಶ ಹೆಚ್ಚು ಕಾವಲು ಹೊಂದಿದ ಪ್ರದೇಶವಾಗಿದೆ.(ಏಜೆನ್ಸೀಸ್)
ಕರೊನಾ ವಿರುದ್ಧ ದೃಢ ಸಂಕಲ್ಪ : ಚುನಾವಣೆ ಎದುರಿದ್ದರೂ ಈ ಹಳ್ಳಿ ಪೂರ್ಣ ಬಂದ್ !
‘ಮನೆಯಲ್ಲೇ ಇದ್ದರೂ ಕರೊನಾ ಸೋಂಕು ಹೇಗೆ ತಗುಲಿತು ?’ – ನಟ ರಾಹುಲ್ ರಾಯ್ ಪ್ರಶ್ನೆ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − ten =
Remember me
