ಪಂಜಾಬ್:ಭಾರತ-ಪಾಕಿಸ್ತಾನ ಗಡಿಯಲ್ಲಿ ಭದ್ರತಾ ಪರಿಶೀಲನೆಯಲ್ಲಿ ತೊಡಗಿದ್ದ ವೇಳೆ ಪಂಜಾಬ್-ಪಾಕಿಸ್ತಾನ ಗಡಿ ಭಾಗದಲ್ಲಿ ಪಾಕಿಸ್ತಾನ ಮೂಲದ ಡ್ರೋನ್ ಕ್ಯಾಮರಾ, ಭಾರತದ ಭೂಭಾಗ ಪ್ರವೇಶಿಸಿರುವುದನ್ನು ಭಾರತೀಯ ಬಿಎಸ್​​ಎಫ್​ ಯೋಧರು ಪತ್ತೆ ಹಚ್ಚಿದ್ದಾರೆ.
ಮಂಗಳವಾರ ಪಂಜಾಬ್​ನ ಗುರುದಾಸ್​​ಪುರ ಸೆಕ್ಟರ್​ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಬಂದ ಡ್ರೋನ್​ನ ಮೇಲೆ ಬಿಎಸ್​ಎಫ್​ ಪಡೆ ಗುಂಡಿನ ದಾಳಿ ನಡೆಸಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆಯ ವೇಳೆ ಝೇಂಕರಿಸುವ ಶಬ್ದ ಕೇಳಿ ಬಂದಿದೆ. ಈ ವೇಳೆ ಡ್ರೋನ್ ಕ್ಯಾಮರಾ ಎಂದು ತಿಳಿದು ಬಂದಿದ್ದು, ನಂತರ ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದಾರೆ.
ಡ್ರೋನ್​ ಕ್ಯಾಮರಾವನ್ನು ವಶಕ್ಕೆ ಪಡೆಯಲಾಗಿದೆ. ಯಾವೆಲ್ಲಾ ಭೂಪ್ರದೇಶವನ್ನು ಚಿತ್ರೀಕರಿಸಲಾಗಿದೆ ಎನ್ನುವುದನ್ನು ಪರೀಕ್ಷಿಸಬೇಕಿದೆ. ಕ್ಯಾಮರಾ ಪತ್ತೆಯಾದ ಭಾಗದಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಬಿಎಸ್‌ಎಫ್​ನ ಡಿಐಜಿ ಪ್ರಭಾಕರ್ ಜೋಶಿ ತಿಳಿಸಿದ್ದಾರೆ.
ತಜ್ಞರ ಪ್ರಕಾರ, ಪಂಜಾಬ್‌ ಪ್ರದೇಶದ ಭಾರತ-ಪಾಕಿಸ್ತಾನ ಗಡಿಯು ಅಕ್ರಮ ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳು ಹಾಗೂ ಅಕ್ರಮ ವಸ್ತುಗಳನ್ನು ಸಾಗಿಸಲು ದುಷ್ಕರ್ಮಿಗಳು ಹೆಚ್ಚು ಬಳಸುವ ಮಾರ್ಗಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + thirteen =
Remember me
