ಚಂಡಿಗಢ್​:ಪುಲ್ವಾಮ ದಾಳಿ ಮಾಡಿಸಿದ್ದು ನಾವೇ ಎಂದು ಸತ್ಯ ಒಪ್ಪಿಕೊಂಡು, ಜಗತ್ತಿನೆದುರು ಬೆತ್ತಲಾದ ಪಾಕಿಸ್ತಾನ ತನ್ನ ಕಪಟತನವನ್ನು ಬಿಡುತ್ತಿಲ್ಲ.
ಗಡಿಯನ್ನು ದಾಟಿ, ಭಾರತದ ಭೂಪ್ರದೇಶದೊಳಗೆ ನುಸುಳಿದ್ದ ಪಾಕಿಸ್ತಾನಿ ಡ್ರೋಣ್​​ನ್ನು ಭಾರತೀಯ ಗಡಿ ಭದ್ರತಾ ಪಡೆ ಹಿಮ್ಮೆಟ್ಟಿಸದೆ. ಪಂಜಾಬ್​ನ ಠಾಕೂರ್​ಪುರ್​ ಗ್ರಾಮದ ಬಳಿ ನಿನ್ನೆ ರಾತ್ರಿ 11.35ರಿಂದ ಗುಂಯ್​​ಗುಡುವ ಶಬ್ದ ಕೇಳಿಬರುತ್ತಿತ್ತು. ಅದು ಪಾಕಿಸ್ತಾನ ಕಡೆಯಿಂದಲೇ ಬರುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿಕೊಂಡ ಸ್ಥಳದಲ್ಲಿದ್ದ ಗಡಿ ಭದ್ರತಾ ಪಡೆಯಾದ ಯೋಧರಾದ ದೇವೇಂದ್ರ ಕುಮಾರ್​ ಮತ್ತು ಅಶೋಕ್​ ಕುಮಾರ್ ಕೂಡಲೇ ಅಲರ್ಟ್​ ಆಗಿ ಒಂದೇ ಸಮ ಫೈರ್ ಮಾಡಲು ಶುರುಮಾಡಿದರು. ನೋಡನೋಡುತ್ತಿದ್ದಂತೆ ಆ ಡ್ರೋಣ್​ ಭಾರತದ ಭೂಪ್ರದೇಶವನ್ನು ಪ್ರವೇಶಿಸಿತು. ಆದರೆ ಬಿಎಸ್​ಎಫ್​ ಯೋಧರ ದಾಳಿಗೆ ಹೆದರಿ ಕೂಡಲೇ ಆ ಡ್ರೋಣ್​ ಪಾಕ್​ಗೆ ಹಿಂದಿರುಗಿದೆ.
ಆದರೆ ಮತ್ತೆ ಮಧ್ಯರಾತ್ರಿ 12.22ರ ಹೊತ್ತಿಗೆ ಮತ್ತೆ ವಾಪಸ್​ ಆಗಿದೆ. ಈ ಸಮಯದಲ್ಲಿ ಅಲ್ಲಿಯೇ ಗಸ್ತು ತಿರುಗುತ್ತಿದ್ದ ಮುಕೇಶ್ ಯಾದವ್​, ದೇವೇಂದ್ರ ಮತ್ತು ಅಶೋಕ್ ಕುಮಾರ್​ ಮತ್ತೊಮ್ಮೆ ಡ್ರೋನ್​ ಎಡೆಗೆ ಗುಂಡಿನ ದಾಳಿ ಮಾಡಿದ್ದಾರೆ.
ಬಿಎಸ್​ಎಫ್​ನ ಮೂವರು ಸಿಬ್ಬಂದಿಯ ಗುಂಡಿನ ದಾಳಿಗೆ ಮಣಿದ ಪಾಕ್​ ಡ್ರೋನ್​ ಕೊನೆಗೂ ಹಿಂದಿರುಗಿದೆ. ನಂತರ ಸ್ಥಳಕ್ಕೆ ಬಿಎಸ್​ಎಫ್​ ಕಮಾಂಡಂಟ್​ ಎನ್​.ಗಂಗೂಲಿ ಭೇಟಿ ನೀಡಿದ್ದರು.
ಇಂಡಿಯನ್​ ಏರ್​ಲೈನ್ಸ್​ನಿಂದ ಮೊದಲ ಮಹಿಳಾ ಸಿಇಒ ನೇಮಕ: ಹರ್ಪ್ರೀತ್​ ಸಿಂಗ್​ಗೆ ಒಲಿದ ಗೌರವ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 2 =
Remember me
