ನವದೆಹಲಿ:ಮನುಷ್ಯನಾಗಿ ಹುಟ್ಟಿದ ನಂತರ ಏನಾದರೂ ಸಾಧಿಸಬೇಕು ಎಂಬ ಮಾತಿದೆ. ಪ್ರತಿಯೊಬ್ಬ ಮನುಷ್ಯನು ಮಾನವೀಯವಾಗಿರಬೇಕು ಮತ್ತು ಇತರರ ಬಗ್ಗೆ ಸಹಾನುಭೂತಿಯನ್ನು ತೋರಬೇಕು ಎಂದು ಹಿರಿಯರು ಹೇಳುತ್ತಾರೆ. ಯಾರಿಗಾದರೂ ನಾವು ಸಹಾಯ ಮಾಡಿದರೆ ದೇವರು ನಮಗೆ ಮತ್ತು ನಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡುತ್ತಾನೆ ಎಂದು ಹೇಳಲಾಗುತ್ತದೆ. ಮಾನವೀಯತೆಯಿಂದ ಸಮಾಜದಲ್ಲಿ ಗೌರವ ಸಿಗುತ್ತದೆ. ಇತ್ತೀಚೆಗೆ ಬ್ರೈನ್ ಸ್ಟ್ರೋಕ್‌ಗೆ ತುತ್ತಾಗಿ ನಿಧನರಾದವರ ಕುಟುಂಬಸ್ಥರು ಮಾನವೀಯತೆ ಮೆರೆದು ಪ್ರಾಣಾಪಾಯದಲ್ಲಿರುವವರಿಗೆ ಅಂಗಾಂಗ ದಾನ ಮಾಡಿ ಹೊಸ ಬದುಕು ನೀಡುತ್ತಿರುವುದು ಗೊತ್ತೇ ಇದೆ. ಇದೀಗ ಮಾನವೀಯತೆಯು ಗಡಿಗಳನ್ನು ದಾಟಿದೆ. ಹೌದು ಭಾರತೀಯನ ಹೃದಯದಿಂದ ಪಾಕಿಸ್ತಾನಿ ಯುವತಿಗೆ ಹೊಸ ಬದುಕು ಸಿಕ್ಕಿದೆ. ಈಗ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.
ಮಾನವೀಯತೆಗೆ ಯಾವುದೇ ಗಡಿಗಳಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೃದ್ರೋಗದಿಂದ ಬಳಲುತ್ತಿದ್ದ ಪಾಕಿಸ್ತಾನಿ ಯುವತಿಗೆ ಭಾರತೀಯನ ಹೃದಯವನ್ನು ಕಸಿ ಮಾಡುವ ಮೂಲಕ ಚೆನ್ನೈ ಆಸ್ಪತ್ರೆಯ ವೈದ್ಯರು ಮಾನವೀಯತೆ ಮೆರೆದಿದ್ದಾರೆ. ಮೇಲಾಗಿ ಈ ಆಪರೇಷನ್ ಮಾಡಲು ವೈದ್ಯರು, ಆಸ್ಪತ್ರೆ ಮತ್ತು ಟ್ರಸ್ಟ್ ಯುವತಿಯಿಂದ ಒಂದು ನಯಾ ಪೈಸೆಯನ್ನೂ ಪಡೆದಿಲ್ಲ ಎಂಬುದು ಗಮನಾರ್ಹ.
ಪಾಕಿಸ್ತಾನದ 19 ವರ್ಷದ ರಶಾನ್ ಹೃದ್ರೋಗದಿಂದ ಬಳಲುತ್ತಿದ್ದಳು. ಆಕೆಯ ಸ್ಥಿತಿ ಹದಗೆಡುತ್ತಿದ್ದಂತೆ, ಹೃದಯ ಕಸಿ ಮಾಡದೆ ಆಕೆ ಬದುಕುವುದು ಕಷ್ಟ ಎಂದು ವೈದ್ಯರು ನಿರ್ಧರಿಸಿದರು. ಚಿಕಿತ್ಸೆಗೆ 35 ಲಕ್ಷಕ್ಕೂ ಹೆಚ್ಚು ಖರ್ಚಾಗುತ್ತದೆ ಎಂದು ಹೇಳಿದ್ದರಿಂದ ರಶಾನ್ ಪಾಲಕರು ಕೂಡ ಆತಂಕಗೊಂಡಿದ್ದರು. ಈ ಕ್ರಮದಲ್ಲಿ ಸ್ವಯಂಸೇವಾ ಸಂಸ್ಥೆಯೊಂದು ರಶಾನ್ ಸಹಾಯಕ್ಕೆ ಮುಂದಾಯಿತು.
ಪಾಕಿಸ್ತಾನದ ರಶಾನ್​ಗೆ ಭಾರತದಲ್ಲಿ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಚೆನ್ನೈನ ಎಂಜಿಎಂ ಹೆಲ್ತ್ ಕೇರ್ ಆಸ್ಪತ್ರೆಯಲ್ಲಿ ತಜ್ಞರ ತಂಡ ಭಾರತೀಯ ವ್ಯಕ್ತಿಯ ಹೃದಯವನ್ನು ಯಶಸ್ವಿಯಾಗಿ ಅಳವಡಿಸಿದೆ. ಇದಕ್ಕಾಗಿ ಯುವತಿಯಿಂದ ಒಂದು ನಯಾ ಪೈಸೆಯನ್ನೂ ಪಡೆದಿಲ್ಲ ಎಂದು ವೈದ್ಯರು ಹಾಗೂ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ಸದ್ಯ ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಾಯುತ್ತಿರುವ ತಮ್ಮ ಮಗಳ ಜೀವ ಉಳಿಸಿದ ಟ್ರಸ್ಟ್, ಆಸ್ಪತ್ರೆ ಆಡಳಿತ ಮಂಡಳಿ ಮತ್ತು ವೈದ್ಯರಿಗೆ ರಶಾನ್ ಪಾಲಕರು ಧನ್ಯವಾದ ಅರ್ಪಿಸಿದ್ದಾರೆ. ಈ ಸುದ್ದಿಯನ್ನು ಓದಿದ ನೆಟ್ಟಿಗರು ಈ ಜಗತ್ತಿನಲ್ಲಿ ಮಾನವೀಯತೆ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ವೈದ್ಯಕೀಯ ತಂಡವನ್ನು ಕೊಂಡಾಡುತ್ತಿದ್ದಾರೆ.(ಏಜೆನ್ಸೀಸ್​)
ಚಾಹಲ್​​ ಪತ್ನಿ ಧನಶ್ರೀ ಜತೆಗಿರುವ ಯುವಕನ್ಯಾರು? ವೈರಲ್​ ಆಗ್ತಿರುವ ವಿಡಿಯೋ ಹಿಂದಿನ ಅಸಲಿಯತ್ತೇನು?

ಅಂದು 100 ರೂಪಾಯಿ ಹಿಡಿದು ಮನೆ ಬಿಟ್ಟು ಹೋದಾತ ಇಂದು 200 ಕೋಟಿ ರೂ. ಆಸ್ತಿಯ ಒಡೆಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − four =
Remember me
