ನವದೆಹಲಿ:ಭಾರತ ಸರ್ಕಾರದಿಂದ ಭಾನುವಾರ “ಪರ್ಸನ್​ ನಾನ್​ ಗ್ರೇಟಾ” ಎಂದು ಘೋಷಿಸಲಾದ ಪಾಕಿಸ್ತಾನ ಮೂಲದ ಇಬ್ಬರು ಗೂಢಾಚಾರಿಗಳನ್ನು ಮಂಗಳವಾರ ಮುಂಜಾನೆ ಪಂಜಾಬಿನ ಅಟ್ಟಾರಿ ಗಡಿ ಮೂಲಕ ಪಾಕಿಸ್ತಾನಕ್ಕೆ ದಬ್ಬಲಾಯಿತು.
ಇದನ್ನೂ ಓದಿ:ತಾಯಿಯನ್ನೇ ಹತ್ಯೆಗೈದ ಮಗನಿಂದ ತಂದೆ ಮೇಲೆ ಮಾರಣಾಂತಿಕ ಹಲ್ಲೆ: ಬೆಚ್ಚಿಬಿದ್ದ ಕೊಪ್ಪಳ ಜನತೆ
ಪಾಕ್​ ಐಎಸ್​ಐ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ನಿರ್ವಾಹಕರಾಗಿರುವ ಅಬಿದ್​ ಹುಸೇನ್​ ಮತ್ತು ಮುಹಮ್ಮದ್​ ತಾಹೀರ್​ ನವದೆಹಲಿಯಲ್ಲಿರುವ ಇಂಡಿಯನ್​ ಆರ್ಮಿ ಸಂಸ್ಥೆಗಳ ಬಗ್ಗೆ ದಾಖಲೆ ಕಲೆಹಾಕುವ ಸಂದರ್ಭದಲ್ಲಿ ಭಾರತೀಯ ಗುಪ್ತಚರ ಏಜೆನ್ಸಿ ಗೂಢಾಚಾರಿಗಳನ್ನು ಖುದ್ದಾಗಿ ಸೆರೆಹಿಡಿದಿದ್ದರು. ಅವರನ್ನು ಇಂದು ಮುಂಜಾನೆ ಹೊರದಬ್ಬಲಾಗಿದೆ.
ರಾಜತಾಂತ್ರಿಕ ನಿಯೋಗಕ್ಕೆ ಸಂಬಂಧಿಸಿದಂತೆ ಗೂಢಾಚಾರಿಗಳ ಸ್ಥಾನಮಾನ ಹೊಂದಾಣಿಕೆ ಆಗದಿದ್ದರಿಂದ ಸರ್ಕಾರ ಅವರನ್ನು ಪರ್ಸನ್​ ನಾನ್​ ಗ್ರೇಟಾ ಎಂದು ಘೋಷಿಸಿ, 24 ಗಂಟೆಗಳನ್ನು ದೇಶ ಬಿಡುವಂತೆ ಭಾನುವಾರ ಖಡಕ್​ ಸಂದೇಶ ರವಾನಿಸಿತ್ತು. ಅಲ್ಲದೆ, ಪಾಕಿಸ್ತಾನಿ ಪ್ರಜೆ ಜಾವೀದ್​ ಸೇರಿದಂತೆ ಇಬ್ಬರು ಗೂಢಾಚಾರಿಗಳ ವಿರುದ್ಧ ಅಫಿಶಿಯಲ್​ ಸೀಕ್ರೆಟ್ಸ್​ ಆ್ಯಕ್ಟ್​ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಇದನ್ನೂ ಓದಿ:ಮತ್ತೆ ನೆರೆ ಬಂದ್ರೆ ದೇವರೇ ಗತಿ!
ವಿಚಾರಣೆ ವೇಳೆ ಗೂಢಾಚಾರಿಗಳಿಂದ ಕೆಲವು ವರ್ಗೀಕೃತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನ ಗುಪ್ತಚರ ಎಜೆನ್ಸಿ ನಿರ್ದೇಶನದಂತೆ ಭಾರತೀಯ ಸೇನಾ ಪಡೆಗಳ ಮಾಹಿತಿಯನ್ನು ಕಲೆಹಾಕುತ್ತಿದ್ದೆವು. ಅದಕ್ಕಾಗಿ ಇಂಡಿಯನ್​ ರೈಲ್ವೇ ಸಿಬ್ಬಂದಿಯನ್ನು ಗುರಿಯಾಗಿಸಿ ಮಾಹಿತಿಗಳನ್ನು ಕಲೆಹಾಕುಲು ಪ್ರಯತ್ನಿಸಿದೆವು ಎಂದು ಅವರೇ ಬಾಯ್ಬಿಟ್ಟಿದ್ದಾರೆ.
ರೈಲ್ವೆಯಲ್ಲಿ ಇಂಡಿಯನ್​ ಆರ್ಮಿಯ ಪ್ರಯಾಣದ ಬಗ್ಗೆ ತಿಳಿಯಲು ರೈಲ್ವೆ ಉದ್ಯೋಗಿಗೆ ಅಬಿದ್​ ಹುಸೇನ್​ ಹಣದ ಆಮಿಷವೊಡ್ಡಿದ್ದ ಎಂದು ತಿಳಿದುಬಂದಿದೆ. ನನ್ನ ಹೆಸರು ಗೌತಮ್​, ನನ್ನ ಸಹೋದರ ಓರ್ವ ಪತ್ರಕರ್ತ ನಾವು ಇಂಡಿಯನ್​ ರೈಲ್ವೆ ಬಗ್ಗೆ ಒಂದು ಸ್ಟೋರಿ ತಯಾರು ಮಾಡುತ್ತಿದ್ದೇವೆ. ಈ ಬಗ್ಗೆ ಮಾಹಿತಿ ನೀಡಿದರೆ ಹಣವನ್ನು ನೀಡುತ್ತೇವೆ ಎಂದು ಆಮಿಷವೊಡ್ಡಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ:ನಿಶ್ವಿಕಾ ಜತೆ ಲಾಕ್​ಡೌನ್ ಮಾತುಕಥೆ
ಪರ್ಸನ್​ ನಾನ್​ ಗ್ರೇಟಾ ಎಂದರೇನು?ವಿದೇಶಿ ವ್ಯಕ್ತಿಯೊಬ್ಬ ಒಂದು ನಿರ್ಧಿಷ್ಟ ದೇಶದಲ್ಲಿ ಉಳಿದಿದ್ದು, ಆತನ ನಡೆ ಅನುಮಾನಾಸ್ಪದವಾಗಿದ್ದರೆ ಹಾಗೂ ರಾಜತಾಂತ್ರಿಕ ನಿಯೋಗದ ಸದಸ್ಯತ್ವದ ಸ್ಥಾನಮಾನ ಇಲ್ಲದಿದ್ದರೆ ಅಂತವರನ್ನು ದೇಶದಿಂದ ಹೊರದಬ್ಬುವುದು ಎಂದರ್ಥ.(ಏಜೆನ್ಸೀಸ್​)
ಚೀನಾದಲ್ಲಿ ಉದ್ಯೋಗಿಗಳಿಗೆ ಜೀವಂತ ಹುಳು ತಿನ್ನುವ ಶಿಕ್ಷೆ: ಕಾರಣ ಕೇಳಿದ್ರೆ ಬೆರಗಾಗ್ತೀರಾ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 19 =
Remember me
