ಕರಾಚಿ:ಪಾಕಿಸ್ತಾನದ ಯೂಟ್ಯೂಬರ್ ಒಬ್ಬ ತನ್ನ ಮದುವೆಯ ದಿನದಂತು ಪತ್ನಿಗೆ ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾನೆ. ಮದುವೆಯ ಸಂಭ್ರಮದಲ್ಲಿ ಚಿನ್ನ, ಕಾರು, ಫ್ಲಾಟ್ ಮುಂತಾದ ದುಬಾರಿ ಬೆಲೆಯ ಉಡುಗೊರೆ ನೀಡುತ್ತಾರೆ. ಆದರೆ ಈತ ತನ್ನ ಪತ್ನಿಗೆ ನೀಡಿರುವ ಉಡುಗೊರೆ ಕತ್ತೆ!
ಹೌದು, ಅಜ್ಲಾನ್ ಶಾ ಎಂಬ ಯೂಟ್ಯೂಬರ್ ತನ್ನ ಪತ್ನಿ ವರಿಶಾಗೆ ಮದುವೆಯ ನಂತರದ ಆರತಕ್ಷತೆ ಕಾರ್ಯಕ್ರಮದ ವೇಳೆ ಕತ್ತೆಯನ್ನು ಕರೆತಂದು ಸರ್​​ಫ್ರೈಸ್ ಆಗಿ ಗಿಫ್ಟ್​ ಮಾಡಿದ್ದಾನೆ. ಅಜ್ಲಾನ್ ಶಾ ಪಾಕಿಸ್ತಾನದ ಪ್ರಸಿದ್ಧ ಯೂಟ್ಯೂಬರ್. ಈತನ ಹಲವು ಕಂಟೆಂಟ್​​ಗಳು ಈಗಾಗಲೇ ವೈರಲ್ ಆಗಿವೆ.
ಯೂಟ್ಯೂಬರ್ ಅಜ್ಲಾನ್ ಶಾ ಮತ್ತು ವರಿಶಾ ಇಬ್ಬರಿಗೂ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಪ್ರಾಣಿಗಳನ್ನು ತುಂಬಾ ಮುದ್ದಿಸುತ್ತಾರೆ. ಹೀಗಾಗಿ ತನ್ನ ಪತ್ನಿಗೆ ಪ್ರಾಣಿಗಳೆಂದರೆ ಇಷ್ಟವೆಂದು ಅಜ್ಲಾನ್ ಶಾ ಕತ್ತೆಯನ್ನು ಉಡುಗೊರೆಯಾಗಿ ನೀಡಿದ್ದಾನೆ. ಆರತಕ್ಷತೆಯ ವೇಳೆ ಕತ್ತೆಯನ್ನು ತಂದು ಉಡುಗೊರೆಯಾಗಿ ನೀಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
पाकिस्तानी यूट्यूबर ने शादी में पत्नी को गिफ्ट किया गधे का बच्चाVideo हुआ वायरल।pic.twitter.com/fuI7L4tzNF— Priya singh (@priyarajputlive)December 10, 2022
पाकिस्तानी यूट्यूबर ने शादी में पत्नी को गिफ्ट किया गधे का बच्चाVideo हुआ वायरल।pic.twitter.com/fuI7L4tzNF
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕತ್ತೆಯನ್ನು ತರುತ್ತಿರುವುದನ್ನು ಗಮನಿಸಬಹುದು. ಕತ್ತೆ ಉಡುಗೊರೆಯಾಗಿ ನೀಡುತ್ತಿದ್ದಂತೆ, ಮದುವೆ ಹೆಣ್ಣು ವರಿಶಾ ಕತ್ತೆಯನ್ನು ಮುದ್ದಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಕತ್ತೆಯನ್ನು ಯಾಕೆ ಉಡುಗೊರೆಯಾಗಿ ನೀಡಿದೆ ಎಂಬ ಪ್ರಶ್ನೆ ಅಜ್ಲಾನ್ ಶಾಗೆ ಎದುರಾದಾಗ, ಕತ್ತೆಗಳು ವಿಶ್ವದ ಅತ್ಯಂತ ಶ್ರಮದಾಯಕ ಮತ್ತು ಸುಂದರವಾದ ಪ್ರಾಣಿ. ಆಕೆ ಕತ್ತೆಯನ್ನು ಇಷ್ಟಪಡುತ್ತಾಳೆ. ಹೀಗಾಗಿ ಅವಳಿಗಿಷ್ಟವಾದುದನ್ನೇ ಉಡುಗೊರೆಯಾಗಿ ನೀಡಿದೆ. ಹೀಗಾಗಿ ಯಾರೂ ಕತ್ತೆಯನ್ನು ಗೇಲಿ ಮಾಡಬೇಡಿ ಅಜ್ಲಾನ್ ಶಾ ಮನವಿ ಮಾಡಿಕೊಂಡಿದ್ದಾನೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − thirteen =
Remember me
