ನವದೆಹಲಿ:ಸದಾ ಒಂದಿಲ್ಲೊಂದು ಸಂಚು ರೂಪಿಸುತ್ತಲೇ ಇರುವ ಪಾಕಿಸ್ತಾನ ಈ ಬಾರಿ ಇಸ್ಲಾಮಿಕ್​ ರಾಷ್ಟ್ರಗಳನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಯತ್ನಿಸಿ ಭಾರಿ ಮುಖಭಂಗ ಅನುಭವಿಸಿದೆ. ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿಯನ್ನು ಭಾರತಕ್ಕೆ ಅಂಟಿಸುವ ಪಾಕ್​ನ ಈ ಪ್ರಯತ್ನಕ್ಕೆ ಮಾಲ್ಡೀವ್ಸ್​ ಮತ್ತು ಯುಎಇಗಳು ತಣ್ಣೀರೆರೆಚಿದ್ದಾಗಿ ತಿಳಿದುಬಂದಿದೆ.
ಇಸ್ಲಾಮಿಕ್​ ಸಹಕಾರದ ಸಂಘಟನೆಯ (ಒಐಸಿ) ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಭಾರತ ವಿರೋಧಿ ಗುಂಪು ರಚಿಸಿಕೊಂಡು, ಭಾರತ ಮುಸ್ಲಿಂ ವಿರೋಧಿ ಎಂಬ ಭಾವನೆ ಬಿತ್ತುವುದು ಹಾಗೂ ಆ ಎಲ್ಲ ರಾಷ್ಟ್ರಗಳನ್ನು ಭಾರತದ ವಿರುದ್ಧ ಛೂ ಬಿಡುವುದು ಪಾಕಿಸ್ತಾನದ ಹುನ್ನಾರವಾಗಿತ್ತು ಎನ್ನಲಾಗಿದೆ.
ಆದರೆ ವಾಸ್ತವಿಕ ತಳಹದಿಯಲ್ಲಿ ಭಾರತಕ್ಕೆ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿ ಅಂಟಿಸುವುದು ಸರಿಯಲ್ಲ. ಇದರಿಂದ ದಕ್ಷಿಣ ಏಷ್ಯಾದಲ್ಲಿ ಸೌಹಾರ್ದ ವಾತಾವರಣಕ್ಕೆ ಧಕ್ಕೆಯುಂಟಾಗುವ ಅಪಾಯವಿದೆ ಎಂದು ಹೇಳಿದ ಮಾಲ್ಡೀವ್​ ಮುಖಂಡರು ಪಾಕ್​ನ ಹುನ್ನಾರವನ್ನು ವಿಫಲಗೊಳಿಸಿದರು ಎನ್ನಲಾಗಿದೆ. ಇದೇ ಅಭಿಪ್ರಾಯ ವ್ಯಕ್ತಪಡಿಸಿದ ಯುಎಇ ಕೂಡ ಇದಕ್ಕೆ ಕೈಜೋಡಿಸಿತು ಎಂದು ಹೇಳಲಾಗಿದೆ.
ಅತೃಪ್ತರ ಸಭೆಯಲ್ಲಿ ಪಾಲ್ಗೊಂಡ ಶಾಸಕರ ಡಿಟೇಲ್ಸ್ ಇಲ್ಲಿದೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + 2 =
Remember me
