ನವದೆಹಲಿ:ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ಮಿಲಿಟರಿ ಇಂಟೆಲಿಜೆನ್ಸ್​ ಮತ್ತು ಮುಂಬೈ ಅಪರಾಧ ವಿಭಾಗದ ಪೊಲೀಸರು ಪಾಕಿಸ್ತಾನದ ಅತಿದೊಡ್ಡ ಬೇಹುಗಾರಿಕೆ ಜಾಲವನ್ನು ವಾಣಿಜ್ಯ ನಗರಿಯಲ್ಲಿ ಭೇದಿಸಿದೆ.
ಕಾನೂನುಬಾಹಿರ ವಾಯ್ಸ್​ ಓವರ್​ ಇಂಟರ್ನೆಟ್​ ಪ್ರೋಟೋಕಾಲ್ ಎಕ್ಸ್​ಚೇಂಜ್​ ​(ವಿಒಐಪಿ) ಅನ್ನು ಬಳಸಿಕೊಂಡು ಲಡಾಖ್​ನಲ್ಲಿರುವ ಭಾರತೀಯ ರಕ್ಷಣಾ ಪಡೆಯ ಮಾಹಿತಿಯನ್ನು ಕಲೆಹಾಕುವ ಪ್ರಯತ್ನಕ್ಕೆ ಪಾಕ್​ ಬೇಹುಗಾರಿಕೆ ಜಾಲ ಕೈಹಾಕಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಸಾರ್ವಜನಿಕರ ಕರೆ ಸ್ವೀಕರಿಸದಿದ್ದರೆ ಕಠಿಣ ಕ್ರಮ; ಬಿಎಸ್​ವೈ
ಮುಂಬೈನಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ಮತ್ತಷ್ಟು ಮಂದಿ ಇದರಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಅಲ್ಲದೆ, ಇನ್ನಿತರ ಸ್ಥಳಗಳ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.
ಕಾರ್ಯಾಚರಣೆ ಸ್ಥಳದಲ್ಲಿ 191 ಸಿಮ್​ ಕಾರ್ಡ್​ ಸೇರಿದಂತೆ ಕಾರ್ಯನಿರ್ವಹಿಸುವ ಮೂರು ಸಿಮ್​ ಬಾಕ್ಸ್​, ಒಂದು ಸ್ಟ್ಯಾಂಡ್​ಬೈ ಸಿಮ್​ ಬಾಕ್ಸ್​, ಲ್ಯಾಪ್​ಟಾಪ್​, ಆಂಟೇನಾ, ಬ್ಯಾಟರಿಗಳು ಮತ್ತು ಕನೆಕ್ಟರ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೇ ಆರಂಭದಿಂದಲೂ ವಿಒಐಪಿ ಎಕ್ಸ್​ಚೇಂಜ್​ ಬಳಸಿಕೊಂಡು ಮಾಹಿತಿ ಕನ್ನ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗಿದ್ದು, ಅನೇಕ ಸಂಶಯಾಸ್ಪದ ನಂಬರ್​ನಿಂದ ಕರೆಗಳು ಬಂದಿವೆ. ಹೀಗೆ ಬಂದಂತಹ ಕರೆಗಳು ಲಡಾಖ್​ ಸಂಬಂಧಿತ ಮಾಹಿತಿಗಳನ್ನು ಕೇಳುತ್ತಿದ್ದರು ಎಂದು ಬಹಿರಂಗವಾಗಿದೆ. ಮುಂಬೈನಲ್ಲಿ ಕೆಲವು ಅಕ್ರಮ ವಿಒಐಪಿ ಎಕ್ಸ್​ಚೇಂಜ್​ಗಳಿವೆ ಎಂದು ಎರಡು ತನಿಖಾ ಸಂಸ್ಥೆಗಳು ಸಹ ತಿಳಿಸಿದ್ದು, ಪಾಕಿಸ್ತಾನದಿಂದ ಬರುತ್ತಿದ್ದ ಕರೆಗಳಿಂದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತಿತ್ತು ಎಂಬುದು ಸದ್ಯದ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ. ​
ಇದನ್ನೂ ಓದಿ:ಲಡಾಖ್​ ಬಿಕ್ಕಟ್ಟು ಪರಿಹಾರಕ್ಕೆ ಚೀನಾದೊಂದಿಗೆ ಮಾತುಕತೆಯ ಹಾದಿ
ಚೀನಾದ ಸಿಮ್​ ಬಾಕ್ಸ್​ ಬಳಸಿಕೊಂಡು ವಿಒಐಪಿ ಎಕ್ಸ್​ಚೇಂಜ್​ ಮೂಲಕ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಕಾರ್ಯ ಸಾಧಿಸುತ್ತಿದ್ದರು ಎಂದು ತಿಳಿದುಬಂದಿದೆ. ಸಿಮ್​ ಬಾಕ್ಸ್​ನಲ್ಲಿ ಅಕ್ರಮ ಐಎಂಐ ನಂಬರ್​ ಸಹ ಇದ್ದು, ಅದರ ಮೂಲವನ್ನು ಹುಡುಕುವುದು ಸಹ ತ್ರಾಸದಾಯಕವಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದ್ದು, ಮತ್ತಷ್ಟು ಮಾಹಿತಿಗಾಗಿ ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಲಡಾಖ್​ ಬಿಕ್ಕಟ್ಟು ಪರಿಹಾರಕ್ಕೆ ಚೀನಾದೊಂದಿಗೆ ಮಾತುಕತೆಯ ಹಾದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + nine =
Remember me
