ಇಸ್ಲಮಾಬಾದ್​:ಸಾರ್ಕ್ ರಾಷ್ಟ್ರಗಳ ಶೃಂಗದ ಆತಿಥ್ಯವಹಿಸುವುದಕ್ಕೆ ಸಿದ್ಧರಿದ್ದೇವೆ ಎಂಬ ಪ್ರಸ್ತಾವನೆಯನ್ನು ಪಾಕಿಸ್ತಾನ ಮುಂದಿಟ್ಟಿತ್ತು. ಆದರೆ, ಒಮ್ಮತ ಮೂಡದ ಕಾರಣ ಅದರ ಪ್ರಸ್ತಾವನೆ ಬಿದ್ದುಹೋಗಿದೆ. ಸಮಯ ಸಂದರ್ಭ ಗಮನಿಸದೇ ಆತಿಥ್ಯದ ಪ್ರಸ್ತಾವನೆ ಮುಂದಿಟ್ಟು ಮುಖಭಂಗಕ್ಕೆ ಒಳಗಾಗಿದೆ ಪಾಕಿಸ್ತಾನ.
ಪ್ರತಿವರ್ಷ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ಅದೇ ಅವಧಿಯಲ್ಲಿ ಸಾರ್ಕ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯೂ ನಡೆಯುತ್ತದೆ. ಕೋವಿಡ್ ಕಾರಣಕ್ಕೆ ಇದೇ ಮೊದಲ ಬಾರಿ ಸಾರ್ಕ್ ರಾಷ್ಟ್ರಗಳ ವಿದೇಶಾಂಗ ಸಚಿವ ಸಭೆ ವರ್ಚುವಲ್ ರೂಪದಲ್ಲಿ ನಡೆಯಿತು. ಇದೇ ವೇಳೆ, ಪಾಕಿಸ್ತಾನ ಶೃಂಗ ಆತಿಥ್ಯವಹಿಸುವ ಪ್ರಸ್ತಾವನೆ ಮುಂದಿಟ್ಟಿದೆ. ಆದರೆ, ಕೋವಿಡ್ ಸೋಂಕಿನ ಕಾರಣ ಎಲ್ಲ ರಾಷ್ಟ್ರಗಳೂ ಅದರ ವಿರುದ್ಧದ ಕಾರ್ಯದಲ್ಲಿ ತೊಡಗಿರುವ ಕಾರಣ ಶೃಂಗ ಏರ್ಪಡಿಸುವುದಕ್ಕೆ ಸರಿಯಾದ ಸಮಯವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದವು.
‘ಇದನ್ನೂ ಓದಿ:ತನಿಖಾ ಸಂಸ್ಥೆಗಳ ಅವಸ್ಥೆ ! ; ವಿಶೇಷ ಟೀಂಗಳಿಗೆ ನೂರೆಂಟು ಕಷ್ಟ
ಇಸ್ಲಮಾಬಾದ್​ನಲ್ಲಿ 2016ರಲ್ಲಿ ಶೃಂಗ ಆಯೋಜಿತವಾಗಿತ್ತು. ಆದರೆ, ಉರಿ ಉಗ್ರ ದಾಳಿಯ ಕಾರಣ ಭಾರತ ಶೃಂಗದಿಂದ ಹಿಂದೆ ಸರಿದಿತ್ತು. ಇದರ ಬೆನ್ನಿಗೆ ಇತರೆ ರಾಷ್ಟ್ರಗಳೂ ಭಾರತವನ್ನು ಬೆಂಬಲಿಸಿ ಶೃಂಗದಿಂದ ಹಿಂದೆ ಸರಿದಿದ್ದವು. ಅಲ್ಲಿಂದೀಚೆಗೆ ಶೃಂಗ ನಡೆದಿಲ್ಲ. (ಏಜೆನ್ಸೀಸ್)
VIDEO| ಗೂಡ್ಸ್ ರೈಲಿನ ಅಡಿಗೆ ಬಿದ್ದ ಎರಡು ವರ್ಷದ ಬಾಲಕ ಬಚಾವ್​ ಆಗಿದ್ದು ಹೇಗೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − seven =
Remember me
