ಲಖನೌ:ಅಯೋಧ್ಯೆಯ ವಿವಾದಿತ ಬಾಬ್ರಿ ಕಟ್ಟಡವನ್ನು ಧ್ವಂಸಗೊಳಿಸುವಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಕೈವಾಡವಿದ್ದ ಸಾಧ್ಯತೆ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಿಲ್ಲ ಎಂದು ಬುಧವಾರ ತೀರ್ಪು ನೀಡಿದ್ದ ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಭಾರತದಲ್ಲಿ ಕೋಮು ಗಲಭೆ ಸೃಷ್ಟಿಸಲಿಕ್ಕಾಗಿ ಮಸೀದಿಯನ್ನು ಧ್ವಂಸಗೊಳಿಸಿದ್ದಿರಬಹುದು ಎಂಬ ‘ಮಹತ್ವದ’ ಮಾಹಿತಿ ಬಗ್ಗೆ ತನಿಖೆ ನಡೆಸಿಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಧೀಶ
ಎಸ್.ಕೆ. ಯಾದವ್ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಪಾಕಿಸ್ತಾನದ ಆಯಾಮವನ್ನು ಪರಿಗಣಿಸದೆ ಹಾಗೂ ಅಲ್ಲಿನ ಬೇಹುಗಾರಿಕೆ ಸಂಸ್ಥೆಯ ಪಾತ್ರದ ಬಗ್ಗೆ ತನಿಖೆ ನಡೆಸದಿದ್ದರಿಂದ ಸಿಬಿಐ ವಾದ ‘ದುರ್ಬಲವಾಗಿತ್ತು’ ಎಂದು ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ದುರ್ಬಲ ಆರೋಪ:ಎಲ್.ಕೆ. ಆಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ, ವಿನಯ್ ಕಟಿಯಾರ್ ಮೊದಲಾದ ಪ್ರಮುಖ ನಾಯಕರ ವಿರುದ್ಧ ಬಾಬರಿ ಮಸೀದಿ ಕಟ್ಟಡ ಧ್ವಂಸ ಪಿತೂರಿ ಆರೋಪ ಪ್ರಬಲವಾಗಿರಲಿಲ್ಲ. ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಗಳ ಜನರು 1992ರ ಡಿಸೆಂಬರ್ 6ರಂದು ಸ್ಥಳೀಯ ಜನರ ಗುಂಪಿನಲ್ಲಿ ಸೇರಿಕೊಂಡು ಕಟ್ಟಡಕ್ಕೆ ಧಕ್ಕೆ ಉಂಟು ಮಾಡಬಹುದು ಎಂದು ಸ್ಥಳೀಯ ಗುಪ್ತಚರ ಘಟಕ (ಎಲ್​ಐಯು) ಡಿಸೆಂಬರ್ 5ರಂದು ಕಳಿಸಿದ್ದ ವರದಿ ಬಗ್ಗೆ ತನಿಖೆ ನಡೆಸದಿದ್ದುದೇ ಇದಕ್ಕೆ ಕಾರಣ ಎಂದಿದ್ದಾರೆ. ಕರಸೇವೆಗೆ ಅಡ್ಡಿಪಡಿಸುವ ಉದ್ದೇಶದಿಂದ ಕೋಮು ಅಶಾಂತಿ ಹುಟ್ಟಿಸಲೆಂದು ಕೆಲವರು ಡಿಸೆಂಬರ್ 2ರಂದು ಒಂದು ಮಜಾರ್​ಗೆ (ಮಂದಿರ) ಬೆಂಕಿ ಹಾಕಿದ್ದರು ಎಂದು ಸ್ಥಳೀಯ ಗುಪ್ತಚರ ವರದಿಗಳಿದ್ದವು ಎಂಬುದನ್ನು ಸುದೀರ್ಘ ತೀರ್ಪು ಉಲ್ಲೇಖಿಸಿದೆ. ಉತ್ತರ ಪ್ರದೇಶದ ಇನ್​ಸ್ಪೆಕ್ಟರ್ ಜನರಲ್ (ಭದ್ರತೆ) ಅವರೇ ಸಹಿ ಹಾಕಿದ್ದ ವರದಿಯನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ ಎಂದು ಕೋರ್ಟ್ ಹೇಳಿದೆ.
ಪಾಕಿಸ್ತಾನದಿಂದ ಬಂದ ಸ್ಪೋಟಕಗಳು ದೆಹಲಿ ಮೂಲಕ ಅಯೋಧ್ಯೆ ತಲುಪಿದ್ದವು ಎಂಬ ಬಗ್ಗೆಯೂ ವರದಿಗಳಿದ್ದು, ಸಿಬಿಐ ವಿಶೇಷ ನ್ಯಾಯಾಲಯ ಇದನ್ನು ಗಮನಿಸಿದೆ. ಜಮ್ಮು- ಕಾಶ್ಮೀರದ ಉಧಂಪುರ ಪ್ರದೇಶದಿಂದ ಸಮಾಜವಿರೋಧಿ ಹಾಗೂ ರಾಷ್ಟ್ರವಿರೋಧಿ ನೂರಾರು ಜನರು ಕರಸೇವಕರ ಸೋಗಿನಲ್ಲಿ ಅಯೋಧ್ಯೆಗೆ ಆಗಮಿಸುತ್ತಿದ್ದಾರೆ ಎಂದೂ ಇನ್ನೊಂದು ಗುಪ್ತಚರ ವರದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − six =
Remember me
