ಪಲಕ್ಕಾಡ್​:ಎರಡು ದಿನಗಳ ಹಿಂದೆ ಕೇರಳದ ಪಲಕ್ಕಾಡ್​ನಲ್ಲಿ ನಡೆದ ಒಂದು ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಮದುವೆಯಾಗಿ ಮೊದಲ ಬಾರಿ ಗಂಡನ ಮನೆಗೆ ಬಂದ ವಧು, ಅಲ್ಲಿನ ವಿಚಿತ್ರ ಸಂಸ್ಕೃತಿಯಿಂದ ಕಣ್ಣೀರು ಹಾಕಿದ ಪ್ರಸಂಗ ಜರುಗಿದೆ.
ಅಷ್ಟಕ್ಕೂ ನಡೆದಿದ್ದು ಏನೆಂದರೆ, ಮನೆಯ ಪ್ರವೇಶಕ್ಕೂ ಮುನ್ನ ನೂತನ ವಧು-ವರರಿಗೆ ಆರತಿ ಬೆಳಗಲಾಯಿತು. ಇನ್ನೇನು ವಧು, ಗಂಡನ ಮನೆಗೆ ಬಲಗಾಲು ಇಟ್ಟು ಪ್ರವೇಶ ಮಾಡಬೇಕು, ಅಷ್ಟರಲ್ಲಿ ಹಿಂದೆ ನಿಂತಿದ್ದ ಸಂಬಂಧಿಕರೊಬ್ಬರು ವಧು ಮತ್ತು ವರನ ತಲೆಯನ್ನು ಪರಸ್ಪರ ಡಿಕ್ಕಿ ಹೊಡೆಸುತ್ತಾರೆ.
ಇದನ್ನೂ ಓದಿ:VIDEO| ಬಿಗ್​​ಬಾಸ್​ ಮನೆಯಲ್ಲೇ ಲಿಪ್​ಲಾಕ್​​; ಒಬ್ಬರನೊಬ್ಬರು ತಬ್ಬಿಕೊಂಡು ಕ್ಯಾಮೆರಾ ಮುಂದೆ ಮೈ ಮರೆತ ಸ್ಪರ್ಧಿಗಳು!
ಅಂದಹಾಗೆ ಇದು ಅಲ್ಲಿನ ಸಂಪ್ರದಾಯವಂತೆ. ಹೊಸದಾಗಿ ಮದುವೆಯಾಗುವ ವಧು-ವರರ ತಲೆಯನ್ನು ಡಿಕ್ಕಿ ಹೊಡೆಸುವುದರ ಹಿಂದೆ ಒಳ್ಳೆಯ ಕಾರಣವಿದೆ ಎನ್ನುತ್ತಾರೆ. ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆಯಂತೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಡಿಕ್ಕಿ ಹೊಡೆದ ರಭಸಕ್ಕೆ ವಧು ಸ್ಥಳದಲ್ಲೇ ಕಣ್ಣೀರಾಕಿದ್ದಾಳೆ. ಈ ವೇಳೆ ವರ, ವಧುವನ್ನು ಸಮಾಧಾನ ಮಾಡಲು ಯತ್ನಿಸಿದ್ದಾನೆ. ಬಳಿಕ ಇಬ್ಬರು ಮನೆಯನ್ನು ಪ್ರವೇಶಿಸಿದ ದೃಶ್ಯ ವಿಡಿಯೋದಲ್ಲಿ ಇದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈ ವಿಚಿತ್ರ ಸಂಪ್ರದಾಯವ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗ ಸಹ ಸುಮಟೋ ಪ್ರಕರಣ ದಾಖಲಿಸಿಕೊಂಡಿದ್ದು, ತಕ್ಷಣ ವರದಿಯನ್ನು ಸಲ್ಲಿಸುವಂತೆ ಕೊಲ್ಲೆಂಗೋಡ್​ ಠಾಣಾ ಪೊಲೀಸರಿಗೆ ಸೂಚನೆ ನೀಡಿದೆ.
A post shared by 🔹💙Sachutty_sachooszsz_9198🧡🔸 (@the_mt_girl98)

ಜೂನ್​ 25ರಂದು ಪಲಕ್ಕಾಡ್​ನ ಪಲ್ಲಸ್ಸೇನಾ ಮೂಲದ ಸಚಿನ್​ ಮತ್ತು ಮುಕ್ಕಮ್​ ಮೂಲದ ಸಾಜ್ಲಾ ಮದುವೆಯಾದರು. ಈ ವಿಚಿತ್ರ ಆಚರಣೆಯ ವಿಡಿಯೋವನ್ನು ಸಾಜ್ಲಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೂ ಈ ವಿಡಿಯೋವನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.(ಏಜೆನ್ಸೀಸ್​)
ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಜಾರಿ: 5 ಕೆಜಿ ಅಕ್ಕಿ ಜತೆ ಖಾತೆಗೆ ಜಮಾ ಆಗಲಿದೆ ಹಣ

ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ ಈ ಫೋಟೋದಲ್ಲಿರುವ ನಾಯಿಯನ್ನು ಪತ್ತೆಹಚ್ಚಿ! ಶೇ. 90 ಮಂದಿ ಕೈಯಲ್ಲಿ ಆಗಿಲ್ಲ

ಕೆಟ್ಟರೂ ಬಾರದ ಬುದ್ಧಿ? ಭಾರಿ ದುರಂತ ನಡೆದರೂ ಟೈಟಾನಿಕ್​ ಯಾತ್ರೆಗೆ ಮತ್ತೊಮ್ಮೆ ಜಾಹೀರಾತು ನೀಡಿದ ಸಂಸ್ಥೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
