ಮುಂಬೈ:ಇದು ಸಿನಿಮಾದಲ್ಲಿ ಘಟನೆಯಂತಿದೆ. ಯುವಕನೊಬ್ಬ ತನ್ನನು ತಾನೇ ಅಪಹರಿಸಿಕೊಂಡು ತಂದೆಯಿಂದ ಹಣ ಲಪಟಾಯಿಸಲು ಮುಂದಾದ. ಆದರೆ, ಈ ಸಂದರ್ಭದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಸಿಕ್ಕಿಬಿದ್ದಿದ್ದು ಬಂಧನದ ಭೀತಿ ಎದುರಿಸುತ್ತಿದ್ದಾನೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 20 ವರ್ಷದ ಯುವಕನೊಬ್ಬ ತನ್ನ ತಂದೆಯಿಂದ ಹಣ ಪಡೆಯಲು ತಾನೇ ಅಪಹರಣಗೊಂಡ ಕಥೆಯನ್ನು ಸೃಷ್ಟಿಸಿದ್ದಾನೆ.ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.ವಸಾಯಿಯ ಫಾದರ್ವಾಡಿ ಪ್ರದೇಶದ ನಿವಾಸಿಯೊಬ್ಬರು ತಮ್ಮ ಮಗ ಡಿಸೆಂಬರ್ 7 ರಂದು ಮನೆಯಿಂದ ಹೊರಗೆ ಹೋಗಿದ್ದು, ವಾಪಸ್ ಬಂದಿಲ್ಲ ಎಂದು ಇಲ್ಲಿನ ವಲಿವ್ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ
ಪೊಲೀಸರು ನಾಪತ್ತೆ ಪ್ರಕರಣದ ಕುರಿತು ಬಗ್ಗೆ ತನಿಖೆ ನಡೆಸುತ್ತಿರುವಾಗ ಡಿಸೆಂಬರ್ 8ರಂದು ಮಗನು ತನ್ನ ತಂದೆಗೆ ಕರೆ ಮಾಡುತ್ತಾನೆ. ಮೂವರು ವ್ಯಕ್ತಿಗಳು ತನ್ನನ್ನು ಅಪಹರಿಸಿ ಸೆರೆಯಲ್ಲಿಟ್ಟು, 30,000 ರೂ. ನೀಡಿದರೆ ಬಿಡುಗಡೆ ಮಾಡುತ್ತಾರೆ. ಇದಲ್ಲದಿದ್ದರೆ ಕೊಲೆ ಮಾಡುತ್ತಾರೆ ಎಂದು ಮಗ ತಿಳಿಸುತ್ತಾನೆ. ಅಲ್ಲದೆ, ಮಗ ತನ್ನ ತಂದೆಗೆ QR ಕೋಡ್ ಕೂಡ ಕಳುಹಿಸುತ್ತಾನೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಿ, ವಸೈ, ವಿರಾರ್, ನಲ್ಲಸೋಪಾರ ಮತ್ತುಇತರ ಸ್ಥಳಗಳಲ್ಲಿ ಪೊಲೀಸರು ಶೋಧ ಆರಂಭಿಸಿದರು. ತನಂತರ ಈ ಯುವಕ ವಸೈ ಫಾಟಾದಲ್ಲಿ ಇರುವುದನ್ನು ಪತ್ತೆ ಮಾಡಲಾಯಿತು.ಶನಿವಾರ ಈ ಯುವಕನನ್ನು ಪೊಲೀಸರು ವಿಚಾರಿಸಿದಾಗ, ಹಣದ ಆಸೆಗಾಗಿ ಈ ಕಥೆ ಕಟ್ಟಿದ್ದಾಗಿ ತಿಳಿದುಬಂದಿದೆ.ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಯುವಕ ಈಗ ಬಂಧನದ ಭೀತಿ ಎದುರಿಸುತ್ತಿದ್ದಾನೆ.

ಛತ್ತೀಸ್​ಗಢಕ್ಕೆ ಇಬ್ಬರು ಡಿಸಿಎಂಗಳು: ಮಾಜಿ ಸಿಎಂ ಆಗಲಿದ್ದಾರೆ ಸ್ಪೀಕರ್

ಛತ್ತೀಸ್‌ಗಢ ಸಿಎಂ ಆಗಿ ಬುಡಕಟ್ಟು ನಾಯಕ ವಿಷ್ಣು ದೇವ್ ಸಾಯಿ ಆಯ್ಕೆ ಮಾಡಿದ್ದೇಕೆ?

ಅಮಾನವೀಯವಾಗಿ ನಾಯಿ ಮರಿ ಕೊಂದ; ಸಿಎಂ, ಸೆಂಟ್ರಲ್​ ಮಿನಿಸ್ಟರ್​ ಖಂಡಿಸಿದ್ದರಿಂದ ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seven =
Remember me
