ನವದೆಹಲಿ:ಪ್ಯಾನ್​ ಕಾರ್ಡ್​ಗೆ ಆಧಾರ್ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಇನ್ನೂ ಹಲವಾರು ಮಂದಿ ಇದನ್ನು ಮಾಡಿಲ್ಲ. ಮತ್ತೊಂದೆಡೆ ಪ್ಯಾನ್​ ಕಾರ್ಡ್​ಗೆ ಆಧಾರ್ ನಂಬರ್ ಲಿಂಕ್ ಮಾಡಲು ಇದೇ ಜೂ. 30 ಕಡೆಯ ದಿನವಾಗಿದ್ದರಿಂದ ಹಲವರು ಚಿಂತಿತರಾಗಿದ್ದರು. ಆದರೆ ಇದೀಗ ಅಂಥವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ.
ಅದೇನೆಂದರೆ ಪ್ಯಾನ್​ ಕಾರ್ಡ್​ ಹಾಗೂ ಆಧಾರ್ ನಂಬರ್ ಲಿಂಕ್ ಮಾಡಲು ವಿಧಿಸಲಾಗಿದ್ದ ಗಡುವನ್ನು ಸರ್ಕಾರ ಮುಂದೂಡಿದ್ದು, ಸಂಬಂಧಪಟ್ಟವರಿಗೆ ಇನ್ನೂ ಒಂದಷ್ಟ ದಿನಗಳ ಕಾಲಾವಕಾಶ ಸಿಗಲಿದೆ. ಈ ಹಿಂದೆ 2021ರ ಮಾರ್ಚ್ 31ಕ್ಕೆ ಮುಗಿದಿದ್ದ ಗಡುವನ್ನು ವಿಸ್ತರಿಸಿ ಜೂ. 30ರ ವರೆಗೆ ಅವಕಾಶ ನೀಡಲಾಗಿತ್ತು. ಈಗ ಕೊನೆಯ ದಿನಾಂಕವನ್ನು ಮತ್ತೆ ಪರಿಷ್ಕರಿಸಿ ಸೆ. 30ರ ವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ:ಕರೊನಾ ಮೂರನೇ ಅಲೆಯನ್ನು ತಡೆಯಬಹುದಂತೆ!; ಅದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ…
ಲಿಂಕ್ ಮಾಡದಿದ್ದರೆ ಏನಾಗುತ್ತೆ?:ಪ್ಯಾನ್​ ಕಾರ್ಡ್​ ಹಾಗೂ ಆಧಾರ್ ನಂಬರ್ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರಿಯವಾಗಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಈ ಹಿಂದೆಯೇ ತಿಳಿಸಿದೆ. ಅಲ್ಲದೆ ಒಂದು ವೇಳೆ ಕಡೆಯ ದಿನಾಂಕದ ಬಳಿಕ ಲಿಂಕ್ ಮಾಡಿದರೆ ಅದರ ಬಗ್ಗೆ ಗಮನಕ್ಕೆ ತಂದಲ್ಲಿ ಆಧಾರ್​ನಿಂದ ಮಾಹಿತಿ ಬರುತ್ತಿದ್ದಂತೆ ಪ್ಯಾನ್​ ಕಾರ್ಡ್​ ಮತ್ತೆ ಸಕ್ರಿಯಗೊಳ್ಳಲಿದೆ ಎಂಬುದನ್ನೂ ಸಿಬಿಡಿಟಿ ಸ್ಪಷ್ಟಪಡಿಸಿತ್ತು. ಇನ್ನು ಆದಾಯ ತೆರಿಗೆ ಕಾಯ್ದೆ 1961ರ ಹೊಸ ಸೆಕ್ಷನ್​ 234 ಎಚ್​ ಕುರಿತು 2021ರ ಬಜೆಟ್​ನಲ್ಲಿ ತಿಳಿಸಿದ್ದ ಸರ್ಕಾರ, ಕಡೇ ದಿನಾಂಕದ ಬಳಿಕ ದಂಡ ಪಾವತಿಸಿದರೆ ಪ್ಯಾನ್ ಕಾರ್ಡ್​ ಮತ್ತು ಆಧಾರ್ ನಂಬರ್ ಲಿಂಕ್ ಮಾಡಲು ಅವಕಾಶ ಇದೆ ಎಂದು ಹೇಳಿತ್ತು. ಈ ಸಂಬಂಧ 10 ಸಾವಿರ ರೂಪಾಯಿ ದಂಡ ವಿಧಿಸುವ ಅವಕಾಶವಿದೆ. ಹೀಗಾಗಿ ಸಾರ್ವಜನಿಕರು ಕಡೇ ದಿನಾಂಕದೊಳಗೆ ಪ್ಯಾನ್​ ಕಾರ್ಡ್ ಮತ್ತು ಆಧಾರ್ ನಂಬರ್ ಲಿಂಕ್ ಮಾಡಿಕೊಳ್ಳುವುದು ಒಳಿತು.
ಲಿಂಕ್ ಹೇಗೆ?:ಪ್ಯಾನ್​ ಕಾರ್ಡ್ ಮತ್ತು ಆಧಾರ್ ನಂಬರ್ ಲಿಂಕ್ ಮಾಡಲು ಹೀಗೆ ಮಾಡಬೇಕು.SMS <UIDAIPAN (12 digit Aadhaar number) space (10 digit PAN Number)> at 567678 or 56161.
ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

ಹೆದರಿ ಓಡಿ ಹೋಗಿದ್ದವರೆಲ್ಲ ಈಕೆಯನ್ನು ನೋಡಿ ಲಸಿಕೆ ಪಡೆದ್ರು; ಊರಿಗೇ ಮಾದರಿ 96ರ ಈ ಆಧಾರ್ ಕುಮಾರಿ!

ಕೇಂದ್ರ ಸಚಿವರ ಟ್ವಿಟರ್​ ಖಾತೆಯೇ ಬ್ಲಾಕ್; ಕಾಯ್ದೆ ಪಾಲಿಸಿ ಎಂದಿದ್ದವರಿಗೆ ಕಾನೂನು ಹೆಸರಲ್ಲೇ ಕಾಲೆಳೆಯಿತಾ ಟ್ವಿಟರ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + eight =
Remember me
