|ಕೆ.ಎಸ್. ಪ್ರಣವಕುಮಾರ್ಚಿತ್ರದುರ್ಗ
ಕೇಂದ್ರ ಸರ್ಕಾರ ಕಳೆದ ಹಲವು ವರ್ಷಗಳಿಂದ ಪಾನ್​ಕಾರ್ಡ್​ಗೆ ಆಧಾರ್ ಕಾರ್ಡ್ ಸಂಖ್ಯೆ ಜೋಡಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತಲೇ ಬಂದಿದ್ದು, ಇದಕ್ಕಾಗಿ ಅವಧಿಯನ್ನು ವಿಸ್ತರಿಸುತ್ತಲೇ ಇದೆ. ಆದರೆ, ಇದುವರೆಗೂ ಶೇ.100 ಗುರಿ ಸಾಧ್ಯವಾಗಿಲ್ಲ. ಇದೀಗ ಮಾ.31 ಕೊನೆಯ ಅವಕಾಶವೆಂದು ಹೇಳಿದೆ. ಈ ಅವಧಿಯಲ್ಲೂ ಲಿಂಕ್ ಸಾಧ್ಯವಾಗದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ.
ಆದಾಯ ತೆರಿಗೆ ವಂಚನೆ, ಬೇನಾಮಿ ಆಸ್ತಿ, ಹೊರದೇಶಗಳಿಂದ ಹರಿದುಬರುವ ಹಣದ ಮೇಲೆ ತೀವ್ರ ನಿಗಾ ಸೇರಿ ಹಣಕಾಸು ಅಕ್ರಮಗಳಿಗೆ ಕಡಿವಾಣ ಹಾಕಲು ಇದರಿಂದ ಸಾಧ್ಯವಾಗಲಿದೆ. ಅಂದಾಜು 142 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ 61 ಕೋಟಿಗೂ ಹೆಚ್ಚು ಮಂದಿ ಪಾನ್ ಕಾರ್ಡ್ ಹೊಂದಿದ್ದಾರೆ. ಅದರಲ್ಲಿ 2023ರ ಫೆಬ್ರವರಿ ಅಂತ್ಯದೊಳಗೆ 48.5 ಕೋಟಿ ಜನರ ಆಧಾರ್ ಕಾರ್ಡ್​ನೊಂದಿಗೆ ಜೋಡಣೆಯಾಗಿದೆ. ಇನ್ನುಳಿದವರು ಗಡುವಿನೊಳಗೆ ಲಿಂಕ್ ಮಾಡಲೇಬೇಕಿದೆ. ದೇಶದಲ್ಲಿ 2017 ಜು.1ರಂದು ಎರಡೂ ಕಾರ್ಡ್ ಗಳ ಲಿಂಕ್ ಪ್ರಕ್ರಿಯೆ ಆರಂಭವಾಯಿತು. ಅಂದಿನಿಂದ 2022ರ ಮಾ.31ರ ವರೆಗೂ ಏಳೆಂಟು ಬಾರಿ ಅವಧಿ ವಿಸ್ತರಣೆ ಮಾಡಲಾಗಿದೆ. ಆದರೂ ಶೇ.100 ಗುರಿ ಸಾಧ್ಯವಾಗಿಲ್ಲ. ಹೀಗಾಗಿ ದಂಡಸಹಿತ ಪ್ರಸಕ್ತ ಸಾಲಿನ ಮಾ.31ರವರೆಗೂ ಅವಧಿ ವಿಸ್ತರಿಸಿದೆ. ನಂತರ 10 ಸಾವಿರ ರೂ.ಗೆ ದಂಡ ಹೆಚ್ಚಿಸಲು ಚಿಂತನೆ ನಡೆಸಿದೆ.
ಮತ್ತೆ ಪಾನ್ ಪಡೆಯಲು ಸಾಧ್ಯವಿಲ್ಲ?:ಒಮ್ಮೆ ಪಾನ್ ಕಾರ್ಡ್ ಪಡೆದವರು ನೋಡೋಣ ಬಿಡು ಎಂದು ಲಿಂಕ್ ಮಾಡಿಸಲು ಅಸಡ್ಡೆ ತೋರಿ, ನಿಷ್ಕ್ರಿಯವಾದರೆ, ಮತ್ತೆ ಹೊಸ ಪಾನ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ ಎನ್ನಲಾಗಿದೆ.
ಜೋಡಣೆ ಆಗದಿದ್ದಲ್ಲಿ ಸರ್ಕಾರದ ಸೌಲಭ್ಯ ಪಡೆಯಲು ತೊಂದರೆ ಉಂಟಾಗಬಹುದು. ಈವರೆಗೂ ಲಿಂಕ್ ಮಾಡದವರು ಆದ್ದರಿಂದ ನಿಯಮಾನುಸಾರ ಇದೇ ತಿಂಗಳೊಳಗೆ ಮಾಡಿಸಿಕೊಳ್ಳಬೇಕು.
|ಚಂದ್ರಯ್ಯ ಹಿರೇಮಠಚಿತ್ರದುರ್ಗ ಲೀಡ್ ಬ್ಯಾಂಕ್ ವ್ಯವಸ್ಥಾಪಕ
ನಿಷ್ಕ್ರಿಯಗೊಂಡರೆ ತೊಂದರೆಗಳೇನು?:ಪಾನ್ ಕಾರ್ಡ್ ನಿಷ್ಕ್ರಿಯಗೊಂಡಲ್ಲಿ ಪಾನ್​ಗೆ ಜೋಡಣೆ ಮಾಡಲಾದ ಎಲ್ಲ ಬಗೆಯ ಹಣಕಾಸಿನ ವಹಿವಾಟು ಸ್ಥಗಿತಗೊಳ್ಳಲಿದೆ. ಹೆಚ್ಚುವರಿಯಾಗಿ ಆದಾಯ ತೆರಿಗೆ ಬಾಕಿ ರಿಟರ್ನ್ಸ್ ಪ್ರಕ್ರಿಯೆ ನಿಲ್ಲಲಿದೆ. 50 ಸಾವಿರಕ್ಕಿಂತ ಹೆಚ್ಚು ಮೊತ್ತದ ವಹಿವಾಟು ಬ್ಯಾಂಕ್​ಗಳ ಮೂಲಕ ನಡೆಸಲು ಸಾಧ್ಯವಾಗುವುದಿಲ್ಲ. ಇದರಿಂದ ವ್ಯವಹಾರ ಚಟುವಟಿಕೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಲಿದೆ. ರಾಷ್ಟ್ರೀಕೃತ, ಪ್ರಾದೇಶಿಕ ಸೇರಿ ಯಾವ ಬ್ಯಾಂಕ್​ಗಳಲ್ಲಿಯೂ ಸಾಲ ಸೌಲಭ್ಯ ಸಿಗುವುದಿಲ್ಲ. ಸುರಕ್ಷಿತ ಹಣಕಾಸಿನ ವ್ಯವಹಾರಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ಒಟ್ಟಾರೆ ಬ್ಯಾಂಕ್ ಗ್ರಾಹಕರು ಅಡಚಣೆಗಳಿಗೆ ಸಿಲುಕಲಿದ್ದಾರೆ.
ಲಿಂಕ್ ಏಕೆ ಕಡ್ಡಾಯ?:ಅನಧಿಕೃತ ಪಾನ್ ಸಂಖ್ಯೆ ಸೃಷ್ಟಿಸಿಕೊಂಡು ವಂಚಿಸಿರುವ ಪ್ರಕರಣಗಳು ಬೆಳಕಿಗೆ ಬಂದ ಕಾರಣ ಈ ನಿರ್ಧಾರ ಕೈಗೊಂಡಿದೆ. ಅಂತೆಯೇ, ಹೊಸ ಪಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸುವವರು ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯ. ಇದಕ್ಕೂ ಮೊದಲೇ ಪಾನ್ ಕಾರ್ಡ್ ಹೊಂದಿದ್ದವರು ಸರ್ಕಾರ ನಿಗದಿ ಪಡಿಸಿದ ಸಮಯಕ್ಕೂ ಮೊದಲೇ ಆಧಾರ್ ಜತೆ ಲಿಂಕ್ ಮಾಡಬೇಕಿದೆ. ಇಲ್ಲದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಬ್ಯಾಂಕ್ ಮೂಲಕ ಹಣಕಾಸು ಚಟುವಟಿಕೆ ನಡೆಸಲು, ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಲು, ಆನ್​ಲೈನ್ ವಹಿವಾಟು ಸಂಬಂಧ ಕೆವೈಸಿವರೆಗೂ, ಹೀಗೆ ಹಲವು ಹಣಕಾಸಿನ ಚಟುವಟಿಕೆಗಳಿಗೆ ಪಾನ್ ಕಾರ್ಡ್ ಅಗತ್ಯ.
ಪಾನ್ ಲಿಂಕ್ ಮಾಡುವುದು ಹೇಗೆ?:ಸಾರ್ವಜನಿಕರು ಆದಾಯ ತೆರಿಗೆ ಇಲಾಖೆ ವೆಬ್​ಸೈಟ್http://bit.ly/3YMHTyMಗೆ ಭೇಟಿ ನೀಡುವ ಮೂಲಕ ಪಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬಹುದು.
ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × four =
Remember me
