‘ದೇಶ ನೂರಕ್ಕೆ ನೂರಷ್ಟು ಅಭಿವೃದ್ಧಿ ಸಾಧಿಸಲು ಎಲ್ಲರ ಪ್ರಯತ್ನ (ಸಬ್ಕಾ ಪ್ರಯಾಸ್) ಅಗತ್ಯ. ಮುಂದಿನ 25 ವರ್ಷ ಭಾರತ ಹೊಸ ಪ್ರತಿಜ್ಞೆಯಿಂದ ಮುನ್ನಡೆದರಷ್ಟೇ ಇದು ಸಾಧ್ಯ’ ಇದು 75ನೇ ಸ್ವಾತಂತ್ರೊ್ಯೕತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ನೀಡಿದ ಗುರಿ. ಇಂದಿನಿಂದ ‘ಆಜಾದಿ ಕಾ ಅಮೃತ ಮಹೋತ್ಸವ’ವನ್ನು ಎರಡು ವರ್ಷಗಳ ಕಾಲ ಆಚರಿಸಲಾಗುವುದು. ಜಮ್ಮು-ಕಾಶ್ಮೀರದಲ್ಲಿ ಈಗ ಪರಿವರ್ತನೆ ಕಾಣಲಾರಂಭಿಸಿದೆ. ಇದು ಲಡಾಖ್​ನಿಂದ ಶುರುವಾಗಿ ಹಿಮಾಲಯದುದ್ದಕ್ಕೂ ಚಾಚಿರುವ ಪೂರ್ವ ಭಾರತ, ಈಶಾನ್ಯ ಭಾರತ, ಉಭಯ ಕರಾವಳಿಗಳು, ಗುಡ್ಡಗಾಡು ಪ್ರದೇಶಗಳು ದೇಶದ ಭವಿಷ್ಯದ ಅಭಿವೃದ್ಧಿಯ ಪ್ರಮುಖ ತಾಣಗಳು ಎಂದರು.

ಬೆಂಗಳೂರು:ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಚಿರಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗ್ರಾಮೀಣಾಭಿವೃದ್ಧಿ, ಯುವಜನ ಕೌಶಲ, ಶಾಲೆಗಳ ಅಭಿವೃದ್ಧಿ, ಕ್ರೀಡೆ ಹಾಗೂ ಸ್ವ ಸಹಾಯ ಗುಂಪುಗಳ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಭಾನುವಾರ ಧ್ವಜಾರೋಹಣ ನೆರವೇರಿಸಿ ಅವರು ನಾಡಿನ ಜನತೆಗೆ ಸ್ವಾತಂತ್ರೊ್ಯೕತ್ಸವ ಸಂದೇಶ ನೀಡಿದರು. ರೈತ, ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ, ಮಾರಾಟದ ಪೋ›ತ್ಸಾಹಕ್ಕೆ 750 ಅಮೃತ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ. ಪ್ರತಿ ಸಂಸ್ಥೆಗೆ 30 ಲಕ್ಷ ರೂ.ನಂತೆ ಮೂರು ವರ್ಷದ ಅವಧಿಗೆ 225 ಕೋಟಿ ರೂ. ಅನುದಾನ ಕೊಡಲಾಗುತ್ತದೆ.
ರಾಜಧಾನಿ ಅಭಿವೃದ್ಧಿಗೆ ಒತ್ತು:ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಅಮೃತ ನಗರೋತ್ಥಾನ ಯೋಜನೆ ಪ್ರಾರಂಭ. ಇದರಡಿ ನಗರದ 75 ಕೊಳೆಗೇರಿ ಅಭಿವೃದ್ಧಿ, 75 ಕೆರೆ ಅಥವಾ ಉದ್ಯಾನಗಳ ಅಭಿವೃದ್ಧಿ ಮಾಡಲಾಗುತ್ತದೆ. ಇನ್ನು ಸುಗಮ ಸಂಚಾರಕ್ಕೆ 12 ಹೈ ಡೆನ್ಸಿಟಿ ಕಾರಿಡಾರ್ ಅಭಿವೃದ್ಧಿ, ಮೇಲ್ಸೇತುವೆ, ರಿಂಗ್ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತದೆ. 75 ಸ್ಟಾರ್ಟ್​ಅಪ್ ಉದ್ಯಮಗಳಿಗೆ ಉತ್ತೇಜನ ನೀಡುವುದು. 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಅಮೃತ ನಿರ್ಮಲ ನಗರ ಯೋಜನೆ ರೂಪಿಸಿ, ಸ್ಥಳೀಯ ಸಂಸ್ಥೆಗೆ ತಲಾ 1 ಕೋಟಿ ರೂ. ನೆರವು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೆಂಪುಕೋಟೆಗೆ ಹೊರಡುವುದಕ್ಕೂ ಮುನ್ನವೆ ದೇಶವಾಸಿಗಳಿಗೆ 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರುವ ಟ್ವೀಟ್ ಮಾಡಿದ ಮೋದಿ, ‘ಆಜಾದಿ ಕಾ ಅಮೃತ ಮಹೋತ್ಸವ’ವು ಜನರಲ್ಲಿ ಹೊಸ ಶಕ್ತಿಯನ್ನು ತುಂಬಲಿ ಜೈ ಹಿಂದ್ ಎಂದು ಹಾರೈಸಿದರು. ಕರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಸ್ವಾತಂತ್ರೊ್ಯೕತ್ಸವವು ಸೀಮಿತ ಸಂಖ್ಯೆಯಲ್ಲಿ ಗಣ್ಯರ ಪಾಲ್ಗೊಳ್ಳುವಿಕೆ ಮೂಲಕ ನಡೆಯಿತು. ಉಗ್ರರ ಆತಂಕದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಡ್ರೋನ್ ಪ್ರತಿಬಂಧಕ ರಕ್ಷಣಾ ವ್ಯವಸ್ಥೆಯನ್ನು ದೆಹಲಿಯ ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − thirteen =
Remember me
