ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಸತತ 9ನೇ ವರ್ಷ ಸ್ವಾತಂತ್ರೊ್ಯೕತ್ಸವದ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಭಾರತದ ಮುನ್ನೋಟ ಹರವಿದರು. ಪ್ರಸ್ತುತ ಕಾಡುತ್ತಿರುವ ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿಗೆ ಪಂಚಸೂತ್ರಗಳನ್ನು ಮಂಡಿಸಿದರು. ಇತ್ತ, ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಐದು ಹೊಸ ಯೋಜನೆಗಳನ್ನು ಘೋಷಿಸಿದರು. ಸೈನಿಕರು, ಕಾರ್ವಿುಕರು ಹಾಗೂ ಕುಶಲಕರ್ವಿುಗಳಿಗೆ ನೆರವು ಪ್ರಕಟಿಸಿದರು. ಮಾತ್ರವಲ್ಲ, ಕಳೆದ ಬಾರಿ ನೀಡಿದ್ದ ಭರವಸೆಗಳ ಅನುಷ್ಠಾನಕ್ಕೆ ಸರ್ಕಾರ ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡಿದೆ ಎಂದು ಹೇಳಿದರು.
ನವದೆಹಲಿ:ಐದು ಪ್ರತಿಜ್ಞೆಗಳ ಮೂಲಕ ಅಭಿವೃದ್ಧಿ ಹೊಂದಿದ ಭಾರತದ ನಿರ್ವಣಕ್ಕಾಗಿ ಮುಂದಿನ 25 ವರ್ಷಗಳ ಮಾರ್ಗಸೂಚಿ ರೂಪಿಸುವುದು, ಮಹಿಳೆಯರನ್ನು ಗೌರವಿಸುವ ಸ್ಪಷ್ಟ ಕರೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ ವಿರೋಧಿ ನಿಲುವು, ಆತ್ಮನಿರ್ಭರದ ಮೇಲೆ ಗಮನ ಕೇಂದ್ರೀಕರಣ… ಕೆಂಪುಕೋಟೆಯಲ್ಲಿ ಸತತ 9ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿ ಮಾಡಿದ ಅಂದಾಜು 83 ನಿಮಿಷಗಳ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ ಪ್ರಮುಖ ಅಂಶಗಳಿವು.
ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಪ್ರಧಾನಿ ಮೋದಿ ಮುಂದಿನ 25 ವರ್ಷಗಳಿಗೆ (2047-ಸ್ವಾತಂತ್ರ್ಯದ ಶತಮಾನೋತ್ಸವ) ಅನ್ವಯವಾಗುವಂತೆ ‘ಭಾರತ-100’ ಎಂಬ ದೂರದೃಷ್ಟಿಯ ಕಾರ್ಯಸೂಚಿಯನ್ನು ರೂಪಿಸಬೇಕು ಎಂದು ಕರೆ ನೀಡಿದ್ದಾರೆ. ಈ ಅಮೃತ ಕಾಲದಲ್ಲಿ ನಾವು ಒಗ್ಗೂಡಬೇಕು ಮತ್ತು ಅಭಿವೃದ್ಧಿ ಹೊಂದಿದ ಭಾರತದ ಗುರಿಯತ್ತ ಕೆಲಸ ಮಾಡಬೇಕು ಎಂದರು. ಕಳೆದ 8 ವರ್ಷಗಳಲ್ಲಿ ಮಹಿಳಾ ಮತದಾರರು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ ಮತ್ತು ಮೋದಿ ಈ ಭಾಷಣದಲ್ಲೂ ಮಹಿಳಾ ಕಲ್ಯಾಣದ ಬಗ್ಗೆ ಪ್ರಸ್ತಾಪಿಸಿದರು.
ಅಪರಾಧಿಗಳಿಗೇಕೆ ಸಹಾನುಭೂತಿ?:ಭ್ರಷ್ಟಾಚಾರದಲ್ಲಿ ಶಿಕ್ಷೆ ಅನುಭವಿಸಿ ಜೈಲು ಪಾಲಾದವರ ಬಗ್ಗೆ ಜನರು ಸಹಾನುಭೂತಿ ಹೊಂದಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಪ್ರಧಾನಿ, ‘ದೇಶದಲ್ಲಿ ಕೆಲವರಿಗೆ ವಾಸ್ತವ್ಯಕ್ಕೆ ಮನೆಗಳಿಲ್ಲ. ಆದರೆ, ಅಕ್ರಮ ಸಂಪತ್ತು ಮಾಡಿದವರಿಗೆ ತಮ್ಮ ಸಂಪತ್ತನ್ನು ಶೇಖರಿಸಲು ಇರುವ ಮನೆ ಸಾಕಾಗುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನಾವು ನಿರ್ಣಾಯಕ ಹಂತವನ್ನು ಪ್ರವೇಶಿಸುತ್ತಿದ್ದೇವೆ. ವ್ಯಕ್ತಿ ಎಷ್ಟೇ ಪ್ರಭಾವಿ ಅಥವಾ ಬಲಿಷ್ಠನಾಗಿದ್ದರೂ ಸಹಿಸುವುದಿಲ್ಲ’ ಎಂದು ಸೋನಿಯಾ ಮತ್ತು ರಾಹುಲ್ ಗಾಂಧಿ ವಿರುದ್ಧದ ತನಿಖೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದರು.
ಭವಿಷ್ಯದ ಮಾರ್ಗಸೂಚಿ:ದೇಶ ಮತ್ತದರ ಸಾಧನೆಗಳ ಬಗ್ಗೆ ಹೆಮ್ಮೆಪಡುವಂತೆ ಒತ್ತಿ ಹೇಳಿದ ಪ್ರಧಾನಿ, ನಮ್ಮ ಸಾಧನೆಗೆ ವಿದೇಶ ಗಳ ಪ್ರಮಾಣಪತ್ರ ಬೇಕಿಲ್ಲ. ಸ್ವಾವ ಲಂಬನೆಯೇ ಭವಿಷ್ಯದ ಮಾರ್ಗ ಸೂಚಿ. ಮುಂದಿನ 25 ವರ್ಷಗಳವರೆಗೆ ನಾವು ತೆಗೆದುಕೊಳ್ಳಬೇಕಾದ 5 ಪ್ರತಿಜ್ಞೆಗಳನ್ನು ವಿವರಿಸಿ, ಭಾರತವು ವಸಾಹತುಶಾಹಿ ಮನಸ್ಥಿತಿಯ ಕುರುಹುಗಳನ್ನು ತೆಗೆದುಹಾಕಬೇಕು, ನಮ್ಮ ಪರಂಪರೆ-ಬೇರುಗಳ ಬಗ್ಗೆ ಹೆಮ್ಮೆಪಡಬೇಕು, ಅಭಿವೃದ್ಧಿ ಹೊಂದಿದ ಭಾರತವೇ ಏಕೈಕ ಗುರಿಯಾಗಬೇಕು ಎಂದರು.
ಕಳೆದ ಎಂಟು ವರ್ಷಗಳಲ್ಲಿ ಮಹಿಳೆಯರನ್ನು ಕೇಂದ್ರೀಕರಿಸಿ ಅನೇಕ ಯೋಜನೆ ರೂಪಿಸಿದ್ದೇವೆ. ದೇಶದಲ್ಲಿ ಮಹಿಳೆಯರ ಬಗ್ಗೆ ತೋರುತ್ತಿರುವ ಅಗೌರವ ತೀವ್ರ ನೋವು ತರುತ್ತಿದೆ. ಲಿಂಗ ಸಮಾನತೆ ಇಂದಿನ ಅಗತ್ಯ. ಮಾತು ಮತ್ತು ನಡವಳಿಕೆಯಲ್ಲಿ ಮಹಿಳೆಯರ ಘನತೆ ಕುಗ್ಗಿಸುವ ಯಾವುದನ್ನೂ ನಾವು ಪೋ›ತ್ಸಾಹಿಸುವುದಿಲ್ಲ.
| ನರೇಂದ್ರ ಮೋದಿಪ್ರಧಾನಿ
ಅನಾಮಧೇಯರಿಗೆ ಗೌರವ:ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ದೇಶವನ್ನು ವಶಕ್ಕೆ ಪಡೆದು ಆಡಳಿತ ಆರಂಭಿಸಿದ 50-60 ವರ್ಷಗಳಲ್ಲಿಯೇ ಸ್ವಾತಂತ್ರ್ಯ ಹೋರಾಟ ಆರಂಭವಾಗಿತ್ತು. ಸುದೀರ್ಘ 150 ವರ್ಷಗಳಿಗೂ ಅಧಿಕ ಕಾಲ ಈ ಹೋರಾಟ ಸಾಗಿ ಬಂದಿದ್ದು, ಲಕ್ಷಾಂತರ ಅನಾಮಧೇಯ ಹೋರಾಟಗಾರರು ತ್ಯಾಗ, ಬಲಿದಾನ ಮಾಡಿದ್ದಾರೆ. ಇಂತಹ ಹೋರಾಟಗಾರರಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನ ಅರ್ಪಿಸಲಾಗುತ್ತದೆ ಎಂದು ಸಿಎಂ ಪ್ರಕಟಿಸಿದರು.
ಸೈನಿಕರು, ಕಾರ್ವಿುಕರಿಗೆ ನೆರವು: ಮಾಣೆಕ್ ಷಾ ಮೈದಾನದಲ್ಲಿ ಸಿಎಂ ಘೋಷಣೆ:ದೇಶ ಕಾಯುವ ಸೈನಿಕರ ಕುಟುಂಬ, ಕುಶಲಕರ್ವಿುಗಳು ಹಾಗೂ ಕಾರ್ವಿುಕರ ವರ್ಗಕ್ಕೆ ನೆರವಾಗುವ ಉದ್ದೇಶದಿಂದ ಮಹತ್ವದ ಐದು ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಸೋಮವಾರ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ 76 ನೇ ಸ್ವಾತಂತ್ರೊ್ಯೕತ್ಸವದ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಘೋಷಣೆ ಮಾಡಿದರು.
1.ಹುತಾತ್ಮರ ಕುಟುಂಬಕ್ಕೆ ನೌಕರಿ
ಸೈನಿಕರು ಗಡಿಗಳಲ್ಲಿ ಮಳೆ-ಬಿಸಿಲೆನ್ನದೆ ಪ್ರಾಣ ಪಣಕ್ಕಿಟ್ಟು ಕೆಚ್ಚೆದೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ರಾಜ್ಯದ ಸೈನಿಕರು ಕರ್ತವ್ಯ ನಿರ್ವಹಿಸುವಾಗ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಜತೆಗೆ, ಅವರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲಾಗುತ್ತದೆ.
2.ಶಾಲಾ-ಕಾಲೇಜಲ್ಲಿ ಶೌಚಗೃಹ
ರಾಜ್ಯದ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣಕ್ಕಾಗಿ ಎಲ್ಲ ಶಾಲೆ- ಕಾಲೇಜು ಗಳಲ್ಲಿ ಶೌಚಗೃಹ ನಿರ್ವಣಕ್ಕೆ 250 ಕೋಟಿ ರೂ. ಮೀಸಲಿಡಲಾಗಿದೆ.
3. ಕುಶಲಕರ್ವಿುಗಳಿಗೆ -ರೂ;50,000
ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ವಿಶ್ವಕರ್ಮರು, ಮೇದಾರರು ಸೇರಿ 108 ವರ್ಗದ ಎಲ್ಲ ಕುಶಲಕರ್ವಿುಗಳಿಗೆ ತಲಾ -ಠಿ;50 ಸಾವಿರ ವರೆಗೆ ಸಾಲ ಹಾಗೂ ಸಹಾಯಧನ.
4. ಕಾರ್ವಿುಕರ ಮಕ್ಕಳಿಗೂ ವಿದ್ಯಾನಿಧಿ
ರೈತರ ಮಕ್ಕಳಿಗೆ ಜಾರಿಗೊಳಿಸಿರುವ ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯವನ್ನು ಭೂರಹಿತ ಕೃಷಿ ಕಾರ್ವಿುಕರ ಮಕ್ಕಳಿಗೂ ವಿಸ್ತರಿಸಲಾಗುವುದು. ರಾಜ್ಯದಲ್ಲಿ 10ನೇ ತರಗತಿ ಪೂರ್ಣಗೊಳಿಸಿ ರಾಜ್ಯದ ಯಾವುದೇ ಭಾಗದಲ್ಲಿ ಅಧಿಕೃತ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿವಿಗಳಲ್ಲಿ ಪ್ರವೇಶ ಪಡೆದಿರುವ ಪಿಯುಸಿ, ಪದವಿ, ಸ್ನಾತಕೋತ್ತರ ಕೋರ್ಸ್​ಗಳಿಗೆ ಪ್ರವೇಶ ಪಡೆದ ಕಾರ್ವಿುಕರ ಮಕ್ಕಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಸ್ಕಾಲರ್​ಶಿಪ್ ನೀಡಲಾಗುತ್ತದೆ.
5.4,050 ಅಂಗನವಾಡಿ ಕೇಂದ್ರಗಳು
ರಾಜ್ಯದಲ್ಲಿ ಭೂರಹಿತ ಕಾರ್ವಿುಕರು ಹೆಚ್ಚಾಗಿರುವ ಪ್ರದೇಶಗಳನ್ನು ಗುರುತಿಸುವ ಮೂಲಕ ಆ ಸ್ಥಳಗಳಲ್ಲಿ ಒಟ್ಟಾರೆ 4,050 ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗು ವುದು. ಇದರೊಂದಿಗೆ ಒಟ್ಟು 16 ಲಕ್ಷ ಕುಟುಂಬ ಗಳ ಮಕ್ಕಳಿಗೆ ಪೌಷ್ಟಿಕ ಆಹಾರ, ಶಾಲಾಪೂರ್ವ ಶಿಕ್ಷಣ ನೀಡಲಾಗುತ್ತದೆ. ಹೊಸ ಅಂಗನವಾಡಿ ಕೇಂದ್ರಗಳ ಆರಂಭದಿಂದ 8,100 ಉದ್ಯೋಗ ಒದಗಿಸಲಾಗುತ್ತದೆ.
ನರೇಂದ್ರ ಮೋದಿ ಹುಟ್ಟಿದ್ದೆ ಈ ದೇಶವನ್ನ ಹಿಂದೂರಾಷ್ಟ್ರ ಮಾಡೋಕೆ: ಶಾಸಕ ಯತ್ನಾಳ್
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 1 =
Remember me
