ನವದೆಹಲಿ:ಲಡಾಖ್​ನ ಪೂರ್ವಭಾಗದಲ್ಲಿ ವಾಸ್ತವ ಗಡಿರೇಖೆಯಿಂದ ಸೇನೆಯನ್ನು ಹಿಂತೆಗೆದುಕೊಳ್ಳುವ ವಿಷಯವಾಗಿ ಭಾರತ ಮತ್ತು ಚೀನಾ ನಡುವೆ ಮಾತುಕತೆ ನಡೆಯುತ್ತಲೇ ಇದೆ. ಈ ಪ್ರದೇಶದಲ್ಲಿನ ಹಾಟ್​ಸ್ಪ್ರಿಂಗ್​ನಿಂದ ಚೀನಾ ಹಿಂದೆ ಸರಿದಿದೆ. ಆದರೆ ಪ್ಯಾಂಗಾಂಗ್​ ತ್ಸೊ ಮತ್ತು ಗೋಗ್ರಾ ಪೋಸ್ಟ್​ನಿಂದ ಹಿಂದೆ ಸರಿಯಲು ನಿರಾಕರಿಸುತ್ತಿದೆ.
ವ್ಯೂಹಾತ್ಮಕವಾಗಿ ಪ್ಯಾಂಗಾಂಗ್​ ತ್ಸೊ ಸರೋವರದ ಪ್ರದೇಶ ಮತ್ತು ಗೋಗ್ರಾ ಪೋಸ್ಟ್​ ತುಂಬಾ ಮುಖ್ಯವಾಗಿದೆ. ಅದೆಷ್ಟೇ ಹೇಳಿದರೂ ಚೀನಾ ಮಾತ್ರ ಈ ಎರಡು ಪ್ರದೇಶಗಳಿಂದ ಹಿಂದೆ ಸರಿಯಲು ನಿರಾಕರಿಸುತ್ತಲೇ ಇದೆ. ಈ ಎರಡು ಪ್ರದೇಶಗಳ ಮೇಲೆ ಹಕ್ಕು ಸ್ವಾಮ್ಯ ಸ್ಥಾಪಿಸಲು ಚೀನಾ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:ಸೂಪ್​ನಲ್ಲಿ ಸತ್ತ ಬಾವಲಿ ಕಂಡ ಕೂಡಲೇ ಆಸ್ಪತ್ರೆಗೆ ಓಡಿದ ಕುಟುಂಬಕ್ಕೆ ಕಾದಿತ್ತು ಸರ್ಪ್ರೈಸ್​!
ಪೂರ್ವ ಲಡಾಖ್​ನಲ್ಲಿ ಭಾರತ ಮತ್ತು ಚೀನಾ ನಡುವೆ ಮೇನಿಂದ ತೀವ್ರ ಜಟಾಪಟಿ ಏರ್ಪಟ್ಟಿದೆ. ಈ ಜಟಾಪಟಿಯನ್ನು ಇತ್ಯರ್ಥ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿವೆ.
ಜೂ.15ರಂದು ಚೀನಾ ಯೋಧರು ಮುಳ್ಳುತಂತಿ ಸುತ್ತಿದ ಬಡಿಗೆ ಮತ್ತು ಕಬ್ಬಿಣದ ರಾಡ್​ಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿತ್ತು. ಈ ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಇದಾದ ನಂತರದಲ್ಲಿ ಈ ಪ್ರದೇಶದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ.
ಈ ಬಾರಿ ಬಾಳಾಪುರ್​ನ 21 ಕೆ.ಜಿ. ಲಡ್ಡು ಹರಾಜು ಆಗಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
