ನವದೆಹಲಿ:ಗುಜರಾತ್‌ನ ಪಾನಿಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ ಇದ್ದಾರೆ. ಸೋಶಿಯಲ್​​ ಮೀಡಿಯಾದಲ್ಲಿ ಕೆಲವು ವಿಡಿಯೋಗಳು ವೈರಲ್​ ಆಗುವ ಮೂಲಕ ಗಮನ ಸೆಳೆದಿದ್ದಾರೆ.
ಗುಜರಾತಿನ ಆನಂದ್‌ನಲ್ಲಿ ತುಳಸಿ ಪಾನಿಪುರಿ ಅಂಗಡಿ ಮಾಲೀಕ 71 ವರ್ಷದ ಅನಿಲ್‌ ಭಟ್‌ ಠಕ್ಕರ್‌ ಅವರು ನೋಡಲು ಪ್ರಧಾನಿ ಮೋದಿ ಅವರಂತೆ ಕಾಣುತ್ತಿದ್ದಾರೆ.
A post shared by Mehul Hingu (@streetfoodrecipe)

ಠಕ್ಕರ್‌ ಮಾತನಾಡಿ, ‘ನಾನು ನೋಡಲು ಮೋದಿ ಅವರಂತೆ ಕಾಣುತ್ತಿರುವುದರಿಂದ ನಮ್ಮ ಅಂಗಡಿಗೆ ಬರುವ ಗ್ರಾಹಕರಿಂದ ಸಾಕಷ್ಟು ಪ್ರೀತಿ ಮತ್ತು ಗೌರವದಿಂದ ಕಾಣುತ್ತಿದ್ದಾರೆ. ನನ್ನೊಂದಿಗೆ ಪ್ರವಾಸಿಗರು ಸೆಲ್ಫೀ ಕೂಡ ತೆಗೆಸಿಕೊಳ್ಳುತ್ತಾರೆ’ ಎಂದು ಹೇಳಿದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಗರ್ಬಾ ಮಾಡಿದ್ದರು. ಈ ವಿಡಿಯೋ ವೈರಲ್‌ ಆಗಿದ್ದು, ಮೋದಿ ಅವರ ಡೀಪ್‌ಫೇಕ್‌ ವಿಡಿಯೋ ಎಂದು ತಪ್ಪಾಗಿ ಗ್ರಹಿಸಲಾಗಿತ್ತು. ಮಹಾಂತೇ ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಕೆಲ ಸಮಯಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 37.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.5 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು  ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಅಡುಗೆ ಮಾಡುವ ಮೊದಲು ಅಕ್ಕಿ ತೊಳೆಯದಿದ್ದರೆ ನಿಮ್ಮ ಹೃದಯ ಬಡಿತ ನಿಲ್ಲಬಹುದು ಎಚ್ಚರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
