ವಿಶಾಖಪಟ್ಟಣ:ಗುರುವಾರದ ಬೆಳಗಿನ ಹಳ್ಳಿಯ ಜನರಿಗೆ ಎಂದಿನಂತಿರಲಿಲ್ಲ. ಅಸಹನೀಯ ವಾಸನೆಯೇ ಅವರನ್ನೆಲ್ಲ ಎಬ್ಬಿಸಿತ್ತು. ಅದನ್ನೂ ಸಹಿಸಿಕೊಂಡು ಮಲಗಿದವರಿಗೆ ಉಸಿರಾಟವೇ ನಿಂತಂತೆನಿಸಿ ಮಲಗಿದ್ದಲ್ಲಿ ಒದ್ದಾಡಿದರು. ಮನೆಯಿಂದ ಹೊರಬಂದವರು ನಿಂತಲ್ಲಿಯೇ ಕುಸಿದರು….
ವಿಷಾನಿಲ ದುರಂತ ಸಂಭವಿಸಿರುವ ಎಲ್​ಜಿ ಪಾಲಿಮರ್ಸ್​ ಫ್ಯಾಕ್ಟರಿ ಇರುವ ಗೋಪಾಲಟ್ಟಣಂನಲ್ಲಿ ಜನರು ಬೆಳ್ಳಂಬೆಳಗ್ಗೆ ಅನುಭವಿಸಿದ ಸಂಕಷ್ಟವಿದು. ಇಷ್ಟು ಮಾತ್ರವಲ್ಲ, ಸುತ್ತಲಿನ ಹಲವು ಗ್ರಾಮಗಳ ಜನರು ಇಂಥದ್ದೇ ಅನುಭವಕ್ಕೊಳಗಾದರು. ಮನೆಯಿಂದ ಹೊರಬಂದರೂ, ಉಸಿರಾಡಲು ಸಾಧ್ಯವಾಗದಷ್ಟು ತೊಂದರೆ. ದುರ್ವಾಸನೆ ತಡೆಯೋಕಾಗದೇ ಮನೆಗಳಿಂದ ದೂರ ಹೋದರೂ ತಡೆಯೋಕಾಗಲಿಲ್ಲ. ಕಣ್ಣು ಮಾತ್ರವಲ್ಲ, ಚರ್ಮದಲ್ಲೂ ಉರಿ ಕಂಡುಬಂತು. ಜನರು ದಿಕ್ಕೆಟ್ಟು ಓಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ಇದನ್ನೂ ಓದಿ;ಭಾರತದಲ್ಲಿ ಶುರುವಾಯ್ತಾ ಕರೊನಾ ಎರಡನೇ ಅಲೆ? ನಾಲ್ಕು ದಿನಗಳಲ್ಲೇ ಸೋಂಕಿತರ ಸಂಖ್ಯೆ 10 ಸಾವಿರ ಹೆಚ್ಚಳ
ಬೆಳಗಿನ ಜಾವವೇ ಅನಿಲ ದುರಂತ ಸಂಭವಿಸಿದ್ದರಿಂದ ಏನಾಗುತ್ತಿದೆ ಎಂಬುದು ಯಾರ ಗಮನಕ್ಕೂ ಬಂದಿರಲಿಲ್ಲ. ಹೀಗಾಗಿ ಸಹಾಯಕ್ಕೂ ಯಾರನ್ನೂ ಕೂಗುವಂತಿರಲಿಲ್ಲ. ರಸ್ತೆಗಳಲ್ಲಿ ನೂರಾರು ಜನರು ಪ್ರಜ್ಞೆ ತಪ್ಪಿ ಬಿದ್ದಿದ್ದರು.
ಐದು ಹಳ್ಳಿಗಳ ಜನರ ತೆರವು:ಆರ್​ಆರ್​ವಿ ಪುರಂ, ವೆಂಕಟಾಪುರಂ, ಬಿ.ಸಿ. ಕಾಲನಿ, ಪದ್ಮಪುರಂ, ಕಾಂಪಾರಪಾಳ್ಯಂನ ಜನರನ್ನು ಹಳ್ಳಿಗಳಿಂದ ತೆರವು ಮಾಡಲಾಗುತ್ತಿದೆ. ಕಾರ್ಖಾನೆ ಸುತ್ತಲಿನ ಐದು ಕಿ.ಮೀ.ವರೆಗೂ ಅಸಹನೀಯ ದುರ್ವಾಸನೆ ಹಬ್ಬಿತ್ತು. ಕಾರ್ಖಾನೆಯಿಂದ ಮೂರು ಕಿ.ಮೀ ವ್ಯಾಪ್ತಿಯೊಳಗಿರುವ ಜನರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆರಂಭದಲ್ಲಿ ಪರಿಹಾರ ಪಡೆ ಸಿಬ್ಬಂದಿಗೆ ಫ್ಯಾಕ್ಟರಿ ಇರುವ ಹಳ್ಳಿಗೂ ತೆರಳಲು ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ;ಚೆಲಿಯಾ ಮುಸ್ಲಿಮರ ಹೋಟೆಲ್‌, ರೆಸ್ಟೋರಂಟ್​ಗಳಿಗೆ ಹಿಂದು ಹೆಸರುಗಳೇಕೆ?
ದುರಂತ ಸಂಭವಿಸಿದ್ದು ಹೇಗೆ?:ಲಾಕ್​ಡೌನ್​ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಾರ್ಖಾನೆಯನ್ನು ಮರು ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿತ್ತು. ಇದಕ್ಕಾಗಿ ರಾತ್ರಿ ಪಾಳಿಯಲ್ಲಿ 15 ಜನರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಬೆಳಗ್ಗೆ ಇನ್ನಷ್ಟು ಜನರು ಸೇರಿಕೊಂಡಿದ್ದರು. ಸ್ಟೈರೀನ್​ ಅನಿಲವಿರುವ ಟ್ಯಾಂಕ್​ನಲ್ಲಿ ಸೋರಿಕೆ ಉಂಟಾಗಿದೆ ಎಂದು ಆಂಧ್ರಪ್ರದೇಶದ ಕೈಗಾರಿಕಾ ಸಚಿವ ಎಂ. ಗೌತಮ್​ ರೆಡ್ಡಿ ಹೇಳಿದ್ದಾರೆ.
ಸದ್ಯ ಹತ್ತು ಜನರು ಮೃತಪಟ್ಟಿದ್ದು, 20 ಜನರನ್ನು ವಿವಿಧ ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ನಲ್ಲಿ ಇಡಲಾಗಿದೆ. 246 ಜನರ ಸ್ಥಿತಿ ಗಂಭೀರವಾಗಿದೆ.
ವಿಷಾನಿಲ ದುರಂತ ಸಂಭವಿಸಿದ ಬಹುರಾಷ್ಟ್ರೀಯ ಕಂಪನಿ ಎಲ್​ಜಿ ಪಾಲಿಮರ್ಸ್​ ಕಾರ್ಖಾನೆ ಇತಿಹಾಸ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + ten =
Remember me
