ಹೈದ್ರಾಬಾದ್:ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಟಾಲಿವುಡ್ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಪುಷ್ಪ’ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಿದೆ.
ಆರಂಭದಿಂದಲೂ ಸಖತ್ ಸದ್ದು ಮಾಡುತ್ತಿದ್ದ ಪುಷ್ಪ ಸಿನಿಮಾ ಇದೇ ವರ್ಷ ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ. ವರ್ಷದ ಕೊನೆಯ ಹಬ್ಬ ಕ್ರಿಸ್‍ಮಸ್ ಸಂದರ್ಭದಲ್ಲಿ ಸಿನಿಮಾ ತೆರೆಕಾಣಲಿದೆ.ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಚಿತ್ರ, ಪಂಚ ಭಾಷೆಗಳಾದ ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿಯಲ್ಲಿ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಇದನ್ನೂ ಓದಿ:ಪುಷ್ಪ ಅಭಿಮಾನಿಗಳಿಗೆ ಸಿಹಿ ಸುದ್ದಿ… ಮೊದಲ ಹಾಡಿನ ಬಿಡುಗಡೆ ದಿನಾಂಕ ಅನೌನ್ಸ್
ಸಿನಿಮಾದ ಇನ್ನೊಂದು ಪೋಸ್ಟರ್ ಅನ್ನು ಇದೇ ಸಂದರ್ಭದಲ್ಲಿ ತಂಡ ಬಿಡುಗಡೆಗೊಳಿಸಿದೆ. ಎಲ್ಲಾ ಸರಿಯಾಗಿದ್ದರೆ ಆಗಸ್ಟ್ 13 ರಂದು ಪುಷ್ಪ ಚಿತ್ರ ತೆರೆ ಮೇಲೆ ಬರಬೇಕಿತ್ತು. ಆದರೆ ಕೊರೊನಾ ಮಹಾಮಾರಿ ಇದಕ್ಕೆ ತಣ್ಣೀರೆರಚಿತ್ತು. ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಕಾಂಬಿನೇಷನ್​​ನಲ್ಲಿ ಮೂಡಿ ಬರುತ್ತಿರುವ ಪುಷ್ಪ ಮೂರನೆ ಚಿತ್ರ. ಈ ಮೊದಲು ಆರ್ಯ ಮತ್ತು ಆರ್ಯ 2 ಚಿತ್ರ ಬ್ಲಾಕ್ ಬಾಸ್ಟರ್ ಸಕ್ಸಸ್ ಕಂಡಿದ್ದವು.
Pushpa – The Rise to release in five languages this Christmas.పుష్ప പുഷ്പ புஷ்பா ಪುಷ್ಪ पुष्पाpic.twitter.com/bSSF9qfGGY— Allu Arjun (@alluarjun)August 3, 2021
Pushpa – The Rise to release in five languages this Christmas.పుష్ప പുഷ്പ புஷ்பா ಪುಷ್ಪ पुष्पाpic.twitter.com/bSSF9qfGGY
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 10 =
Remember me
