ಮುಂಬೈ:ಬೀದಿಬದಿಯ ಪಾನಿಪೂರಿ ಅಂಗಡಿಗಳ ಪಾನಿ ಹಾಗೂ ಪೂರಿ ತಯಾರಿಸುವ ರಹಸ್ಯ ಬಯಲಾಗುತ್ತಿರುವುದು ಇದೇ ಮೊದಲೇನಲ್ಲ. ಕಾಲಿನಿಂದ ತುಳಿದು ಹಿಟ್ಟು ನಾದಿ ಪೂರಿ ತಯಾರಿಸುವ, ಕೊಳಕು ನೀರಿನಿಂದ ಪಾನಿ ತಯಾರಿಸುವ ಪ್ರಕರಣಗಳು ವಿಡಿಯೋ ಸಮೇತ ಹಲವಾರು ಬಾರಿ ಬಯಲಾಗಿವೆ. ಆ ಸಾಲಿಗೆ ಈಗ ಮತ್ತೊಂದು ಪ್ರಕರಣ ಸೇರಿಕೊಂಡಿದೆ.
ಈ ಪಾನಿಪೂರಿ ಅಂಗಡಿ ಮುಂದೆ ದಿನಾ ಜನ ಮುಗಿಬಿದ್ದು ಪಾನಿಪೂರಿ ಸೇವಿಸುತ್ತಿದ್ದರು. ರುಚಿಯಾಗಿದೆ ಎಂದು ಚಪ್ಪರಿಸಿ ತಿನ್ನುತ್ತಿದ್ದ ಚಾಟ್​​ಪ್ರಿಯರಿಗೆ ಇತ್ತೀಚೆಗೆ ಒಂದು ದಿನ ಆಘಾತ ಕಾದಿತ್ತು. ಇದೇ ಪಾನಿಪೂರಿ ಅಂಗಡಿಯವ ಪಾನಿ ತಯಾರಿಕೆಗೆ ಸಾರ್ವಜನಿಕ ಶೌಚಾಲಯದ ನೀರನ್ನು ಬಳಸುತ್ತಿದ್ದ ವಿಡಿಯೋ ತುಣುಕು ಹರಿದಾಡಿತ್ತು. ಇದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ಅಂಗಡಿ ಮುಂದೆ ಗಲಾಟೆ ಮಾಡಿದ್ದಲ್ಲದೆ, ಅಲ್ಲಿದ್ದದ್ದನ್ನೆಲ್ಲ ಚೆಲ್ಲಾಡಿ, ಗಾಡಿ ಅಂಗಡಿಯನ್ನೂ ಜಖಂಗೊಳಿಸಿದ್ದಾರೆ.

‘ಮುಂಬೈ ಕೆ ಸ್ಪೆಷಲ್ ಪಾನಿಪೂರಿ ವಾಲಾ’ ಎಂಬ ಎಂಬ ಹೆಸರಿನ ಈ ಬೀದಿಬದಿ ಪಾನಿಪೂರಿ ಅಂಗಡಿಯ ಕೊಲ್ಹಾಪುರದ ರಂಕಾಲ ಕೆರೆ ಪಕ್ಕ ದಿನಾಲೂ ವ್ಯಾಪಾರ ನಡೆಸುತ್ತಿತ್ತು. ಈ ಅಂಗಡಿ ಮುಂದೆ ಪಾನಿಪೂರಿ ತಿನ್ನಲು ನಿತ್ಯ ಜನಜಂಗುಳಿ ಇರುತ್ತಿತ್ತು. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + seventeen =
Remember me
