ಪಟ್ನಾ:ತಮ್ಮ ಅಸಾಧಾರಣ ನಟನೆಯಿಂದಲ್ಲದೆ, ಸಾಮಾಜಿಕ ಕಾರ್ಯ ಹಾಗೂ ಮಾನವೀಯ ಗುಣಗಳಿಂದ ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ನಟ ಎಂದರೆ ಅದು ಪಂಕಜ್​ ತ್ರಿಪಾಠಿ ಎಂದು ಹಲವರು ಹೇಳುತ್ತಾರೆ.
ಇದೀಗ ನಟ ಪಂಕಜ್​ ತ್ರಿಪಾಠಿ ಇತ್ತೀಚಿಗೆ ಅಗಲಿದ ತಮ್ಮ ತಂದೆಯ ನೆನಪಾರ್ಥ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಅತ್ಯಾಧುನಿಕ ಗ್ರಂಥಾಲಯವನ್ನು ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:ಬಿಜೆಪಿಯವರು ಸರ್ಕಾರ ಪತನವಾಗುತ್ತದೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ: ಬಿ.ಕೆ. ಹರಿಪ್ರಸಾದ್​
ಬಿಹಾರದ ಗೋಪಾಲ್​ಗಂಜ್​ ಜಿಲ್ಲೆಯ ಬೆಲಸಂದ್​ ಗ್ರಾಮದವಾರದ ಪಂಕಜ್​ ತ್ರಿಪಾಠಿ ತಮ್ಮ ಹೆಳ್ಳಿಯಲ್ಲಿರುವ ಸರ್ಕಾರಿ ಹೈಯರ್​ ಸೆಕೆಂಡರಿ ಸ್ಕೂಲ್​ನಲ್ಲಿ ಅತ್ಯಾಧುನಿಕ ಗ್ರಂಥಾಲಯವನ್ನು ತೆರದು ಇತ್ತೀಚಿಗೆ ಲೋಕಾರ್ಪಣೆ ಮಾಡಿದ್ಧಾರೆ. ಕಳೆದ ಆಗಸ್ಟ್​ 21ರಂದು ಪಂಕಜ್​ ತ್ರಿಪಾಠಿ ಅವರ ತಂದೆ ಬನಾರಸ್​ ತಿವಾರಿ (99) ವಿಧಿವಶರಾಗಿದ್ದರು.
ಈ ಕುರಿತು ಮಾತನಾಡಿರುವ ನಟ ಪಂಕಜ್​ ತ್ರಿಪಾಠಿ ನನ್ನ ತಂದೆಯ ಸ್ಮರಣಾರ್ಥ ಶಾಲಾ ಮಕ್ಕಳಿಗಾಗಿ ಈ ಗ್ರಂಥಾಲಯವನ್ನು ತೆರದಿದ್ದೇನೆ. ಈ ಗ್ರಂಥಾಲಯವು ಮಕ್ಕಳಲ್ಲಿ ಸಾಹಿತ್ಯ ಹಾಗೂ ಜ್ಞಾನವನ್ನು ಹೆಚ್ಚಿಸುವಲ್ಲಿ ಹೆಚ್ಚಿನ ಕೊಡುಗೆ ನೀಡುತ್ತದೆ. ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುವ ದೊಡ್ಡ ಕೊಡುಗೆ ಎಂದರೆ ಅದು ಶಿಕ್ಷಣ ಎಂದು ನಟ ಪಂಕಜ್​ ತ್ರಿಪಾಠಿ ಅಭಿಪ್ರಾಯಪಟ್ಟಿದ್ದಾರೆ.
​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − fourteen =
Remember me
