ಟೋಕಿಯೋ:ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಈ ಮುನ್ನ ಶೂಟಿಂಗ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅವನಿ ಲೇಖಾರ ಅವರು ಇದೀಗ ಮತ್ತೊಂದು ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ತನ್ಮೂಲಕ ಪ್ಯಾರಾ ಗೇಮ್ಸ್​​ನಲ್ಲಿ ಅವಳಿ ಪದಕಗಳಿಗೆ ಕೊರಳೊಡ್ಡಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ಮನ್ನಣೆ ಗಳಿಸಿದ್ದಾರೆ.
ಇಂದು ನಡೆದ ಮಹಿಳೆಯರ 50 ಮೀಟರ್​ ರೈಫಲ್​ 3ಪಿ ಎಸ್​​ಎಚ್​1 ಫೈನಲ್​ ಸ್ಪರ್ಧೆಯಲ್ಲಿ ಜೈಪುರದ 19 ವರ್ಷ ವಯಸ್ಸಿನ ಅವನಿ, ಕಂಚಿನ ಪದಕ ಗೆದ್ದರು. ರಜತ ಪದಕಕ್ಕಾಗಿ ಆಡಿದಾಗ, ಚೀನಾದ ಜಾಂಗ್​ 10.3 ಅಂಕ ಗಳಿಸಿದರೆ, ಅವನಿ, 10.2 ಅಂಕಗಳನ್ನು ಗಳಿಸಿದರು. ನಂತರ ಆಡಿದ ಕಂಚಿನ ಪದಕದ ಸ್ಪರ್ಧೆಯಲ್ಲಿ ಯುಕ್ರೇನಿನ ಶೆಟ್ನಿಕ್​ 9.9 ಅಂಕ ಗಳಿಸಿದರೆ, ಅವನಿ 10.5 ಅಂಕಗಳನ್ನು ಗಳಿಸಿ ಪದಕವನ್ನು ಗೆದ್ದರು.
ಇದನ್ನೂ ಓದಿ:ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಬೆಳ್ಳಿ ಗೆದ್ದ ಪ್ಯಾರಾ ಪ್ರವೀಣ್​ಗೆ ಪ್ರಧಾನಿ ಅಭಿನಂದನೆ
ಇದೇ ಪ್ಯಾರಾಲಿಂಪಿಕ್ಸ್​ ಕ್ರೀಡಾಕೂಟದಲ್ಲಿ 10 ಮೀಟರ್​ ಏರ್​ ರೈಫಲ್​ ಸ್ಟ್ಯಾಂಡಿಂಗ್​ ಎಸ್​ಎಚ್​1 ಈವೆಂಟಿನಲ್ಲಿ ಅವನಿ ಲೇಖಾರ ಚಿನ್ನಕ್ಕೆ ಮುತ್ತಿಟ್ಟಿದ್ದರು. ಇದೀಗ ಮತ್ತೊಂದು ಪದಕ ಗೆದ್ದು, ಒಂದೇ ಕ್ರೀಡಾಕೂಟದಲ್ಲಿ ಬೇರೆ ಬೇರೆ ಈವೆಂಟುಗಳಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ.
टोक्यो#Paralympicsमें राजस्थान की बेटी@AvaniLekharaको 50 मीटर शूटिंग में#Bronzeमैडल जीतने पर बधाई। आपने इतिहास रचते हुए एक बार फिर देश को गौरवान्वित किया है। यह सफलता आपके निष्ठापूर्ण समर्पण और अद्भुत क्षमताओं की परिचायक है। उज्ज्वल भविष्य के लिए शुभकामनाएं।#Praise4Parapic.twitter.com/VbVTgGvKCQ— Om Birla (@ombirlakota)September 3, 2021
टोक्यो#Paralympicsमें राजस्थान की बेटी@AvaniLekharaको 50 मीटर शूटिंग में#Bronzeमैडल जीतने पर बधाई। आपने इतिहास रचते हुए एक बार फिर देश को गौरवान्वित किया है। यह सफलता आपके निष्ठापूर्ण समर्पण और अद्भुत क्षमताओं की परिचायक है। उज्ज्वल भविष्य के लिए शुभकामनाएं।#Praise4Parapic.twitter.com/VbVTgGvKCQ
ಅವನಿ ಅವರಿಗೆ ಕಂಚಿನ ಪದಕ ಪ್ರದಾನ ಮಾಡಲಾದ ಕ್ಷಣಗಳ ವಿಡಿಯೋವನ್ನು ಭಾರತದ ಲೋಕಸಭಾ ಸ್ಪೀಕರ್​ ಓಮ್​ ಬಿರ್ಲಾ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ ಮಾಡಿದ್ದಾರೆ.(ಏಜೆನ್ಸೀಸ್)
ರೈಲಿನಲ್ಲಿ ಬನಿಯನ್​, ಅಂಡರ್​ವೇರ್​ನಲ್ಲಿ ಓಡಾಡಿದ ಶಾಸಕ!
ಮಹಿಳೆಯರೇ, ಸ್ತನ ಕ್ಯಾನ್ಸರ್​ ಬಗ್ಗೆ ಎಚ್ಚರ ವಹಿಸಿ! ರೋಗಲಕ್ಷಣ, ತಪಾಸಣೆ, ಚಿಕಿತ್ಸೆ… ವಿವರಗಳು ಇಲ್ಲಿವೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + twelve =
Remember me
