ಟೋಕಿಯೋ:ನಿನ್ನೆ ಪುರುಷರ ಡಿಸ್ಕಸ್ ಥ್ರೋ ಎಫ್-52 ವಿಭಾಗದಲ್ಲಿ 19.91 ಮೀಟರ್ ದಾಖಲೆ ದೂರ ಎಸೆದು, ಮೂರನೇ ಸ್ಥಾನ ಗಳಿಸಿದ್ದ ಭಾರತದ ವಿನೋದ್ ಕುಮಾರ್ ಅವರು ಅಂಗವೈಕಲ್ಯ ವಿಂಗಡನೆಯ ತಾಂತ್ರಿಕ ಮರುವಿಶ್ಲೇಷಣೆಯಲ್ಲಿ ಅನರ್ಹಗೊಳಿಸಲ್ಪಟ್ಟಿದ್ದಾರೆ. ಹೀಗಾಗಿ ಅವರಿಗೆ ಕಂಚಿನ ಪದಕ ನೀಡಲಾಗುವುದಿಲ್ಲ ಎಂದು ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ 2020ರ ಆಯೋಜಕ ಮಂಡಳಿ ತಿಳಿಸಿದೆ.
41 ವರ್ಷದ ವಿನೋದ್ ಕುಮಾರ್ 6 ಯತ್ನಗಳಲ್ಲೂ ಉತ್ತಮ ನಿರ್ವಹಣೆ ತೋರಲು ಯಶಸ್ವಿಯಾಗಿದ್ದರು. ಅಂಗವೈಕಲ್ಯ ವಿಂಗಡನೆ ಕುರಿತು ಕೆಲವು ಪ್ರತಿಸ್ಪರ್ಧಿಗಳು ತೋರಿದ ಪ್ರತಿಭಟನೆಯಿಂದಾಗಿ ಪದಕ ಪ್ರದಾನವನ್ನು ಮುಂದೂಡಲಾಗಿತ್ತು. ಇದೀಗ ಪ್ಯಾರಾಅಥ್ಲೀಟ್​ಗಳನ್ನು ವಿಂಗಡಿಸಲಾಗುವ ವರ್ಗಕ್ಕೆ ಅವರನ್ನು ಸೇರಿಸಲಾಗದ ಕಾರಣಕ್ಕೆ ‘ಕ್ಲಾಸಿಫಿಕೇಶನ್​ ನಾಟ್​ ಕಂಪ್ಲೀಟೆಡ್’​ ಎಂದು ತೀರ್ಮಾನಿಸಲಾಗಿದೆ. ಹೀಗಾಗಿ ಅವರ ಗೆಲುವಿನ ಫಲಿತಾಂಶವನ್ನು ಅನೂರ್ಜಿತಗೊಳಿಸಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ.
ಇದನ್ನೂ ಓದಿ:ಕರೊನಾ ಟೆಸ್ಟ್​ ನಿರ್ಲಕ್ಷ್ಯ: 19 ವೈದ್ಯಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ
ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿರುವ ವಿನೋದ್ ಕುಮಾರ್, ಲಡಾಕ್ ಪ್ರದೇಶದ ಲೆಹ್​ನಲ್ಲಿ ಪ್ರಪಾತದಿಂದ ಆಯತಪ್ಪಿ ಬಿದ್ದು ಗಾಯಗೊಂಡಿದ್ದರು. ಹಲವು ವರ್ಷಗಳ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದ ಅವರು ವೀಲ್​​ಚೇರ್​ನಲ್ಲೇ ತರಬೇತಿ ಪಡೆದು ಪ್ಯಾರಾಅಥ್ಲೀಟ್​ ಆಗಿ ಗುರುತಿಸಿಕೊಂಡರು.​ 2019ರಲ್ಲಿ ನಡೆದ ವಿಶ್ವ ಪ್ಯಾರಾಥ್ಲೀಟ್ಸ್ ಗ್ರಾನ್ ಪ್ರೀಯಲ್ಲಿ ಈ ಹಿಂದೆ ಪದಕ ಜಯಿಸಿದ್ದಾರೆ.(ಏಜೆನ್ಸೀಸ್)
ಸೆಪ್ಟೆಂಬರ್​ ತಿಂಗಳಿಂದ ಏರಲಿದೆ, ಮಾರುತಿ ಕಾರುಗಳ ಬೆಲೆ!

ನಮ್ಮ ಮೆಟ್ರೊ: ಇಂದಿನಿಂದ ಕೆಂಗೇರಿ ಟರ್ಮಿನಲ್ ಕಾರ್ಯಾರಂಭ; ರೈಲುಗಳ ವಿವರ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eight =
Remember me
