ಆಂಧ್ರಪ್ರದೇಶ:ಹೆತ್ತವರಿಗೆ ಮಕ್ಕಳು ಎಂದರೆ ಅಪಾರವಾದ ಪ್ರೀತಿ ಇರುತ್ತದೆ. ಕಣ್ಣ ಮುಂದೆ ತಮ್ಮ ಮಕ್ಕಳು ಕಷ್ಟ ಪಡುವುದನ್ನು ಯಾರು ಸಹ ನೋಡಿ ಸಹಿಸಿಕೊಳ್ಳುವುದಿಲ್ಲ. ಆದರೆ ಬದುಕಿ ಬಾಳಬೇಕಾದ ಮಗ ಕಣ್ಮಂದೆ ಪ್ರಾಣ ಬಿಟ್ಟರೆ ತಂದೆ-ತಾಯಿಗಳ ನೋವು ಹೇಳತೀರದು. ಆದರೆ ಈ ದಂಪತಿ ಅನಾರೋಗ್ಯಂದಿದ ಮೃತ ಪಟ್ಟಿದ್ದ ಮಗನಿಗಾಗಿ ದೇವಸ್ಥಾನವನ್ನೇ ಕಟ್ಟಿದ್ದಾರೆ.
ಆದಿನಾರಾಯಣ ಮತ್ತು ನಾಗಲಕ್ಷ್ಮಿ ಇಬ್ಬರೂ ಅನಂತಪುರ ಜಿಲ್ಲೆಯ ಪಾಮಿಡಿ ಪಟ್ಟಣದ ನಿವೃತ್ತ ನೌಕರರು. ಅವರ ಒಬ್ಬನೇ ಮಗ ಗಂಗಾಧರ. ಇವರ ತಂದೆ ಆದಿನಾರಾಯಣ ರೈಲ್ವೇಯಲ್ಲಿ ಗೇಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಸ್ವಯಂ ನಿವೃತ್ತಿ ಪಡೆದು ಮಗ ಗಂಗಾಧರನಿಗೆ ಕೆಲಸ ಕೊಟ್ಟರು. ಆದರೆ ಕೆಲವು ವರ್ಷಗಳ ಹಿಂದೆ ಗಂಗಾಧರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರಿಂದ ಮಗನ ಸಾವನ್ನು ಅರಗಿಸಿಕೊಳ್ಳಲಾಗದೆ ಪರಿಸ್ಥಿತಿಯಲ್ಲಿ ಇಬ್ಬರು ಇದ್ದರು.

ಪಾಮಿಡಿ ಪೇಟೆಯಲ್ಲಿರುವ ತಮ್ಮ ಮನೆಯಲ್ಲಿ ಗಂಗಾಧರನಿಗೆ ದೇವಸ್ಥಾನ ಕಟ್ಟಿದರು. ತಮ್ಮ ಮೃತ ಮಗನ ವಿಗ್ರಹವನ್ನು ತೆನಾಲಿಯಲ್ಲಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ವಿಶೇಷವಾಗಿ ತಯಾರಿಸಲಾಗಿದೆ. ಅವರು ಪ್ರತಿದಿನ ಮಗನ ವಿಗ್ರಹದ ಮೇಲೆ ಹಾಕಿರುವ ಬಟ್ಟೆಗಳನ್ನು  ಬದಲಾಯಿಸುತ್ತಾರೆ. ಅಲ್ಲದೇ ಈ ದಂಪತಿ ತಮ್ಮ ಪುತ್ರ ಗಂಗಾಧರ್ ಹೆಸರಿನಲ್ಲಿ ಹಲವು ಸೇವಾ ಕಾರ್ಯಕ್ರಮಗಳನ್ನು ಮಾಡಿ ಮಗನ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.

ಮಗನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಪಾಲಕರು ತಮ್ಮ ಮಗುವನ್ನು ಕಳೆದುಕೊಂಡಿದ್ದಾರೆ. ಕಣ್ಣೆದುರೇ ಸಾಕಿದ ಕಿರಿಯ ಮಗನ ಮರಣದ ನಂತರ ತಂದೆ-ತಾಯಿಗಳು ತಮ್ಮ ಮಗುವನ್ನು ಮನದಾಳದಿಂದ ಪೂಜಿಸುವುದಲ್ಲದೆ, ತಮ್ಮ ಮನೆಯಲ್ಲಿ ದೇವಾಲಯವನ್ನೂ ಕಟ್ಟಿ ಸತ್ತ ಮಗುವನ್ನು ಮೂರ್ತಿಯ ರೂಪದಲ್ಲಿ ನೋಡುತ್ತಾ.. ನೆನಪುಗಳನ್ನು ಜೀವಂತವಾಗಿಟ್ಟುಕೊಂಡಿದ್ದಾರೆ.
Ganesh Chaturthi : ಗಣೇಶನಿಗೆ ಮೊದಲ ಪೂಜೆ ಯಾಕೆ ಮಾಡುತ್ತಾರೆ ಗೊತ್ತಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 + 3 =
Remember me
