ಕೊಲ್ಕತ್ತಾ:ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಹತ್ಯೆ ಘಟನೆಯನ್ನು ಖಂಡಿಸಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ಕೈಗೊಂಡಿರುವ ಮಹಿಳಾ ವೈದ್ಯರು, ಇಂದು ದೇಶವ್ಯಾಪಿ ಮೆಡಿಕಲ್ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಬೃಹತ್ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಆಗಸ್ಟ್ 16ರ ಬೆಳಗ್ಗೆ 6 ಗಂಟೆಯಿಂದ 24 ಗಂಟೆಗಳ ಅವಧಿ ದೇಶವ್ಯಾಪಿ ತುರ್ತು ಸೇವೆಗಳನ್ನು ಸ್ಥಗಿತಗೊಳಿಸಿರುವುದಾಗಿ ಭಾರತೀಯ ವೈದ್ಯಕೀಯ ಸಂಘವು ಘೋಷಿಸಿದೆ.
ಇದನ್ನೂ ಓದಿ:ತೂಕ ತಗ್ಗಿಸುವ ಸಮಯದಲ್ಲಿ ವಿನೇಶ್​ ಪೋಗಟ್​ ಸಾಯುವ ಭಯ ಕಾಡಿತ್ತು; ಆತಂಕ ಬಿಚ್ಚಿಟ್ಟ ಕೋಚ್​
ಅಗತ್ಯ ಸೇವೆಗಳನ್ನು ಹೊರತುಪಡಿಸಿದರೆ ಉಳಿದ್ಯಾವುದು ಕೂಡ ಕಾರ್ಯನಿರ್ವಹಿಸುವುದಿಲ್ಲ. ಆ.17ರ ಬೆಳಗ್ಗೆ 6ರಿಂದ ಆ.18ರ ಬೆಳಗ್ಗೆ 6ರವರೆಗೆ ಬಹುತೇಕ ಸೇವೆಗಳು ಲಭ್ಯವಿರುವುದಿಲ್ಲ. ಇದು ಸಾರ್ವಜನಿಕರ ಗಮನದಲ್ಲಿರಲಿ ಎಂದು ನಾವು ತಿಳಿಸುತ್ತಿದ್ದೇವೆ ಎಂದು ಐಎಂಎ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೋರ್ಟ್​ ಸಿಬಿಐಗೆ ವಹಿಸಿದ್ದು, ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚುರುಕು ತನಿಖೆ ಕೈಗೊಂಡಿರುವ ಅಧಿಕಾರಿಗಳು, ಆಸ್ಪತ್ರೆಯ ನಾಲ್ವರು ಟ್ರೈನಿ ವೈದ್ಯರನ್ನು ಕರೆಸಿ ವಿಚಾರಣೆ ನಡೆಸಿದರು. ಇದರ ಬೆನ್ನಲ್ಲೇ ಮೃತ ಯುವತಿಯ ಪೋಷಕರು ತಮಗೆ ಆರ್​ಜಿ ಕರ್ ವೈದ್ಯಕೀಯ ಕಾಲೇಜಿನ ಕೆಲವು ಇಂಟರ್ನ್‌ಗಳು ಮತ್ತು ವೈದ್ಯರು ಈ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ, ಸಿಬಿಐ ಅಧಿಕಾರಿಯೊಬ್ಬರಿಗೆ ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸ್ನೇಹಿತರೇ ಶತ್ರುಗಳಾಗುವರು. ಹೆಣ್ಣುಮಕ್ಕಳಿಂದ ನಷ್ಟ.
ಸರ್ಕಾರಿ ಆಸ್ಪತ್ರೆಯಲ್ಲಿ ತಮ್ಮ ಮಗಳ ಅತ್ಯಾಚಾರ ಮತ್ತು ಕೊಲೆಯಲ್ಲಿ ಭಾಗಿಯಾಗಿರುವ ಶಂಕಿತ ವ್ಯಕ್ತಿಗಳ ಹೆಸರನ್ನು ಯುವತಿಯ ಪೋಷಕರು ಸಿಬಿಐಗೆ ನೀಡಿದ್ದಾರೆ. “ತಮ್ಮ ಮಗಳ ಮೇಲಿನ ರೇಪ್ ಮತ್ತು ಹತ್ಯೆ ಹಿಂದೆ ಅನೇಕ ಜನರ ಕೈವಾಡವಿದೆ ಎಂದು ಆಕೆಯ ಹೆತ್ತವರು ಶಂಕಿಸಿದ್ದಾರೆ. ಅವರು ಆಸ್ಪತ್ರೆಯಲ್ಲಿ ಮಗಳೊಂದಿಗೆ ಕೆಲಸ ಮಾಡಿದ ಕೆಲವು ಇಂಟರ್ನ್‌ಗಳು ಮತ್ತು ವೈದ್ಯರ ಹೆಸರನ್ನು ಕೂಡ ನೀಡಿದ್ದಾರೆ” ಎಂದು ಸಿಬಿಐ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).
ಆಸ್ಪತ್ರೆ ಮೇಲೆ ದುಷ್ಕರ್ಮಿಗಳ ದಾಂಧಲೆ! ಪೊಲೀಸರೇ ನಮ್ಮನ್ನು ಅಂಗಲಾಚಿ ಬೇಡಿಕೊಂಡ್ರು.. ಅಚ್ಚರಿ ಸಂಗತಿ ಬಿಚ್ಚಿಟ್ಟ ನರ್ಸ್​

1 ಗ್ಲಾಸ್​ ಜ್ಯೂಸ್​… ಒಲಿಂಪಿಕ್ ಫೈನಲ್​ ಹಿಂದಿನ ರಾತ್ರಿ ನಡೆದಿದ್ದೇನು? ಅಚ್ಚರಿ ಮೂಡಿಸುತ್ತೆ ಈ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − sixteen =
Remember me
