ನವದೆಹಲಿ:ಕಳೆದೆರಡು ವರ್ಷಗಳಲ್ಲಿ ಕರೊನಾ ವಾರಿಯರ್ಸ್​ ಎಂಬುದನ್ನು ಬಹಳಷ್ಟು ಕೇಳಿದ್ದೇವೆ. ಅದೇ ರೀತಿ ಇದೀಗ ಎಕ್ಸಾಂ ವಾರಿಯರ್ಸ್​ ಸಮಯ. ವಿಶೇಷವೆಂದರೆ ಈ ಎಕ್ಸಾಂ ವಾರಿಯರ್ಸ್​ಗೆ ಪ್ರಧಾನಿ ನರೇಂದ್ರ ಮೋದಿಯವರೇ ಪಾಠ ಮಾಡಲಿದ್ದಾರೆ.
ಹೌದು.. ಇದು ಪರೀಕ್ಷೆಯ ಸಮಯ ಆಗಿರುವುದರಿಂದ ಪರೀಕ್ಷಾರ್ಥಿಗಳಷ್ಟೇ ಅಲ್ಲದೆ ಅವರ ಪಾಲಕರು ಮತ್ತು ಶಿಕ್ಷಕರು ಕೂಡ ಪರೀಕ್ಷೆ ಕುರಿತ ಒತ್ತಡದಲ್ಲಿರುವುದು ಸಹಜ. ಅಂಥವರಿಗೆಂದೇ ಕೇಂದ್ರ ಸರ್ಕಾರ ಪರೀಕ್ಷಾ ಪೆ ಚರ್ಚಾ 2022 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಏ. 1ರಂದು ದೆಹಲಿಯ ಟಲ್ಕಟೋರಾ ಕ್ರೀಡಾಂಗಣದಲ್ಲಿ ಬೆಳಗ್ಗೆ 11ರಿಂದ ಈ ಪರೀಕ್ಷಾ ಪೆ ಚರ್ಚಾ ನಡೆಯಲಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಜರಿದ್ದು, ಪರೀಕ್ಷಾ ಒತ್ತಡವನ್ನು ಎದುರಿಸುವುದು ಹೇಗೆ ಎಂದು ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರಿಗೆ ತಿಳಿಸಿಕೊಡಲಿದ್ದಾರೆ. ಜತೆಗೆ ಅವರ ಪ್ರಶ್ನೆಗಳಿಗೆ ಉತ್ತರಿಸಿ ಉತ್ತಮ ಎಕ್ಸಾಂ ವಾರಿಯರ್​ ಆಗಿ ಹೊರಹೊಮ್ಮುವುದು ಹೇಗೆ ಎಂಬ ಕುರಿತು ಕೂಡ ಸಲಹೆ ನೀಡಲಿದ್ದಾರೆ. ಇದು ಸಂವಾದ ಅಂದು ದೂರದರ್ಶನದಲ್ಲಿ ನೇರಪ್ರಸಾರ ಕೂಡ ಆಗಲಿದೆ.

ಮೊಬೈಲ್​ಫೋನ್​ ಎತ್ತಿಟ್ಟಿದ್ದಕ್ಕೆ ಮನೆಯನ್ನೇ ಬಿಟ್ಟು ಹೋದ ಎಂಟನೇ ತರಗತಿ ವಿದ್ಯಾರ್ಥಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 14 =
Remember me
