ಅನಂತಪುರ:ಹಿಂದೂಪುರಂ ಎಂಪಿ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಪರಿಪೂರ್ಣಾನಂದ ಸ್ವಾಮಿಗೆ ಕೊನೆಗೂ ನಿರಾಸೆಯಾಗಿದೆ. ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿ ಅಂಗವಾಗಿ ಆ ಸ್ಥಾನ ಟಿಡಿಪಿ ಪಾಲಾಗಿದೆ. ಇದಲ್ಲದೆ, ಬಿಜೆಪಿ ಘೋಷಿಸಿದ ಆರು ಸ್ಥಾನಗಳ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯಾಗದ ಕಾರಣ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ:ದೋಚುತ್ತಾರೆ ಕರೀನಾ, ಟಬು, ಕೃತಿ: ದುಬಾರಿಯಾಯ್ತು ‘ಕಾಮಿಕ್ ಕ್ಯಾಪ್ರ್ ಕ್ರ್ಯೂ’ ಟಿಕೆಟ್​..!
”ಹಿಂದೂಪುರಂನಿಂದ ಸಂಸದ ಅಥವಾ ಶಾಸಕ ಸ್ಥಾನಕ್ಕೆ ಟಿಕೆಟ್ ನೀಡುವಂತೆ ಪುರಂದೇಶ್ವರಿ ಅವರಲ್ಲಿ ಮನವಿ ಮಾಡಿಕೊಂಡಿದ್ದೆ. ಟಿಡಿಪಿ ಮತ್ತು ಜನಸೇನಾ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೊದಲೇ ನಾನು ಹಿಂದೂಪುರಂ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೆ. ಹೀಗಾಗಿಯೇ ವರಿಷ್ಠರ ಬಳಿ ಅಭಿಪ್ರಾಯ ತಿಳಿಸಲು ಬಂದಿದ್ದೇನೆ” ಎಂದರು.
ಬೆಳಗ್ಗೆ ಬಂದವರು ಮಧ್ಯಾಹ್ನ ಅಭ್ಯರ್ಥಿಗಳಾಗುತ್ತಾರಾ? ಎಂದು ಅವರು ಅಸಹನೆ ವ್ಯಕ್ತಪಡಿಸಿದರು. ಮೈತ್ರಿಯಿಂದಾಗಿ ಬಿಜೆಪಿ ಕೂಡ ನಿರ್ಧರಿಸಲಾಗದ ಪರಿಸ್ಥಿತಿಯಲ್ಲಿದೆ ಎಂದರು.
ಹಿಂದೂಪುರಂನಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಬಿಜೆಪಿ ಟಿಕೆಟ್ ನೀಡಿದರೆ ಪಕ್ಷದ ಪರವಾಗಿ ಸಂಸದನಾಗುತ್ತೇನೆ, ಇಲ್ಲದಿದ್ದಲ್ಲಿ ಸ್ವತಂತ್ರವಾಗಿ ಸಂಸದ, ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ ಎಂದು ಪರಿಪೂರ್ಣಾನಂದ ಸ್ವಾಮಿ ಹೇಳಿದರು.
ಏತನ್ಮಧ್ಯೆ, ಟಿಡಿಪಿ ನಾಯಕ ಬಿಕೆ ಪಾರ್ಥಸಾರಿಥಿ ಹಿಂದೂಪುರಂ ಸಂಸತ್ತಿಗೆ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಚಿತ್ರನಟ ಬಾಲಕೃಷ್ಣ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಲಿದ್ದಾರೆ.
ಇದಕ್ಕೂ ಮೊದಲು ಪೆನುಗೊಂಡದಲ್ಲಿ ಪರಿಪೂರ್ಣಾನಂದ ಸ್ವಾಮಿ ಮಾತನಾಡಿ, ಹಿಂದೂಪುರಂನಿಂದ ಏಕೆ ಸ್ಪರ್ಧಿಸಲು ಬಯಸುತ್ತಿದ್ದೇನೆಂದರೆ, ದಕ್ಷಿಣದಲ್ಲಿ ಹಿಂದೂಪುರಂ ಅತ್ಯಂತ ಪ್ರಮುಖ ಸ್ಥಳವಾಗಿದೆ. ‘ಹಿಂದೂಪುರಂ’ಗೆ ಹಿಂದು ಎಂಬ ಹೆಸರಿದ್ದು, ಅಲ್ಲಿಂದ ಸ್ಪರ್ಧಿಸಲು ಬಯಸುವುದಾಗಿ ಹೇಳಿದರು.
ಆರಂಭದಲ್ಲಿ ಬಿಜೆಪಿ ನಾಯಕತ್ವ ತಮಗೆ ಹಿಂದೂಪುರಂ ಎಂಪಿ ಟಿಕೆಟ್ ನೀಡುವುದಾಗಿ ಹೇಳಿದ್ದರೂ, ಮೈತ್ರಿಯ ಭಾಗವಾಗಿ ಕೈ ತಪ್ಪಿದೆ ಎಂದು ಬೇಸರ ವ್ಯಕ್ತಪಡಿಸಿದರು. ಆದರೆ, ಈ ಸ್ಥಾನದಿಂದ ಸ್ವತಂತ್ರವಾಗಿ ಸ್ಪರ್ಧಿಸಲಿದ್ದೇನೆ ಎಂದ ಅವರು, ಈಗಾಗಲೇ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಪಾಕ್​ ರೆಡ್​ಲೈಟ್​ ಏರಿಯಾ ‘ಹೀರಾಮಂಡಿ’ ರಿಯಲ್ ಸ್ಟೋರಿ ಓಟಿಟಿ ಬಿಡುಗಡೆಗೆ ಸಜ್ಜು.. ಯಾವಾಗ ಸ್ಟ್ರೀಮಿಂಗ್​ ಶುರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 8 =
Remember me
