ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಈಗಾಗಲೇ ಎರಡು ಪದಕ ಗೆದ್ದಿರುವ ಭಾರತದ ಯುವ ಶೂಟರ್ ಮನು ಭಾಕರ್ ಹ್ಯಾಟ್ರಿಕ್​ ಸಾಧಿಸುವತ್ತ ಸಾಗಿದ್ದಾರೆ. ಶುಕ್ರವಾರ(ಆಗಸ್ಟ್​​ 2) ನಡೆದ ಮಹಿಳೆಯರ 25 ಮೀಟರ್‌ ಏರ್ ಪಿಸ್ತೂಲ್ ಅರ್ಹತಾ ಸ್ಪರ್ಧೆಯಲ್ಲಿ ಅಗ್ರ ಎರಡನೇ ಸ್ಥಾನ ಪಡೆಯುವ ಮೂಲಕ ಫೈನಲ್​ಗೆ ಅರ್ಹತೆ ಪಡೆದಿದ್ದಾರೆ.
ಇದನ್ನು ಓದಿ:ಪ್ಯಾರಿಸ್​ ಒಲಿಂಪಿಕ್ಸ್: ಕಂಚಿನ ಪದಕ ಗೆದ್ದ ಮನು-ಸರಬ್ಜೋತ್ ಸಿಂಗ್​ಗೆ ‘ನಮೋ‘ ಅಭಿನಂದನೆ
ಒಟ್ಟು 40 ಶೂಟರ್‌ಗಳು ಅರ್ಹತಾ ಸುತ್ತನ್ನು ಪ್ರವೇಶಿಸಿದ್ದಾರೆ. ಮೊದಲ ನಿಖರ ಸುತ್ತಿನಲ್ಲಿ 294 ಅಂಕ ಗಳಿಸಿದ ಮನು ಭಾಕರ್ ಅಗ್ರ ಮೂರನೇ ಸ್ಥಾನ ಪಡೆದರು. ನಂತರ ನಡೆದ ರಾಪಿಡ್ ಸುತ್ತಿನಲ್ಲಿ 269 ಅಂಕ ಗಳಿಸಿ, ಅರ್ಹತಾ ಸ್ಪರ್ಧೆಯಲ್ಲಿ ಒಟ್ಟು 590 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ಈಗ ಮನು ಭಾಕರ್​​​ ಶನಿವಾರ (ಆಗಸ್ಟ್ 3) ನಡೆಯಲಿರುವ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಅಗ್ರ ಮೂರರಲ್ಲಿ ಸ್ಥಾನ ಪಡೆದರೆ ಮನು ಭಾಕರ್​​ ಹ್ಯಾಟ್ರಿಕ್​ ಪದಕದಂತೆ ಭಾರತಕ್ಕೆ ಮತ್ತೊಂದು ಪದಕ ಲಭಿಸಲಿದೆ.
ಈಗಾಗಲೇ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿದ್ದಾರೆ. ಪ್ರಥಮವಾಗಿ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚು ಗೆದ್ದರು. ಈ ಮೊದಲ ಪದಕದ ಗೆಲುವಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕ ಖಾತೆಯೂ ತೆರೆಯಿತು. ಇದಾದ ನಂತರ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಡಬಲ್ಸ್​​ನಲ್ಲಿ ದಕ್ಷಿಣ ಕೊರಿಯಾವನ್ನು16-10 ರಿಂದ ಸೋಲಿಸಿ ಮತ್ತೊಂದು ಪದಕವನ್ನು ಗೆದ್ದರು. ಈ ಮೂಲಕ ಮನು ಭಾಕರ್​​ ಸ್ವಾತಂತ್ರ್ಯದ ನಂತರ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯರು ಎಂಬ ಹೆಗ್ಗಳಿಕೆ ಪಡೆದರು.
ಆಗಸ್ಟ್ 3ರಂದು ನಡೆಯಲಿರುವ ಪಂದ್ಯದಲ್ಲಿ ಮನು ಭಾಕರ್ ಗೆದ್ದರೆ ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟು ಸುಶೀಲ್ ಕುಮಾರ್ ಮತ್ತು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರ ದಾಖಲೆಯನ್ನು ಮುರಿಯಲಿದ್ದಾರೆ. ಒಂದೇ ಒಲಿಂಪಿಕ್ಸ್‌ನಲ್ಲಿ ಮೂರು ಪದಕಗಳನ್ನು ಗೆದ್ದ ಹೆಗ್ಗಳಿಕಗೆ ಪಾತ್ರರಾಗುತ್ತಾರೆ. ಸುಶೀಲ್ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಮತ್ತು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅದೇ ರೀತಿ ಪಿವಿ ಸಿಂಧು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಹಾಗೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. (ಏಜೆನ್ಸೀಸ್​​)
ಶ್ರೀಲಂಕಾ ನೌಕಾಪಡೆ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ಘೋಷಿಸಿದ ಭಾರತದ ಮೀನುಗಾರರು; ಕಾರಣ ಹೀಗಿದೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × two =
Remember me
