ನವದೆಹಲಿ:ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತ ಇದುವರೆಗೆ ಕೇವಲ 2 ಪದಕಗಳನ್ನು ಗಳಿಸಿದೆ.  ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಭಾರತದ ಪಾಲಿಗೆ ಹೊಸ ಭರವಸೆಯ ಕಿರಣವಾಗಿದ್ದಾರೆ. ಮನಿಕಾ ಬಾತ್ರಾ ಅವರಿಂದ ಪದಕ ಬರಬಹುದೆಂಬ ನಿರೀಕ್ಷೆ ಹೆಚ್ಚಿದೆ.
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಣಿಕಾ ಬಾತ್ರಾ ಟೇಬಲ್ ಟೆನಿಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಮಣಿಕಾ ಬಾತ್ರಾ ಒಲಿಂಪಿಕ್ಸ್‌ನಲ್ಲಿ 16 ರ ಸುತ್ತಿಗೆ ತಲುಪಿದ್ದಾರೆ. ಮಣಿಕಾ ಬಾತ್ರಾ ಅವರು ಒಲಿಂಪಿಕ್ಸ್‌ನಲ್ಲಿ 16 ರ ರೌಂಡ್ ಅನ್ನು ತಲುಪಿದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿಯಾಗಿದ್ದಾರೆ.
ಮಣಿಕಾ ಬಾತ್ರಾ ದೆಹಲಿಯಲ್ಲಿ ಜನಿಸಿದರು. ಅವಳು ಚಿಕ್ಕ ವಯಸ್ಸಿನಲ್ಲೇ ಟೇಬಲ್ ಟೆನ್ನಿಸ್ ಆಡಲು ಪ್ರಾರಂಭಿಸಿದಳು. ಟೋಕಿಯೊ ಒಲಿಂಪಿಕ್ಸ್-2020 ರ ಮಹಿಳೆಯರ ಸಿಂಗಲ್ಸ್‌ನಲ್ಲಿ ಮಣಿಕಾ ಬಾತ್ರಾ 32 ರ ಸುತ್ತಿಗೆ ತಲುಪುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಈ ಬಾರಿ ಬಾತ್ರಾ ಮುಂದೆ ಹೋದರು. ಒಲಿಂಪಿಕ್ ಗೇಮ್ಸ್‌ನ ಸಿಂಗಲ್ಸ್ ಪ್ರೀ ಕ್ವಾರ್ಟರ್‌ಫೈನಲ್ ತಲುಪಿದ ಭಾರತದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮನಿಕಾ ಬಾತ್ರಾ ಅತ್ಯಂತ ಸುಂದರ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರು. ಹದಿಹರೆಯದ ವರ್ಷಗಳಲ್ಲಿ ಅನೇಕ ಮಾಡೆಲಿಂಗ್ ಕೊಡುಗೆಗಳನ್ನು ಕಾಣಿಸಿಒಂಡಿದ್ದಾರೆ. ಆದರೆ, ಅವರು ಟೇಬಲ್ ಟೆನ್ನಿಸ್‌ಗಾಗಿ ಮಾಡಲಿಂಗ್​ ಆಫರ್​ಗಳನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
೧೬ ವರ್ಷದವಳಿದ್ದಾಗ, ಸ್ವೀಡನ್‌ನ ಪೀಟರ್ ಕಾರ್ಲ್ಸನ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ವಿದ್ಯಾರ್ಥಿವೇತನವನ್ನು ನಿರಾಕರಿಸಿದಳು. ಟೇಬಲ್ ಟೆನ್ನಿಸ್‌ನತ್ತ ಗಮನಹರಿಸುವ ಮೊದಲು ಅವರು ನವದೆಹಲಿಯ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಒಂದು ವರ್ಷ ಅಧ್ಯಯನ ಮಾಡಿದರು.
ನವದೆಹಲಿಯ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಓದಿದ್ದಾರೆ. ಆದರೆ, ಟೇಬಲ್ ಟೆನ್ನಿಸ್ ವೃತ್ತಿಜೀವನವನ್ನು ಮುಂದುವರಿಸಲು ಅವಳು ತನ್ನ ಮೊದಲ ವರ್ಷದಲ್ಲಿ ಕಾಲೇಜಿನಿಂದ ಹೊರಗುಳಿದಳು. 16 ನೇ ವಯಸ್ಸಿನಲ್ಲಿ ಅವರು ಯುರೋಪ್‌ನ ಸ್ವೀಡನ್‌ನಲ್ಲಿರುವ ಪೀಟರ್ ಕಾರ್ಲ್ಸನ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಿದರು. ನಂತರ ಟೆನ್ನಿಸ್​​ ಆಟದಲ್ಲಿ ತೊಡಗಿಕೊಂಡಿದ್ದ ಮಣಿಕಾ ಅನೆಕ ಪದಕಗಳನ್ನು ಗೆದ್ದು ಕೊಂಡಿದ್ದಾರೆ.
ಬಾತ್ರಾ ಅವರು ೨೦೧೬ ರ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದರು, [೧೨] ಮಹಿಳೆಯರ ಡಬಲ್ಸ್ ಈವೆಂಟ್ ( ಪೂಜಾ ಸಹಸ್ರಬುಧೆ ಅವರೊಂದಿಗೆ), ಮಿಶ್ರ ಡಬಲ್ಸ್ ಈವೆಂಟ್ ( ಆಂಥೋನಿ ಅಮಲ್‌ರಾಜ್ ಅವರೊಂದಿಗೆ) ಮತ್ತು ಮಹಿಳಾ ತಂಡ ಸ್ಪರ್ಧೆಯಲ್ಲಿ (ಮೌಮಾ ದಾಸ್ ಮತ್ತು ಶಾಮಿನಿ ಕುಮರೇಶನ್ ಅವರೊಂದಿಗೆ) ಗೆದ್ದರು. ಬಾತ್ರಾ ಅವರನ್ನು ಮಹಿಳಾ ಸಿಂಗಲ್ಸ್ ಸ್ಪರ್ಧೆಯ ಫೈನಲ್‌ನಲ್ಲಿ ಸೋಲಿಸಿದ ಮೌಮಾ ದಾಸ್ ಅವರು ಕ್ರೀಡಾಕೂಟದಲ್ಲಿ ನಾಲ್ಕನೇ ಚಿನ್ನದ ಪದಕವನ್ನು ನಿರಾಕರಿಸಿದರು. [೧೩] ಅವರು ಏಪ್ರಿಲ್ ೨೦೧೬ ರಲ್ಲಿ ಅರ್ಹತಾ ಪಂದ್ಯಾವಳಿಯ ದಕ್ಷಿಣ ಏಷ್ಯಾದ ಗುಂಪನ್ನು ಗೆಲ್ಲುವ ಮೂಲಕ ೨೦೧೬ ಬೇಸಿಗೆ ಒಲಿಂಪಿಕ್ಸ್‌ನ ಮಹಿಳಾ ಸಿಂಗಲ್ಸ್ ಈವೆಂಟ್‌ಗೆ ಅರ್ಹತೆ ಪಡೆದರು. [೧೪] ಆದಾಗ್ಯೂ, ೨೦೧೬ ರ ಒಲಿಂಪಿಕ್ಸ್‌ನಲ್ಲಿ ಆಕೆಯ ಪ್ರದರ್ಶನವು ಅಲ್ಪಕಾಲಿಕವಾಗಿತ್ತು, ಏಕೆಂದರೆ ಅವರು ಮಹಿಳಾ ವೈಯಕ್ತಿಕ ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಪೋಲೆಂಡ್‌ನ ಕಟರ್ಜಿನಾ ಗ್ರ್ಜಿಬೋವ್ಸ್ಕಾ ವಿರುದ್ಧ ಸೋತರು. ಆದರೆ ಈ ಬಾರಿಯ ಪ್ಯಾರೀಸ್​ ಒಲಿಂಪಿಕ್ಸ್​​ನಲ್ಲಿ ಉನ್ನತ ಶ್ರೇಣಿಯತ್ತ ಸಾಗಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
