ನವದೆಹಲಿ:ಮಾರುಕಟ್ಟೆಯಲ್ಲಿ ಎಷ್ಟೇ ವಿಧದ, ವಿನ್ಯಾಸದ ಬಿಸ್ಕತ್ ಇದ್ರೂ ಪಾರ್ಲೆಜಿಗೆ ಬೇಡಿಕೆ ಕಡಿಮೆಯಾಗಿಲ್ಲ. ಪಾರ್ಲೆ-ಜಿ ಹೊಸ ಆವೃತ್ತಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಚಿತ್ರ ನಿಜವೋ ಅಥವಾ ಫೋಟೋಶಾಪ್ ನಿಂದ ಮಾಡಲ್ಪಟ್ಟಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪಾರ್ಲೆಜಿ ಬಿಸ್ಕೆಟ್ 90 ರ ದಶಕದ ಮಕ್ಕಳ ಫೆವರೇಟ್ . ಪ್ರಸ್ತುತ ಕಾಲಘಟ್ಟದಲ್ಲಿ ತರಹೇವಾರಿ ಬಿಸ್ಕೆಟ್ ಗಳಿದ್ದರೂ ಹೆಚ್ಚಿನವರು ಪಾರ್ಲೆ-ಜಿ ಬಿಸ್ಕೆಟ್ ತಿನ್ನಲು ಇಷ್ಟಪಡುತ್ತಾರೆ. 1929 ರಲ್ಲಿ ಶುರುವಾದ ಈ ಪಾರ್ಲೆ-ಜಿ ಬಿಸ್ಕೆಟ್ ಒಂದೇ ಫ್ಲೇವರ್ ಅಲ್ಲಿ ಮಾತ್ರ ಲಭ್ಯವಿತ್ತು. ಆದರೆ ಇದೀಗ ಚಾಕೊಲೇಟ್ ಫ್ಲೇವರ್ ನ ಡಾರ್ಕ್ ಪಾರ್ಲೆ-ಜಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ ಎಷ್ಟರ ಮಟ್ಟಿಗೆ ಸತ್ಯವಾಗಿದೆ ಎನ್ನುವುದು ತಿಳಿದು ಬಂದಿಲ್ಲ.
Instagram reels Comment sectionpic.twitter.com/Yn14a9vzNp
— Anny🦕 (@annyyyshutup)March 5, 2024

ವೈರಲ್ ಆಗಿರುವ ಫೋಟೋದಲ್ಲಿ “ಡೆಲಿಸಿಯಸ್ ಚಾಕೊಲೇಟಿ ಡಾರ್ಕ್ ಚಾಕೊಲೇಟ್ ಬಿಸ್ಕೆಟ್” ಎಂದು ಬರೆದಿರುವ ಚಾಕೊಲೇಟ್ ಫ್ಲೇವರ್ ನ ಡಾರ್ಕ್ ಪಾರ್ಲೆ-ಜಿ ಬಿಸ್ಕೆಟ್ ಪೊಟ್ಟಣವನ್ನು ಕಾಣಬಹುದು. ಆದರೆ ಪಾರ್ಲೆ-ಜಿ ಯ ಅಧೀಕೃಯ ವೆಬ್ ಸೈಟ್ ಅಲ್ಲಿ ಈ ಡಾರ್ಕ್ ಪಾರ್ಲೆ-ಜಿ ಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ ಸೋಶಿಯಲ್​​ ಮೀಡಿಯಾ ತುಂಬಾ ವೈರಲ್​​ ಆಗುತ್ತಿದೆ.
ಈ ಬಗ್ಗೆ ಯಾವುದೇ ಕಂಪನಿಯಿಂದ ಯಾವುದೇ ಮಾಹಿತಿ ಇಲ್ಲ, ಸುಳ್ಳು ಸುದ್ದಿ, ಇದು ಕೇವಲ AI ರಚಿತ ಫೋಟೋ, ಈ ಬಗ್ಗೆ ಗೂಗಲ್ ನಲ್ಲಿಯೂ ಯಾವುದೇ ಮಾಹಿತಿ ಇಲ್ಲʼ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − five =
Remember me
