ನವದೆಹಲಿ:ಕಳೆದ ಎಂಬತ್ತು ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಕೇವಲ ಮೂರು ತಿಂಗಳಲ್ಲಿ ಸಾಧಿಸಿ ಬೀಗಿದೆ ಈ ಕಂಪನಿ. ಎಲ್ಲರಿಗೂ ಲಾಕ್​ಡೌನ್​ ಅವಧಿ ಸಂಕಷ್ಟದ ಕಾಲವಾಗಿದ್ದರೆ, ಈ ಕಂಪನಿ ಮಾತ್ರ ಭಾರಿ ಲಾಭ ಗಳಿಸಿದೆ.
ಲಾಕ್​ಡೌನ್​ ಅವಧಿಯಲ್ಲಿ ಅಗತ್ಯ ವಸ್ತುಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಂತೆಯೇ ಆಹಾಋ ಉತ್ಪಾದನೆ ಕಾರ್ಖಾನೆಗಳ ಮೇಲೆ ಯಾವುದೇ ನಿರ್ಬಂಧವಿರಲಿಲ್ಲ. ಹೀಗಾಗಿ ಬಿಸ್ಕೆಟ್​ ಉತ್ಪಾದನೆ ಕಾರ್ಖಾನೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದವು. ಈ ಅವಧಿಯಲ್ಲಿ ಭಾರಿ ಬೇಡಿಕೆ ಗಳಿಸಿದ್ದು, ಪಾರ್ಲೆ ಕಂಪನಿ.
ಇದನ್ನೂ ಓದಿ;ಹೊತ್ತಿ ಉರಿಯುತ್ತಿರುವ ತೈಲ ಬಾವಿ ಬೆಂಕಿ ನಂದಿಸಲು ಒಂದು ತಿಂಗಳೇ ಬೇಕು….!
ಈ ಕಂಪನಿಯ ಪಾರ್ಲೆ-ಜಿ ಬಿಸ್ಕೆಟ್​ ಹೊಸ ದಾಖಲೆಯನ್ನೇ ಬರೆದಿದೆ. ಕಂಪನಿ 80 ವರ್ಷಗಳಲ್ಲಿಯೇ ಅತಿ ಹೆಚ್ಚು ಮಾರಾಟವನ್ನು ಲಾಕ್​ಡೌನ್​ ಅವಧಿಯ ಮೂರು ತಿಂಗಳಲ್ಲಿ ಮಾಡಿದೆ. ಒಟ್ಟಾರೆ ಬಿಸ್ಕೆಟ್​ ಮಾರಾಟದಲ್ಲಿ ಶೇ.80-90 ಪಾರ್ಲೆ-ಜಿ ಪಾಲು ಹೊಂದಿದೆ.
ಕೆಜಿಗೆ 100 ರೂ. ಆಸುಪಾಸಿನ ಬೆಲೆ ಹೊಮದಿರುವ ಪಾರ್ಲೆ-ಜಿ ಜನಸಾಮಾನ್ಯರ ಬಿಸ್ಕೆಟ್​ ಎಂದೇ ಹೆಸರಾಗಿದೆ. ಲಾಕ್​ಡೌನ್​ ಅವಧಿಯಲ್ಲಿ ಊಟಕ್ಕೆ ಪರದಾಡಿದವರು ಈ ಬಿಸ್ಕೆಟ್​ ತಂದೇ ಕಾಲ ಕಳೆದಿದ್ದಾರೆ. ಹಲವು ರಾಜ್ಯ ಸರ್ಕಾರಗಳು ಕೂಡ ಬೇಡಿಕೆ ಸಲ್ಲಿಸಿದ್ದವು. ಕೆಲ ಸರ್ಕಾರೇತರ ಸಂಸ್ಥೆಗಳು ಕೂಡ ದೊಡ್ಡ ಪ್ರಮಾಣದಲ್ಲಿ ಈ ಬಿಸ್ಕೆಟ್​ ಖರೀದಿಸಿವೆ ಎಂದು ಪಾರ್ಲೆ ಉತ್ಪನ್ನಗಳ ವರ್ಗೀಕರಣ ಮುಖ್ಯಸ್ಥ ಮಯಾಂಕ್​ ಷಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;ಕರೊನಾದಿಂದ ಕಾಪಾಡುತ್ತಿರುವ ಔಷಧಗಳಿವು; ಬೆಲೆ ಕೇಳಿದರೆ ತಲೆ ತಿರುಗುತ್ತೆ…!
ದೇಶದ 130 ಕಡೆಗಳಲ್ಲಿ ಪಾರ್ಲೆ ಉತ್ಪಾದನಾ ಘಟಕಗಳನ್ನು ಹೊಂದಿದೆ. ಅದರಲ್ಲಿ ಸ್ಥಳಗಳಲ್ಲಿ ಸ್ವಂತ ಕಾರ್ಖಾನೆಗಳಿವೆ. ಲಾಕ್​ಡೌನ್​ ಅವಧಿಯಲ್ಲಿ ಬಿಸ್ಕೆಟ್​ ಪೂರೈಕೆಗಾಗಿ ವಿತರಣಾ ಜಾಲವನ್ನು ಕೇವಲ ಏಳು ದಿನಗಳಲ್ಲಿ ಸಂಪೂರ್ಣವಾಗಿ ಪರಿಷ್ಕರಿಸಿತ್ತು.
ಹುಟ್ಟುಹಬ್ಬದಂದೇ ಕರೊನಾಗೆ ಬಲಿಯಾದ ಶಾಸಕ; ಜನಪ್ರತಿನಿಧಿ ಸಾವಿನ ಮೊದಲ ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
