ನವದೆಹಲಿ: ಬಿಸ್ಕೆಟ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಒಂದು ಕಪ್​ ಬಿಸಿ ಬಿಸಿ ಚಾಯ್​ ಜತೆ ಎರಡು ಬಿಸ್ಕೆಟ್​ ಇದ್ದರೆ ಆ ಮಜವೇ ಬೇರೆ ಎನ್ನುತ್ತಾರೆ ಬಿಸ್ಕೆಟ್​ ಪ್ರಿಯರು. ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್​ನ ಬಿಸ್ಕೆಟ್​ಗಳು ಸಿಗುತ್ತವೆ. ಆದರೆ ಪಾರ್ಲೆಜಿ ನೀಡುವ ಟೆಸ್ಟ್​​ ಮತ್ಯಾವ ಬಿಸ್ಕೆಟ್​ ನೀಡಲು ಸಾಧ್ಯವಿಲ್ಲ ಎನ್ನವಷ್ಟು ಪಾರ್ಲೆಜಿ ಬ್ರ್ಯಾಂಡ್​ಗೆ ಪ್ರಿಯರಿದ್ದಾರೆ. ಬನ್ನಿ ಇಂದು ಪಾರ್ಲೆಜಿ ಹೊಸದೊಂದು ವಿಚಾರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ವಿಶ್ವದ ನಂಬರ್ ಒನ್ ಬಿಸ್ಕತ್ ಬ್ರ್ಯಾಂಡ್ ಪಾರ್ಲೆ ಜಿ,ಪ್ಯಾಕೆಟ್ ಮೇಲಿರುವ ಬಾಲಕಿ ಯಾರು ತಾನೆ ಮರೆಯಲು ಸಾಧ್ಯ. ಆದರೆ, ಮೊನ್ನೆ ಮೊನ್ನೆ ಪಾರ್ಲೆ ಜಿ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್​ವೊಂದರಲ್ಲಿ ಬಿಸ್ಕತ್ ಪ್ಯಾಕೆಟ್​ನಲ್ಲಿ ಪಾರ್ಲೆ ಜಿ ಹೆಸರು ಮತ್ತು ಹುಡುಗಿಯ ಫೋಟೋ ಬದಲಿಸಿ ಅಚ್ಚರಿ ಮೂಡಿಸಿದೆ.ಕಾಮಿಡಿಯನ್ ಝೆರ್ವಾನ್ ಎನ್ ಬುನ್​ಶಾ ಅವರ ಹೆಸರಿರುವ ಬಿಸ್ಕತ್ ಪ್ಯಾಕೆಟ್​ನ ಫೋಟೋವನ್ನು ಇನ್ಸ್​ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿತು. ಪಾರ್ಲೆ ಬುನ್​ಶಾ ಜಿ ಬಿಸ್ಕತ್ ಪ್ಯಾಕೆಟ್​ನ ಫೋಟೋ ಅದಾಗಿತ್ತು.
A post shared by Zervaan J Bunshah (@bunshah)
ಸೋಷಿಯಲ್ ಮೀಡಿಯಾ ಇನ್​ಫ್ಲುಯನ್ಸ್ ಆಗಿರುವ ಝೆರ್ವಾನ್ ಎನ್ ಬುನ್​ಶಾ ಅವರ ಒಂದು ಪೋಸ್ಟ್.  ಅನಿಲ್ ಕಪೂರ್ ಅವರ ‘ಏ ಜಿ, ಓ ಜೀ..’ ಅನ್ನೂ ಹಾಡಿನ ಹಿನ್ನೆಲೆಯ ಸಂಗೀತದಲ್ಲಿ ಬುನ್​ಶಾ ಅವರ ವಿಡಿಯೋ ಅದು. ‘ನೀವು ಪಾರ್ಲೆ ಮಾಲೀಕರನ್ನು ಭೇಟಿ ಮಾಡಿದಾಗ ಏನಂತ ಕರೆಯುತ್ತೀರಿ? ಪಾರ್ಲೆ ಸರ್ ಎಂತಲೋ, ಮಿಸ್ಟರ್ ಪಾರ್ಲೆ ಅಂತಲೋ ಅಥವಾ ಪಾರ್ಲೆ ಜಿ ಅಂತಲೋ?’ ಎಂದಿತ್ತು ಸ್ವತಃ ಪಾರ್ಲೆ ಜಿ ಸಂಸ್ಥೆ ಕೂಡ ಈ ಪೋಸ್ಟ್​ಗೆ ಉತ್ತರಿಸಿ, ತಮ್ಮನ್ನು ಒಜಿ ಎಂದು ಕರೆಯಬಹುದು ಎಂದಿತ್ತು. ಒಜಿ ಎಂದರೆ ಒರಿಜಿನೇಟರ್. ಆದರೆ, ಮೂಲ ತಯಾರಕರು.
ಪಾರ್ಲೆ, ನಿನ್ನೆ (ಡಿ. 28) ಬುನ್​ಶಾ ಜಿ ಎಂದು ಬರೆದಿರುವ ಬಿಸ್ಕತ್ ಪ್ಯಾಕೆಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತು. ‘ಪಾರ್ಲೆ ಜಿ ಮಾಲೀಕರನ್ನು ಏನೆಂದು ಕರೆಯಬೇಕೆಂದು ಯೋಚಿಸುತ್ತಿರುವಾಗ, ಒಂದು ಕಪ್ ಚಾಯ್ ಜೊತೆ ಆನಂದಿಸುವ ನೆಚ್ಚಿನ ಬಿಸ್ಕತ್ ಎಂದು ನೀವು ಕರೆಯಬಹುದು,’ ಎಂದು ಡಿಸ್ಕ್ರಿಪ್ಷನ್​ನಲ್ಲಿ ಬರೆದಿದೆ. ಈ ಪೋಸ್ಟ್ ಕೂಡ ವೈರಲ್ ಆಗಿದ್ದು ಬುನ್​ಶಾ ಕೂಡ ಪ್ರತಿಕ್ರಿಯಿಸಿದ್ದಾರೆ.
180ಕ್ಕೂ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ ಪುರುಷ! ಆದ್ರು ಈತ ಒಂಟಿ; ಇಂಟ್ರಸ್ಟಿಂಗ್​​ ಮಾಹಿತಿಗೆ ಈ ಸ್ಟೋರಿ ಓದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
