ನವದೆಹಲಿ:ನಾವು ಬಾಲ್ಯದಿಂದಲೂ ‘ಗರೀಬಿ ಹಠಾವೋ’ ಘೋಷಣೆಯನ್ನು ಕೇಳಿದ್ದೇವೆ. ಆದರೆ, ಇಂದು ನಮ್ಮ ಜೀವನದಲ್ಲಿ ಮೊದಲ ಬಾರಿಗೆ ಬಡತನವನ್ನು ನಿವಾರಿಸುವುದನ್ನು ದೊಡ್ಡ ಪ್ರಮಾಣದಲ್ಲಿ ನಾವು ಕಾಣುತ್ತಿದ್ದೇವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ಕೊಂಡಾಡಿದರು.
ನಾಳೆ ಕೇಂದ್ರ ಮಧ್ಯಂತರ ಬಜೆಟ್​ ಹಿನ್ನೆಲೆಯಲ್ಲಿ ಇಂದಿನಿಂದ ಬಜೆಟ್​ ಅಧಿವೇಶನ ಆರಂಭವಾಗಿದ್ದು, ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಿದರು.
ಹೊಸ ಸಂಸತ್ ಕಟ್ಟಡದಲ್ಲಿ ಇದು ನನ್ನ ಮೊದಲ ಭಾಷಣ. ಅಮೃತ ಕಾಲದ ಆರಂಭದಲ್ಲಿ ಈ ಭವ್ಯ ಕಟ್ಟಡವನ್ನು ನಿರ್ಮಿಸಲಾಗಿದೆ. ಇದು ‘ಏಕ್ ಭಾರತ್, ಶ್ರೇಷ್ಠ್ ಭಾರತ್’ ಎಂಬ ಪರಿಮಳವನ್ನು ಹೊಂದಿದೆ. ಇದು ಪ್ರಜಾಪ್ರಭುತ್ವ ಮತ್ತು ಸಂಸದೀಯ ಸಂಪ್ರದಾಯಗಳನ್ನು ಗೌರವಿಸುವ ಸಂಕಲ್ಪವನ್ನೂ ಹೊಂದಿದೆ. ಇದಲ್ಲದೆ, 21 ನೇ ಶತಮಾನದ ಹೊಸ ಭಾರತದ ಹೊಸ ಸಂಪ್ರದಾಯಗಳನ್ನು ನಿರ್ಮಿಸುವ ಸಂಕಲ್ಪವನ್ನು ಸಹ ಹೊಂದಿದೆ. ಈ ಹೊಸ ಕಟ್ಟಡದಲ್ಲಿ ನೀತಿಗಳ ಬಗ್ಗೆ ಅರ್ಥಪೂರ್ಣ ಸಂಭಾಷಣೆ ನಡೆಯಲಿದೆ ಎಂದು ನನಗೆ ವಿಶ್ವಾಸವಿದೆ ಎಂದರು.
ಕಳೆದ ವರ್ಷ ಭಾರತವು ಅನೇಕ ಸಾಧನೆಗಳನ್ನು ಮಾಡಿದೆ ಮತ್ತು ಅನೇಕ ಯಶಸ್ಸುಗಳು ದಕ್ಕಿವೆ. ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಯಿತು. ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರವಾಯಿತು. ಭಾರತವು ಆಯೋಜಿಸಿದ ಯಶಸ್ವಿ G20 ಶೃಂಗಸಭೆಯು ವಿಶ್ವದಲ್ಲಿ ಭಾರತದ ಪಾತ್ರವನ್ನು ಮತ್ತಷ್ಟು ಬಲಪಡಿಸಿತು. ಭಾರತವು ಏಷ್ಯನ್ ಗೇಮ್ಸ್‌ನಲ್ಲಿ 100ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದೆ. ಭಾರತವೂ ಅಟಲ್ ಸುರಂಗವನ್ನು ಪಡೆದುಕೊಂಡಿದೆ ಎನ್ನುವ ಮೂಲಕ ಸರ್ಕಾರದ ಸಾಧನೆಗಳನ್ನು ಮುರ್ಮು ಪಟ್ಟಿ ಮಾಡಿದರು.
ಇಂದು ನಾವು ಕಾಣುತ್ತಿರುವ ಸಾಧನೆಗಳು ಕಳೆದ 10 ವರ್ಷಗಳ ಶ್ರಮದ ಪ್ರತಿಫಲವಾಗಿದೆ. ನಾವು ಬಾಲ್ಯದಿಂದಲೂ ‘ಗರೀಬಿ ಹಠಾವೋ’ ಘೋಷಣೆಯನ್ನು ಕೇಳಿದ್ದೇವೆ, ಇಂದು ನಮ್ಮ ಜೀವನದಲ್ಲಿ ಮೊದಲ ಬಾರಿಗೆ ಬಡತನವನ್ನು ನಿವಾರಿಸುವುದನ್ನು ದೊಡ್ಡ ಪ್ರಮಾಣದಲ್ಲಿ ನಾವು ನೋಡುತ್ತಿದ್ದೇವೆ. ಇಂದು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ನಮ್ಮ ಶಕ್ತಿಯಾಗಿವೆ. ರಕ್ಷಣಾ ಉತ್ಪಾದನೆಯು 1 ಲಕ್ಷ ಕೋಟಿ ರು. ಗಡಿ ದಾಟಿದೆ ಎಂದು ರಾಷ್ಟ್ರಪತಿಗಳು ಶ್ಲಾಘಿಸಿದರು.
ದೇಶದ ಜನರು ದಶಕಗಳಿಂದ ಕಾಯುತ್ತಿದ್ದ ರಾಷ್ಟ್ರೀಯ ಹಿತಾಸಕ್ತಿಯ ಹಲವಾರು ಕಾರ್ಯಗಳನ್ನು ಕಳೆದ 10 ವರ್ಷಗಳಲ್ಲಿ ಭಾರತವು ಪೂರ್ಣಗೊಳಿಸಿದೆ. ರಾಮಮಂದಿರ ನಿರ್ಮಾಣಕ್ಕೆ ಶತಮಾನಗಳಿಂದಲೂ ಕಾಯಲಾಗಿತ್ತು. ಇಂದು ಇದು ವಾಸ್ತವವಾಗಿದೆ. ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದತಿ ಈಗ ಇತಿಹಾಸವಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ಭವ್ಯ ಸೌಧವು ಯುವ ಶಕ್ತಿ, ಮಹಿಳಾ ಶಕ್ತಿ, ರೈತರು ಮತ್ತು ಬಡವರು ಎಂಬ ನಾಲ್ಕು ಬಲವಾದ ಸ್ತಂಭಗಳ ಮೇಲೆ ನಿಲ್ಲುತ್ತದೆ ಎಂದು ನನ್ನ ಸರ್ಕಾರ ನಂಬುತ್ತದೆ ಎಂದರು.
ಕಳೆದ ವರ್ಷಗಳಲ್ಲಿ ಜಗತ್ತು ಎರಡು ಪ್ರಮುಖ ಯುದ್ಧಗಳಿಗೆ ಸಾಕ್ಷಿಯಾಯಿತು. ಕರೊನಾ ಸಾಂಕ್ರಾಮಿಕವನ್ನು ಸಮರ್ಥವಾಗಿ ಎದುರಿಸಿತು. ಜಾಗತಿಕ ಬಿಕ್ಕಟ್ಟುಗಳ ಹೊರತಾಗಿಯೂ, ನನ್ನ ಸರ್ಕಾರವು ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇರಿಸಿದೆ ಮತ್ತು ಸಾಮಾನ್ಯ ಭಾರತೀಯರ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸಲು ಬಿಡಲಿಲ್ಲ ಎಂದು ಸರ್ಕಾರವನ್ನು ಹೊಗಳಿದರು.(ಏಜೆನ್ಸೀಸ್​)
ಸಂಸತ್ತಿನ ಬಜೆಟ್ ಅಧಿವೇಶನ: ವಿಪಕ್ಷಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

ಲೋಕಸಭಾ ಚುನಾವಣೆ 2024: ಬೊಮ್ಮಾಯಿ ಸ್ಪರ್ಧೆ ಫಿಕ್ಸಾ? ಯಾರಿಗೆ ‘ಕೈ’ ಟಿಕೆಟ್​? ಯಾರೆಲ್ಲ ಆಕಾಂಕ್ಷಿಗಳಿದ್ದಾರೆ?

ಐ ಆಮ್​ ನಾಟ್​ ಎ ಪರ್ಫೆಕ್ಟ್​..ಹೇಗಿದ್ದೇನೆಯೋ ಹಾಗೆಯೇ ನನ್ನನ್ನು ಸ್ವೀಕರಿಸಿದ್ರಿ: ಕಿಚ್ಚ ಸುದೀಪ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + seventeen =
Remember me
